ತುಮಕೂರು

ಮಧುಗಿರಿಗೆ ಕೇರಳ ವಿಶೇಷ ಪೊಲೀಸ್ ಪಡೆ

Published On :

ಮಧುಗಿರಿ: ತುಮಕೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ ಕೈಗೊಂಡಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ಮಾಡಲು ಮತದಾರರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಕೇರಳ  ರಾಜ್ಯದ ವಿಶೇಷ ಪೊಲೀಸ್ ಪಡೆ ಮಧುಗಿರಿಗೆ ಆಗಮಿಸಿ ಪಟ್ಟಣದಲ್ಲಿ  ಪಥ ಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದಿದೆ.
ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆ ಗದ್ದಲ ನಡೆಯಬಾರದು, ಮತದಾರ ಪ್ರಭುಗಳು ಮುಕ್ತ, ನ್ಯಾಯ ಸಮ್ಮತ ಮತದಾನ ಮಾಡಬೇಕು ಎಂಬ ದೃಷ್ಟಿಯಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದ್ದು ಜನರಲ್ಲಿ ಪ್ರೀತಿ, ವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಮಧುಗಿರಿ ಪಟ್ಟಣಕ್ಕೆ 100 ಮಂದಿ ಒಳಗೊಂಡಿರುವ ಕೇರಳ ವಿಶೇಷ ಪೊಲೀಸ್ ಪಡೆ ಆಗಮಿಸಿದೆ.
100 ಮಂದಿ ಕೇರಳ  ರಾಜ್ಯದ ವಿಶೇಷ ಪೊಲೀಸ್ ತಂಡ ಮತ್ತು 40 ಮಂದಿ  ಮಧುಗಿರಿ ಪೋಲಿಸರು ಜಂಟಿಯಾಗಿ ಸಿಪಿಐ ಗಿರಿಶ್ ನಾಯ್ಕ್, ಪಿಎಸೈ ಎಂ. ಅಂಬರೀಶ್ ಅವರನ್ನೊಳಗೊಂಡ ತಂಡ ಠಾಣೆಯಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿತು.
 ತಾಲೂಕಿನಲ್ಲಿ ಒಟ್ಟು  35 ಮಂದಿ ರೌಡಿ ಪಟ್ಟಿಯಲ್ಲಿದ್ದು ಆರೋಪಿಗಳು  ಚುನಾವಣೆ ವೇಳೆ  ಯಾವುದೇ ರೀತಿಯ   ಕಾನೂನು ಬಾಹಿರ ಚಟುವಟಿಕೆಗಳು ನಡೆಯ ಬಾರದು ಎಂಬ ದೃಷ್ಟಿಯಿಂದ ಅವರಿಂದ  ಮುಂಜಾಗ್ರತ  ಕ್ರಮವಾಗಿ ಬಾಂಡ್ ಬರೆಸಿ ಕೊಳ್ಳಲಾಗಿದೆ. ಗಲಾಟೆ ಮಾಡಿದ್ದೆ ಆದರೆ ಗಡಿ ಪಾರು ಮಾಡುವುದಾಗಿ ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ಎಚ್ಚರಿಕೆ ನೀಡಲಾಗಿದೆ. ಯಾವುದೇ ವ್ಯಕ್ತಿಗಳು, ವಾಹನಗಳು ಅನುಮಾನಸ್ಪದವಾಗಿ ಕಂಡು ಬಂದರೆ ಅವುಗಳನ್ನು ನಿಲ್ಲಿಸಿ ತಪಾಸಣೆ ನಡೆಸುವ ಅಧಿಕಾರವನ್ನು ನೀಡಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.