ಅಧಿಕ ಭಾರದ ಮರಳು ಸಾಗಿಸುತ್ತಿದ್ದ 22 ಲಾರಿಗಳ ವಶ
ಕುಣಿಗಲ್: ನಿಗದಿತ ತೂಕಕ್ಕಿಂತ, ಸೂಕ್ತ ಪರ್ಮಿಟ್ ಇಲ್ಲದೆ ಅಧಿಕ ಭಾರದ ಮರಳನ್ನು ತುಂಬಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ 22 ಲಾರಿಗಳನ್ನು ಲೋಕೋಪಯೋಗಿ ಇಲಾಖೆ, ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು, ಶುಕ್ರವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಿ ಲಾರಿಗಳನ್ನು ವಶಪಡಿಸಿಕೊಂಡ ಘಟನೆ ನಡೆಯಿತು.
ಮಂಗಳೂರಿನ ವಿವಿಧೆಡೆಗಳಲ್ಲಿ ಸರ್ಕಾರಕ್ಕೆ ಹತ್ತುಟನ್‌ಗೆ ಸೂಕ್ತ ಶುಲ್ಕ ಪಾವತಿಸಿ ನಂತರ ವಿವಿಧೆಡೆಗಳಲ್ಲಿ ಮತ್ತಷ್ಟು ಹೆಚ್ಚಿನ ಮರಳನ್ನು ತುಂಬಿಕೊಂಡು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಅಧಿಕ ಭಾರ ಹೊರುವ ಜೊತೆಯಲ್ಲಿ ಹೆಚ್ಚಿನ ಮರಳನ್ನು ಸಂಗ್ರಹಿಸಿ ತರುವುದಕ್ಕೆ ನಿಯಮಾನುಸಾರ ಸೂಕ್ತ ಶುಲ್ಕ ಪಾವತಿಸಿ ಪರ್ಮಿಟ್ ಪಡೆಯದ ಕಾರಣ, ದೊರೆತ ಖಚಿತ ಮಾಹಿತಿ ಮೇರೆಗೆ ಅಮೃತೂರು ಪೊಲೀಸರು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಶುಕ್ರವಾರ ಬೆಳಗಿನಿಂದ ಮಧ್ಯಾಹ್ನದವರೆಗೂ 22 ಲಾರಿಗಳನ್ನು, ರಾಷ್ಟ್ರೀಯ ಹೆದ್ದಾರಿ 75ರ ಬ್ಯಾಲದಕೆರೆ ಗೇಟ್ ಬಳಿ ತಡೆದು ತಪಾಸಣೆ ಮಾಡಿದಾಗ, ಎಲ್ಲಾ ಲಾರಿಗಳಲ್ಲೂ ಹೆಚ್ಚಿನ ಮರಳನ್ನು ಸೂಕ್ಕ ಪರ್ಮಿಟ್ ಇಲ್ಲದೆ ಹಾಕಿರುವುದು ಕಂಡು ಬಂದಿತು.
ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಯಧನದ ವಂಚನೆ ಜೊತೆಯಲ್ಲಿ ಅಧಿಕಭಾರದಿಂದ ರಸ್ತೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ, ಸ್ಥಳಕ್ಕೆ ಗಣಿ ಮತ್ತು ಭೂ
ವಿಜ್ಞಾನ ಇಲಾಖೆಯ ಸಿಬ್ಬಂದಿ ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮಿಪ್ರಸನ್ನ ಸಿಬ್ಬಂದಿ ಭೇಟಿ ನೀಡಿ ಲಾರಿಗಳನ್ನು ವಶಪಡಿಸಿಕೊಂಡು, ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದ ಮೈದಾನಕ್ಕೆ ತಂದು, ಪರ್ಮಿಟ್‌ಗಳ ತಪಾಸಣೆ ಮಾಡಿದಾಗ 19 ಲಾರಿಗಳಿಗೆ ದಾಖಲೆ ಇದ್ದು, ಉಳಿದ ಲಾರಿಗಳಿಗೆ ದಾಖಲೆ ಇರಲಿಲ್ಲ. ಅಲ್ಲದೆ ಪರ್ಮಿಟ್ ಇದ್ದ ಲಾರಿಗಳಿಗೆ ಹತ್ತು ಟನ್‌ಗೆ ಮಾತ್ರ ರಾಯಧನ ಪಾವತಿಸಿದ್ದ, ಉಳಿದ ಹೆಚ್ಚುವರಿ ಮರಳನ್ನು ಕಚೇರಿಯ ಮೈದಾನದಲ್ಲಿ ಸುರಿಸಿದರು.
ವಾಗ್ವಾದ: ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೆಲ ಲಾರಿ ಚಾಲಕರು ಮತ್ತು ಮರಳು ಸಾಗಾಣೆದಾರರು ವಾಗ್ವಾದ ನಡೆಸಿದರು. ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರಿಂದ ವಿಧಿ ಇಲ್ಲದೆ ಸುಮ್ಮನಾದರು. 19 ಲಾರಿಗಳಿಂದ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ ರು. ದಂಡ ವಸೂಲು ಮಾಡಿ ಖಜಾನೆಗೆ ಪಾವತಿಸಿದ್ದು, ಹೆಚ್ಚುವರಿ ಮರಳನ್ನು ನೂತನ ಮರಳು ನೀತಿ ಅನ್ವಯ ವಿಲೆಮಾಡಲಾಗುವುದೆಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

