ತುಮಕೂರು

ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

Published On :

ರಾಮನಗರ: ತಾಲೂಕಿನ ಜೋಗರದೊಡ್ಡಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಗೆ 2013ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಅರ್ಯಭಟ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಪ್ರತಿ ವರ್ಷ ನೀಡುವ ಈ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜೂ.22 ರಂದು ಪ್ರದಾನ ಮಾಡಲಾಗುವುದು.
ಬಿಡದಿಯ ಜೋಗರದೊಡ್ಡಿಯಲ್ಲಿರುವ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ ಕಳೆದ 23 ವರ್ಷದಿಂದ ಸಂಪ್ರದಾಯ ಶಿಲ್ಪಕಲೆಯಲ್ಲಿ ತರಬೇತಿ ನೀಡುತ್ತಿದೆ. ಈವರೆಗೆ ಸುಮಾರು 730 ಯುವಕ-ಯುವತಿಯರು ಪಡೆದಿದ್ದು, ಶೇ.90ರಷ್ಟು ಮಂದಿ ಲಾಭದಾಯಕ ಹುದ್ದೆಯಲ್ಲಿದ್ದಾರೆ. ಈ ಪೈಕಿ ಹಲವರು ಶಿಲ್ಪಕಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಂಸ್ಥೆ ಶಿಲ್ಪಕಲೆಯಲ್ಲಿ 18 ತಿಂಗಳ ಶಿಕ್ಷಣ ನೀಡಲಿದೆ. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿಗೆ ಬೇಕಾದ ಕಚ್ಚಾ ಸಾಮಗ್ರಿ, ತರಬೇತಿ ಪ್ರವಾಸವನ್ನು ಕಲ್ಪಿಸುವ ಜತೆಗೆ ನುರಿತ ಶಿಕ್ಷಕರಿಂದ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಎಂ. ವೆಂಕಟೇಶ ಶೇಷಾದ್ರಿ ತಿಳಿಸಿದ್ದಾರೆ. ಮಾಹಿತಿಗೆ ಮೊ-9900158885 ಸಂಪರ್ಕಿಸಬಹುದು.



ಬಳಕೆಯಾಗದ ಮಳಿಗೆಗಳು



ವಿವೇಕವಿಲ್ಲದೆ ಮಾಡುವ ಕೆಲಸಗಳು ಪ್ರಯೋಜನಕ್ಕೆ ಬರುವುದಿಲ್ಲವೆಂಬ ಹಿರಿಯರ ಮಾತು ಚಿಕ್ಕನಾಯಕನಹಳ್ಳಿ ಪುರಸಭೆ ನಿರ್ಮಿಸಿರುವ ಮಳಿಗೆಗಳ ವಿಷಯದಲ್ಲಿ ನಿಜವಾಗಿದೆ.
ಪಟ್ಟಣದ ಪುರಸಭೆ ತನ್ನ ಅನುದಾನದಲ್ಲಿ  ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣಸ್ವಾಮಿದೇವಾಲಯದ ಮುಂಭಾಗದಲ್ಲಿ ಕಟ್ಟಿರುವ ಅಂಗಡಿ ಮಳಿಗೆಗಳು ಕೇಳುವವರಿಲ್ಲದೆ ಶಿಥಿಲವಾಗುವತ್ತಿವೆ. ಸುಮಾರು 8 ವರ್ಷಗಳ ಹಿಂದೆ ಲಕ್ಷಾಂತರ ರು.ಗಳ ವೆಚ್ಚದಲ್ಲಿ ವ್ಯಾಪಾರ ನಡೆಯದ ಜಾಗದಲ್ಲಿ ಮಳಿಗೆಗಳನ್ನು ಕಟ್ಟುವ ನಿರ್ಧಾರವನ್ನು ಪುರಸಭೆ ಕೈಗೊಂಡಾಗ, ಹಲವಾರು ಜನ ಇದನ್ನು ಅವೈಜ್ಞಾನಿಕ ನಿರ್ಧಾರ ಎಂದು ಹೇಳಿದ್ದರು.
ಅಂದಿನ ಚುನಾಯಿತ ಸದಸ್ಯರು ಹಠಕ್ಕೆ ಬಿದ್ದವರಂತೆ ಮಳಿಗೆ ನಿರ್ಮಾಣ ಮಾಡಿದ್ದರು. ಮಳಿಗೆಗಳನ್ನು ಕಟ್ಟಿ 8 ವರ್ಷವಾಗಿದ್ದು,  ಮೂರ್ನಾಲ್ಕು ಬಾರಿ ಟೆಂಡರ್ ಕರೆದರು ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ಯಾರೂ ಮುಂದೆ ಬಂದಿಲ್ಲ. ಇದರಿಂದ ಸುತ್ತಮುತ್ತ ಕೆಲವರು ಮಳಿಗೆಗಳನ್ನು ಬಾಡಿಗೆಯಿಲ್ಲದೆ ಉಪಯೋಗಿಸುತ್ತಿದ್ದಾರೆ. ಇದನ್ನು ನೋಡಿಯು ಪುರಸಭೆ ಕೈಕಟ್ಟಿಕುಳಿತಿದೆ. ಸರ್ಕಾರದ ಹಣವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಳಸಲು ಬಾರದವರ ಕೈಗೆ ಆಡಳಿತ ಕೊಟ್ಟರೆ ಆಗುವುದು ಹೀಗೆ ಎಂದು ಜನ ಟೀಕಿಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.