ಆಧಾರ್: ಸುಪ್ರೀಂ ಆದೇಶ ಪಾಲಿಸಲು ಎಬಿವಿಪಿ ಒತ್ತಾಯ
ತುಮಕೂರು: ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವಂತೆ ಒತ್ತಾಯಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಕೆಲ ವರ್ಷಗಳಿಂದ ಚರ್ಚಿತವಾಗುತ್ತಿರುವ ಆಧಾರ್ ಕಾರ್ಡ್ ಅನ್ನು ಅಕ್ರಮವಾಗಿ ವಿದೇಶಿಯರಿಗೂ ಅಂದರೆ ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನಕ್ಕೆ ಸೇರಿದ ವಲಸಿಗರಿಗೆ ನೀಡಿರುವ ಬಗ್ಗೆ ದೇಶದ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ವಿಪರೀತವಾಗಿ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಪಡೆಯಲು ದೇಶದ ದೆಹಲಿ, ಕೋಲ್ಕತಾ, ಅಸ್ಸಾಂ, ಬೆಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಕಂಡು ಬಂದಿರುವಂತೆ ಭಾರತದವರೆಂದು ಹೇಳಿಕೊಳ್ಳಲು ಯಾವುದೇ ಆಧಾರಗಳನ್ನು ಒದಗಿಸದೆ ಬರೀ ಫೋಟೋವನ್ನು ನೀಡಿ ರು. 500ರಿಂದ ರು. 5000 ಗಳವರೆಗೆ ಲಂಚ ಕೊಟ್ಟು ಆಧಾರ್ ಕಾರ್ಡ್, ನಂಬರ್ ಪಡೆದಿರುವ ಬೇಕಾದಷ್ಟು ಉದಾಹರಣೆಗಳು ಲಭ್ಯವಾಗಿವೆ. ಹೀಗಾಗಿ ಕೂಡಲೇ ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸುವಂತೆ ಎಬಿವಿಪಿ ಒತ್ತಾಯಿಸಿದೆ.
ಎಬಿವಿಪಿ ತುಮಕೂರು ಶಾಖಾವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸಹಕಾರ್ಯದರ್ಶಿ ಅಮರೇಶ್, ಜಿಲ್ಲಾ ಸಹ ಸಂಚಾಲಕ ರವಿಕುಮಾರ್ , ಕಾರ್ಯಕರ್ತರಾದ ವಿಕಾಸ್, ವೆಂಕಟೇಶ್ , ನಟರಾಜ್ ಮುಂತಾದವರು ಮನವಿಪತ್ರವನ್ನು ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

