'ಶಿರಾ ಕೋಮು ಗಲಭೆಗೆ ಟಿಬಿಜೆ ಕಾರಣ'
ಶಿರಾ: ಶಿರಾ ನಗರದಲ್ಲಿ ನಡೆದ ಕೋಮು ಗಲಭೆಯಲ್ಲಿ ಉಂಟಾದ ಹಾನಿಗಳಿಗೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಅವರ ಕರ್ತವ್ಯಲೋಪವೆ ಕಾರಣವಾಗಿದ್ದು, ಶಿರಾ ಭಾಗದ ಮತದಾರರು ಟಿ.ಬಿ.ಜಯಚಂದ್ರ ಅವರ ವಿರುದ್ಧ ಮತ ಚಲಾಯಿಸುವುದು ಖಂಡಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸುರೇಶ್ ಗೌಡ ತಿಳಿಸಿದರು.
ಅವರು ನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಸಕ್ತ ಚುನಾವಣೆಯಲ್ಲಿ ಮೋದಿ ಅವರ ಅಲೆಯ ಮುಂದೆ ದೇವೇಗೌಡರ ಯಾವುದೇ ತಂತ್ರ ನಡೆಯುವುದಿಲ್ಲ ಎಂದರು. ನಮ್ಮ ನಾಡಿನ ವಿಧಾನಸೌಧ ಒಂದು ಪವಿತ್ರವಾದ ದೇವಾಲಯವಿದ್ದಂತೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಇಂತಹ ಪವಿತ್ರವಾದ ಸ್ಥಳದಲ್ಲಿ ಮೈಮೇಲಿನ ಬಟ್ಟೆಯನ್ನೇ ಹರಿದುಕೊಂಡು ವಿಧಾನಸೌಧವನ್ನು ಅಪವಿತ್ರಗೊಳಿಸಿದ ಕೀರ್ತಿ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ಗೆ ಸಲ್ಲುತ್ತದೆ. ಇವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಪುರಸ್ಕಾರ ನೀಡುವುದಿಲ್ಲ ಎಂದರು.
ಪಾವಗಡದಲ್ಲಿ ವೆಂಕಟರಮಣಪ್ಪ ಅವರು ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಕೆಲಸವನ್ನು ತೆರೆಮರೆಯಲ್ಲಿ ನಡೆಸಿದ್ದು, ಕಾಂಗ್ರೆಸ್ ಹಿನ್ನೆಡೆಗೆ ಇದು ಕೂಡ ಕಾರಣವಾಗಲಿದೆ ಎಂದರು.
ಮದ್ಯವಶ: ಇದುವರೆಗೆ 21 ಮಂದಿ ಬಂಧನ
ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ನಡೆದ ದಾಳಿ ಪ್ರಕರಣಗಳಲ್ಲಿ ಈ ಕೆಳಕಂಡಂತೆ ಅಕ್ರಮ ಮದ್ಯ ಮತ್ತು ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 5 ರಿಂದ 28 ರವರೆಗೆ ಜಿಲ್ಲೆಯ ವಿವಿಧೆಡೆ 362 ಕಡೆ ನಡೆದ ದಾಳಿ ಪ್ರಕರಣಗಳಲ್ಲಿ 156.002 ಲೀ. ಮದ್ಯ, 10.400ಲೀ. ಬಿಯರ್, 1 ಟಿ.ವಿ.ಎಸ್ ಹೆವಿಡ್ಯೂಟಿ ಮತ್ತು ಹೀರೋ ಸೈಕಲ್ ವಾಹನ, 1850 ಗ್ರಾಂ. ಗಾಂಜಾ ಸೇರಿದಂತೆ ಒಟ್ಟು 91,297 ಮೊತ್ತದ ಮಾಲನ್ನು ವಶಪಡಿಸಿಕೊಂಡು ಈ ಸಂಬಂಧ 21 ಮಂದಿಯನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

