ತುಮಕೂರು

ಎಲ್ಲರ ಒಂದುಗೂಡಿಸುವ ತಾಣ ಗುಡಿ

Published On :

ಶಿರಾ: ಗುಡಿ ಗೋಪುರಗಳು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಸಾಧನಗಳಾಗಿದ್ದು, ದೇವಸ್ಥಾನಗಳು ಜಾತಿ, ಧರ್ಮ, ವರ್ಗ ಎಲ್ಲವನ್ನೂ ಮರೆತು ಎಲ್ಲರನ್ನು ಒಂದುಗೂಡಿಸುವ ತಾಣಗಳಾಗಿವೆ ಎಂದು ರಾಜ್ಯ ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರು ತಿಳಿಸಿದರು
ಅವರು ನಗರದ ವಿದ್ಯಾನಗರ ಜಾಜಮ್ಮನ ಕಟ್ಟೆ ಪಕ್ಕದಲ್ಲಿ ತಾಲೂಕು ಮಡಿವಾಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ  ವೀರಘಂಟೆ ಮಡಿವಾಳ ಮಾಚಿದೇವರ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಮಾಜಲ್ಲಿ ತುಳಿತಕ್ಕೆ ಒಳಗಾಗಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಡಲು ಸರ್ಕಾರ ಸದಾ ಸಿದ್ಧವಾಗಿದ್ದು, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಿ ಕೊಡುವುದು ನನ್ನ ಕರ್ತವ್ಯವಾಗಿದೆ ಎಂದ ಅವರು ಸಮಾಜದಲ್ಲಿ ದೇವಾಲಯ ನಿರ್ಮಾಣ ಮಾಡುವುದು ಪುಣ್ಯದ ಕೆಲಸ. ಸದಾ ಬಡತನದಲ್ಲಿರುವ ಈ ಸಮುದಾಯ ತಮ್ಮ ಶ್ರಮದ ಹಣದಿಂದ ದೇವಾಲಯ ನಿರ್ಮಾಣ ಮಾಡಿದ್ದಾರೆ 12ನೇ ಶತಮಾನದ ಶ್ರೇಷ್ಠ ಶರಣ ಮಡಿವಾಳ ಮಾಚಿ ದೇವರ ಈ ದೇವಾಲಯವನ್ನು ಶಿರಾ ನಗರದಲ್ಲಿ ನಿರ್ಮಾಣ ಮಾಡಿರುವುದು ಪ್ರಶಂಸನೀಯ ಎಂದರು.
ಮಡಿಕಟ್ಟೆಗಳ ನಿರ್ಮಾಣ: ನಗರದ ಶ್ರೀ ಮಾಚಿ ದೇವರ ದೇವಾಲಯದ ಅಭಿವೃದ್ಧಿಗೆ 3 ಲಕ್ಷ ರು. ಗಳ ಅನುದಾನ ನೀಡುವೆ ಎಂದ ಸಚಿವರು ಜೊತೆಗೆ ಶಿರಾ ನಗರದ ಎಲ್ಲಾ ಸಮುದಾಯಗಳ ಅಭ್ಯುದಯಕ್ಕೆ ವಿದ್ಯಾರ್ಥಿನಿಲಯ ಸೇರಿದಂತ ಇತರೆ ಸಾಮಾಜಿಕ ಚಟುವಟಿಕೆಗೆ ಜಮೀನು ಗುರುತಿಸಿ ನಿವೇಶನ ನೀಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಮಡಿವಾಳ ಜನಾಂಗದ ಕುಲ ಕಸುಬಿಗೆ ಅನುಕೂಲವಾಗುವಂತೆ ಮಡಿಕಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಒತ್ತಾಯ: ಚಿತ್ರದುರ್ಗದ ಮಾಚಿ ದೇವ ಸಂಸ್ಥಾನ ಮಠದ ಶ್ರೀ ಬಸವ ಮಾಚಿ ದೇವ ಸ್ವಾಮೀಜಿಯವರು ಸಮಾರಂಭದಲ್ಲಿ ಮಾತನಾಡಿ ರಾಜ್ಯದಲ್ಲಿ 20-25 ಲಕ್ಷ ಜನಸಂಖ್ಯೆಯುಳ್ಳ ಹಿಂದುಳಿದ ಸಮಾಜವಾದ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಹಾಜರಿದ್ದ ಸಚಿವರಿಗೆ ಒತ್ತಾಯಿಸಿದರು. ಸಂಘಟನೆಯಿಂದ ಮಾತ್ರ ಸಮುದಾಯಕ್ಕೆ ಶಕ್ತಿ ದೊರಕಲಿದ್ದು ಮಡಿವಾಳರು ಸಂಘಟಿತರಾಗುವಂತೆ ಕರೆ ನೀಡಿದರು.
ಸನ್ಮಾನ: ಪಟ್ಟನಾಯಕನಹಳ್ಳಿ ಶ್ರೀ ಕ್ಷೇತ್ರದ ಶ್ರೀ ನಂಜಾವಧೂತ ಸ್ವಾಮೀಜಿಯವರು ಮಾತನಾಡಿ ಬಸವಣ್ಣ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಮಾಚಿ ದೇವರು ಮಡಿವಾಳ ಸಮಾಜಕ್ಕೆ ಉನ್ನತ ಘನತೆ ತಂದುಕೊಟ್ಟ ಮಹಾನ್ ಶರಣರು ತಮ್ಮ ಕಾಯಕ ತತ್ವದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.
 ದೇವಸ್ಥಾನದ ಅಭಿವೃದ್ಧಿ ಧನ ಸಹಾಯ ಮಾಡಿದ ದಾನಿಗಳಿಗೆ  ಜಿ.ಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಸನ್ಮಾನಿಸಿದರು. ನಗರಸಭೆಯ ಅಧ್ಯಕ್ಷೆ ಜ್ಞಾನಪೂರ್ಣ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಜ್ಞಾನೇಶ್, ತಾ.ಪಂ ಉಪಾಧ್ಯಕ್ಷ ಉದಯಶಂಕರ್, ರಾಜಣ್ಣ, ರಂಗನಾಥಪ್ಪ, ಪೇಪರ್ ಕುಮಾರ್, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ.ಕೆ ತಿಮ್ಮಯ್ಯ ಸೇರಿದಂತೆ ಹಲವರು ಹಾಜರಿದ್ದರು.
ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬಸವ ಮಾಚಿದೇವರ ಸ್ವಾಮಿಗಳ ಮೆರವಣಿಗೆ ನಡೆಸಲಾಗಿತು. ಪೂರ್ಣ ಕುಂಭ ಕಲಶ ಹೊತ್ತಿದ್ದ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೋಲಾಟ, ವೀರಗಾಸೆ ಮೊದಲಾದ ಜಾನಪದ ಪ್ರಕಾರಗಳು ಮೆರವಣಿಗೆಗೆ ಕಳೆ ತಂದಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.