ಸಂಭ್ರಮದ ಕಲೋತ್ಸವಕ್ಕೆ ತೆರೆ
ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮೇ 1
ಇಲ್ಲಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಬಯಲು ವೇದಿಕೆಯಲ್ಲಿ ಏರ್ಪಟ್ಟ ಎರಡು ದಿನಗಳ ಕಲೋತ್ಸವ-2014 ಕಾರ್ಯಕ್ರಮಕ್ಕೆ ತೆರೆ ಬಿದ್ದಿತು. ತುಮಕೂರು ಅಲ್ಲದೆ ರಾಜ್ಯದ ಅನೇಕ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಕಲಾಸಿರಿವಂತಿಕೆ ಪ್ರದರ್ಶಿಸಿದರು.
ಯುವನಟ ಪ್ರಜ್ವಲ್ ದೇವರಾಜ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವಂತಹ ಕೆಲಸಗಳನ್ನು ಮಾಡಬೇಕು. ತಮ್ಮ ಮುಂದಿನ ಭವಿಷ್ಯದ ಮೆಟ್ಟಲುಗಳನ್ನು ಕಾಲೇಜುಗಳಲ್ಲಿ ಕಟ್ಟಿ ಕೊಳ್ಳಬೇಕು ಎಂದರು. ಸಾಧನೆ, ಗುರಿಯನ್ನಿಟ್ಟುಕೊಂಡು ನಿರಂತರ ಅಧ್ಯಯನಶೀಲತೆಯಲ್ಲಿ ತೊಡಗಿದಾಗ ಗುರಿಮಟ್ಟಲು ಸಾಧ್ಯ ಎಂದರು. ಮತ್ತೋರ್ವ ಚಲನಚಿತ್ರ ತಾರೆ ನಿಖಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು, ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ, ನಿರ್ಮಾಪಕ ವೇಣುಗೋಪಾಲ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಸಿ ಎನ್. ನರಸಿಂಹಮೂರ್ತಿ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಎ. ಕೃಷ್ಣಮೂರ್ತಿ, ಡೀನ್ ಎಂ.ಝಡ್. ಕುರಿಯನ್, ಕಲೋತ್ಸವದ ಸಂಚಾಲಕ ಡಾ.ರಮೇಶ್, ಡಾ. ರಾಜೇಶ್ ಕಾಮತ್, ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಪ್ರಶಸ್ತಿ: ತುಮಕೂರಿನ ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದರೆ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ರನ್ನರ್ ಅಫ್ ಪ್ರಶಸ್ತಿ ಗಳಿಸಿತು. ಎರಡು ದಿನದ ಈ ಸಾಂಸ್ಕೃತಿಕ ಹಬ್ಬದಲ್ಲಿ ಒಟ್ಟು 28 ಸ್ವರ್ಧೆಗಳನ್ನು ಆಯೋಜಿಸಾಗಿತ್ತು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಕಾಲೇಜಿನ ಬಯಲು ವೇದಿಕೆಯಲ್ಲಿ ಕಿಕ್ಕಿರಿದು ನೆರದಿದ ಪ್ರೇಕ್ಷಕರಿಗೆ ವಿವಿಧ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಸ್ವರ್ಧೆ ಮುದ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

