ಕಹಿವೇ ತಾಲೂಕು ಕಚೇರಿ ಸಂಘಟನೆ ಉದ್ಘಾಟನೆ
ಶಿರಾ : ನಗರದ ನಾಯಕರ ಹಟ್ಟಿಯಲ್ಲಿರುವ ವೈ.ಜಿ. ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ನೂತನವಾಗಿ ಕನ್ನಡ
ಹಿತರಕ್ಷಣಾ ವೇದಿಕೆ ತಾಲೂಕು ಕಚೇರಿ ಸಂಘಟನೆಯ ಜಿಲ್ಲಾಧ್ಯಕ್ಷ ಪಿಲಾಲಿ ಮಂಜು ಉದ್ಘಾಟಿಸಿದರು. ನಂತರ ನೂತನ ತಾಲೂಕು ಘಟಕದ ಪದಾಧಿಕಾರಿಗಳನ್ನು ಘೋಷಿಸಿದ ಅವರು ತಾಲೂಕು ಅಧ್ಯಕ್ಷರನ್ನಾಗಿ ಎಂ.ವಿ.ಕೇಶವ, ಉಪಾಧ್ಯಕ್ಷರನ್ನಾಗಿ ಹನುಮಂತರಾಜು, ಕಾರ್ಯಾಧ್ಯಕ್ಷರನ್ನಾಗಿ ಹೆಗ್ಗೆರೆ ಮಂಜು, ಗೌರವಾಧ್ಯಕ್ಷರನ್ನಾಗಿ ಟಿ.ರಾಜಕುಮಾರ್, ಕಾರ್ಯದರ್ಶಿಯಾಗಿ ಮಾರುತಿ, ಖಜಾಂಚಿಯಾಗಿ ಕೃಷ್ಣಚಾರ್, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜು, ಸಹಕಾರ್ಯದರ್ಶಿಯಾಗಿ ತುಕಾರಂ, ಸಂಘಟನಾ ಕಾರ್ಯದರ್ಶಿಯಾಗಿ ವಸಂತ, ಅವರನ್ನು ಘೋಷಿಸಿದರು.
ಡಿಕ್ಕಿ: ದ್ವಿಚಕ್ರವಾಹನ ಸವಾರ ಸಾವು
ಶಿರಾ: ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಚಾಲಕ ಮರಣ ಹೊಂದಿರುವ ಘಟನೆ ತಾಲೂಕಿನ ರಾ.ಹೆ. 4 ಚಿಕ್ಕನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಚಿಕ್ಕನಹಳ್ಳಿ ಹೂವಿನ ಮಾರುಕಟ್ಟೆ ಕಡೆಯಿಂದ ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನಕ್ಕೆ ರಭಸವಾಗಿ ಹೊಡೆದ ಕಾರಣ ಈ ಘಟನೆ ಸಂಭವಿಸಿದ್ದು ಬೈಕ್ ಸವಾರ ಕಳ್ಳಂಬೆಳ್ಳ ಹತ್ತಿರದ ವಡ್ಡನಹಳ್ಳಿ ಗ್ರಾಮವಾಸಿ ನಿಖಿಲ್ (22) ಎಂಬುವವನು ಸಾವನ್ನಪ್ಪಿದ್ದಾನೆ. ಶರತ್ ಎಂಬುವನು ಗಾಯಗೊಂಡಿದ್ದಾನೆ.
ಈ ಸಂಬಂಧ ಕಳ್ಳಂಬೆಳ್ಳ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

