ಪುರಸಭೆ ಸಾಮಾನ್ಯ ಸಭೆ ಶೀಘ್ರ ಕರೆಯಲು ಆಗ್ರಹ
ಕುಣಿಗಲ್: ಪುರಸಭೆಗೆ ಅಧ್ಯಕ್ಷರು ಆಯ್ಕೆಯಾಗಿ 40 ದಿನಗಳು ಕಳೆಯುತ್ತಾ ಬಂದಿದ್ದರೂ, ಚುನಾವಣೆ ಆಯೋಗ ನೀತಿ ಸಂಹಿತೆ ಸಡಿಲಗೊಳಿಸಿದ್ದರೂ, ಪುರಸಭೆ ಮುಖ್ಯಾಧಿಕಾರಿ, ಸಾಮಾನ್ಯ ಸಭೆ ಕರೆಯದಿರುವ ಬಗ್ಗೆ 12ಮಂದಿ ಪುರಸಭಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಸಭೆ ಕರೆಯುವಂತೆ ಪುರಸಭೆ ಮುಖ್ಯಾಧಿಕಾರಿಗೆ ಒತ್ತಾಯಿಸಿದ್ದಾರೆ.
ಮಾ. 24ರಂದೆ ಪುರಸಭೆಗೆ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಈ ಹಂತದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ನಂತರ ಲೋಕಸಭೆ ಚುನಾವಣೆ ಮುಗಿದ ಮೇಲೆ, ಆಯೋಗವು ನೀತಿ ಸಂಹಿತೆ ಸಡಿಲಗೊಳಿಸಿದೆ. ಈ ಮಧ್ಯೆ ಪುರಸಭೆಗೆ ಅಧ್ಯಕ್ಷರು ಅಯ್ಕೆಯಾದಾಗಿನಿಂದಲೂ ಸಾರ್ವಜನಿಕ ಸಮಸ್ಯೆ ಬಗೆಹರಿಸಲಾಗದೆ, ಪುರಸಭೆ ಕೆಲಸವಿಲ್ಲದಂತಾಗಿದೆ. ಇನ್ನು ಸದಸ್ಯರೊಂದಿಗೆ ಚರ್ಚಿಸದ ಕಾರಣ ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ನಿರ್ವಹಣೆ, ಕಸವಿಲೆವಾರಿ ಸೇರಿದಂತೆ, 2014-15ನೇ ಸಾಲಿಗೆ ಆಯವ್ಯಯ ಮುಂಗಡ ಪತ್ರವನ್ನು ಮಂಡಿಸದೆ, ಅನುದಾನ ಪೋಲಾಗುತ್ತಾ, ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಕೂಡಲೆ ಸಾಮಾನ್ಯಸಭೆ ಕರೆಯುವಂತೆ ಸದಸ್ಯರಾದ ಚಂದ್ರಶೇಖರ್, ರಾಮು, ಜಗದೀಶ್, ಅರುಣ್ ಕುಮಾರ್, ದಸ್ತಗೀರ್, ಸಮೀವುಲ್ಲಾ, ರಂಗಸ್ವಾಮಿ, ತಾರಾದೇವಿ ಇತರರು ಮನವಿ ನೀಡಿ, ಪುರಸಭೆ ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

