ಚಿತ್ರಕಲಾವಿದನ ಪಾತ್ರ ಹಿರಿದು
ತುಮಕೂರು: ಇಂದಿನ ಸಮಾಜಕ್ಕೆ ಮಾನವನ ಇತಿಹಾಸ ತಿಳಿಯಬೇಕಾದರೆ ಹಾಗೂ ರಾಮಾಯಣ, ಮಹಾಭಾರತ ಹೀಗೆ ಇತ್ತು ಎಂದು ತಿಳಿಸುವುದಕ್ಕೆ ದೃಷ್ಯ ರೂಪದಲ್ಲಿ ಚಿತ್ರಿಸಿ ಮುಂದಿನ ಪೀಳಿಗೆಗೆ ರವಾನಿಸುವ ಕೆಲಸವನ್ನು ಚಿತ್ರಕಲಾವಿದ ಕಟ್ಟಿಕೊಡಲು ಸಾಧ್ಯವೆಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ತಿಳಿಸಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಲ್ಸ್ ಗ್ರೂಪ್ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕಲಾವಿದ ಕಲಾಕೃತಿ ರಚಿಸಿದರೆ ಸಾಲದು ಸುಂದರ ಸಮಾಜದ ಸ್ವಾಸ್ತ ಚಿತ್ರ ಬಿಡಿಸುವಲ್ಲಿಯೂ ತನ್ನಲ್ಲಿರುವ ಆಲೋಚನೆ ಅಭಿಪ್ರಾಯಗಳನ್ನು ಜನಸಮುದಾಯದಲ್ಲಿ ಬಿತ್ತುವ ಮೂಲಕ ಸುಸ್ತಿರ ಸಮಾಜವನ್ನು ನಿರ್ಮಾಣ ಮಾಡುವಲ್ಲಿಯೂ ತನ್ನ ಜವಾಬ್ದಾರಿ ಅರಿಯಬೇಕೆಂದೂ ಕಲಾವಿದರಿಗೆ ಕಿವಿಮಾತು ಹೇಳಿದರು.
ಇಂದಿನ ಸಮಾಜಕ್ಕೆ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವ ಯಾವುದೇ ಕಲಾವಿದನ ಬದುಕು ದುಸ್ತರವಾಗಿದ್ದು, ಬಹುಪಾಲು ಜನ ಹಣದ ಹಿಂದೆ ಬಿದ್ದಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ವಿಫಲರಾಗುತ್ತಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಕಲಾಚಿಂತನೆಗಳು, ಹಾಗೂ ಕಲಾವಿದರಿಗೆ ಸೌಕರ್ಯಗಳು ಸಿಗಬೇಕಾಗಿರುವುದು ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಸಾಂಸ್ಕೃತಿಕವಾಗಿ ಯಾವ ಸಮಾಜ ಬೆಳೆಯುತ್ತದೆ ಅಲ್ಲಿ ನಾಗರಿಕತೆ ಹೆಚ್ಚು ಫಲ ಕೊಡುತ್ತದೆ. ಹಾಗಾಗಿ ಚಿತ್ರಕಲೆ ಮತ್ತು ರಂಗಭೂಮಿ ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ. ಲಲಿತ ಕಲೆಗಳೆಲ್ಲವೂ ಒಂದೇ ದೇಹದ ಬೇರೆ ಬೇರೆ ಅಂಗಾಂಗಳಿದ್ದಂತೆ. ರಂಗಭೂಮಿಗೆ ಕಿನ್ನಾಳ ಕಲೆ, ಟೆರ್ರಾಕೋಟ, ಮೇಕಪ್, ರಂಗಸಜ್ಜಿಗೆ, ಹಿನ್ನೆಲೆ, ಆಭರಣ, ವೇಷಭೂಷಣ, ಮುಂತಾದ ಎಲ್ಲವೂ ಚಿತ್ರಕಲಾವಿದನಿಂದ ರಂಗಭೂಮಿಗೆ ಸಿಗುವ ಕೊಡುಗೆಗಳಾಗಿವೆ ಎಂದು ಚಿತ್ರಕಲೆ ಮತ್ತು ರಂಗಭೂಮಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ರಂಗತಜ್ಞ ತುಮಕೂರು ಶಿವಕುಮಾರ್ ತಿಳಿಸಿದರು. ಚಿತ್ರಕಲಾ ಕ್ಷೇತ್ರಕ್ಕೆ ತನ್ನದೇ ಸೇವೆ ಸಲ್ಲಿಸುತ್ತಿರುವ ಕಲರ್ಸ್ ಗ್ರೂಪ್, ಕಲಾಶಿಬಿರ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣ, ಪ್ರದರ್ಶನ, ಸ್ಪರ್ಧೆ, ಮುಂತಾದ ಚಟುವಟಿಕೆಗಳನ್ನು ಸತತ 15 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಕಲರ್ಸ್ ಗ್ರೂಪ್ ಕಾರ್ಯಸಾಧನೆಯ ಹಿಂದೆ ಸಹಕರಿಸಿದ ಸಂಘ ಸಂಸ್ಥೆಗಳು, ಇಲಾಖೆ, ಹಾಗೂ ವ್ಯಕ್ತಿಗಳಿಗೆ ಕಲಾವಿದ ಕೋಟೆ ಕುಮಾರ್ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಭೂಮಿ ಬಳಗದ ಅಧ್ಯಕ್ಷ ಜಿ.ಎಸ್. ಸೋಮಣ್ಣ ಮಾತನಾಡಿ, 400 ವರ್ಷಗಳಿಂದಲೂ ಲಿಯಾನಾರ್ಡೊ ಡಾವೆಂಚಿಯ ಮನೋಲಿಸಾ ಚಿತ್ರ ಸಾವಿರಾರು ಅಧ್ಯಯನಕ್ಕೆ ಒಳಪಟ್ಟಿದ್ದು ಇಂದಿಗೂ ಸಿಕ್ಕಿರುವ ಒಂದು ತಲೆಬುರುಡೆ ಅದು ಮನೋಲಿಸಾಳದೇ ಎಂದು ಅಧ್ಯಯನ ಮಾಡುತ್ತಿದ್ದಾರೆ. ಹೀಗೆ ಒಂದು ಕಲಾಕೃತಿ ಕಾಲತೀತವಾಗಿ ನಿಲ್ಲಬಲ್ಲದು ಎಂದು ವಿಮರ್ಶಿಸಿದರು. ರಂಗನಿರ್ದೇಶಕ ಆರ್. ಶಾಂತಮೂರ್ತಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವೈ. ಕುಮಾರ್, ಶಿವಶಂಕರ್ ಹಾಗೂ ರಂಗಸುಗ್ಗಿ ಟ್ರಸ್ಟ್ನ ರೂಪಾಶಿವಕುಮಾರ್, ಕಲರ್ರ್ಸ್ ಗ್ರೂಪ್ಸ್ನ ಶೋಭಾಶಾಂತಮೂರ್ತಿ, ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಪ್ರಭು ಹರಸೂರ್ ಉಪಸ್ಥಿತರಿದ್ದರು. ಈ ಕಲಾ ಶಿಬಿರ ಮತ್ತು ವಿಚಾರ ಸಂಕಿರಣ ಹಾಗೂ ಶಿಬಿರದಲ್ಲಿ ಭಾಗವಹಿಸುವ ರಾಜ್ಯದ ಕಲಾವಿದರಾದ ಪ್ರಭುಹರಸೂರ್, ಕೋಟೆಕುಮಾರ್ ತುಮಕೂರು, ಶಿವಕುಮಾರ್ ಕೆಸರಮಡು ಮೈಸೂರು, ಅಪ್ಪಸಾಹೇಬ್ ಎಲ್. ಗಾಣಿಗೇರ್ ಬೆಳಗಾಂವ್, ಮನುಚಕ್ರವರ್ತಿ ತುಮಕೂರು, ಟಿ.ಎಚ್. ರವಿ ತುಮಕೂರು, ಮಂಜುನಾಥ ಹೊನ್ನಾಪುರ ಬರೋಡ ಗುಜರಾತ್, ಅಚ್ಚುತನ್ ಡಿ.ಕೆ. ದಾವಣಗೆರೆ, ಅಕ್ರಮ ಪಾಷ ಎಫ್.ಎಂ. ತುಮಕೂರು, ಆನಂದ್ ಎಸ್.ವಿ. ಹುಲಿಯೂರುದುರ್ಗ, ರವಿಕುಮಾರ್ ಡಿ.ಬಿ. ಬೆಂಗಳೂರು ಗ್ರಾಮಾಂತರ, ಆದೇಶ್ ರಾಯಚೂರ್, ಆರ್. ಶಾಂತಮೂರ್ತಿ ತುಮಕೂರು ಭಾಗವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

