ಹಲೋ, ಹಲೋ... ಹಲೋ...ಮಾತಾಡೋದೇ ಕೇಳಿಸ್ತಾ ಇಲ್ವಲ್ಲಪ್ಪಾ...
ತುರುವೇಕೆರೆ: ಹಲೋ, ಹಲೋ.., ಹಲೋ...ಯಾರು ಮಾತಾಡ್ತಾ ಇರೋದು, ಯಾರ್ರೀ ಮಾತಾಡ್ತಾ ಇರೋದು, ಸ್ವಲ್ಪ ಜೋರಾಗಿ ಮಾತಾಡ್ರೀ....ನೀವೇನು ಮಾತಾಡ್ತಾ ಇದೀರಾ ಅನ್ನೋದು ನಂಗೆ ಕೇಳ್ತಾ ಇಲ್ಲ. ಹಲೋ, ಹಲೋ...ಹಲೋ....
ಇದು ತಾಲೂಕಿನ ಬಹುತೇಕ ಮೊಬೈಲ್ ಗ್ರಾಹಕರು ಕಳೆದ ಹತ್ತಾರು ದಿನಗಳಿಂದ ತನ್ನೊಂದಿಗೆ ಮಾತನಾಡುತ್ತಿರುವವರೊಂದಿಗೆ ಹೇಳುವ ಸಾಮಾನ್ಯ ಮಾತಾಗಿದೆ. ಇಲ್ಲಿಯ ಹಲವು ಮೊಬೈಲ್ ಕಂಪನಿಗಳು ತಮ್ಮ ಟವರ್ಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಂಪರ್ಕ ಸಿಗುವುದೂ ಅನುಮಾನ, ಸಿಕ್ಕರೂ ಏಕಮುಖವಾಗಿ ಧ್ವನಿ ಕೇಳುತ್ತಿದೆ. ಅಲ್ಲದೇ ಮಾತನಾಡುವ ಕೆಲವೇ ಕ್ಷಣಗಳಲ್ಲಿ ಕರೆ ಸಂಪರ್ಕ ತಂತಾನೇ ಕಡಿದುಕೊಳ್ಳುತ್ತದೆ. ಇತ್ತ ಗ್ರಾಹಕರ ಹಣವೂ ಪೋಲು, ಅತ್ತ ತನ್ನೊಂದಿಗೆ ಮಾತನಾಡಿದ ವ್ಯಕ್ತಿಯಿಂದ ಸೂಕ್ತ ಮಾಹಿತಿ ದೊರೆಯದೇ ಪರದಾಡುವುದು ಸಾಮಾನ್ಯವಾಗಿದೆ. ಬಿಎಸ್ಎನ್ಎಲ್, ರಿಲಿಯನ್ಸ್, ಐಡಿಯಾ, ಏರ್ ಟೆಲ್, ಒಡಾ, ....ಹೀಗೆ ಹಲವಾರು ಕಂಪನಿಗಳ ಮೊಬೈಲ್ ಸಂಪರ್ಕಗಳು ಸಮರ್ಪಕವಾಗಿ ಸಿಗದೇ ಗ್ರಾಹಕರು ಪರದಾಡುವಂತಾಗಿದೆ.
ದಿನೇ ದಿನೇ ಗ್ರಾಹಕರು ಬೆಳೆಯುತ್ತಲೇ ಇದ್ದಾರೆ, ಗ್ರಾಹಕರ ಬೇಡಿಕೆ ಹೆಚ್ಚಿದಂತೆಲ್ಲಾ ಸೌಲಭ್ಯಗಳನ್ನು ನೀಡಬೇಕಾದ ಕಂಪನಿಗಳು ಜವಾಬ್ದಾರಿಯಿಂದ ನುಳುಚಿಕೊಳ್ಳುತ್ತಿವೆ. ವಿದ್ಯುತ್ ಸಮಸ್ಯೆ ಅತಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ತಕ್ಷಣವೇ ಮೊಬೈಲ್ಗಳ ಸಂಪರ್ಕವೂ ತೊಂದರೆಕೊಡಲು ಶುರು ಮಾಡುತ್ತವೆ. ಗ್ರಾಹಕರ ಹಣವೂ ನಷ್ಟ, ಇತ್ತ ಸಂಪರ್ಕವೂ ಸಿಗದೇ ಮುಖ್ಯ ವಿಷಯಗಳು ವಿನಿಮಯವಾಗದೇ ಗ್ರಾಹಕರು ಸಂಕಟ ಪಡುತ್ತಿದ್ದಾರೆ. ಈಗಾಲಾದರೂ ಸಂಬಂಧಿಸಿದ ಮೊಬೈಲ್ ಕಂಪನಿಗಳು ತಮ್ಮ ಗ್ರಾಹಕರಿಗೆ ಸೂಕ್ತ ಸೌಲಭ್ಯ ಒದಗಿಸುವರೇ ಎಂದು ತಾಲೂಕಿನ ಸಾವಿರಾರು ಗ್ರಾಹಕರು ಕಾದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

