27ರಂದು ಶ್ರೀನಿವಾಸ ಕಲ್ಯಾಣೋತ್ಸವ
ಉಡುಪಿ: ಮಣಿಪಾಲದ ಶ್ರೀದುರ್ಗಾಂಬಾ ಟ್ರಸ್ಟ್ನ ದಶಮಾನೋತ್ಸವ ಸಮಿತಿ ಹಾಗೂ ಪಿ. ಅನಂತರಾಯ ಕಾಮತ್ ದಂಪತಿಯ ಜಂಟಿ ಸೇವಾ ರೂಪದಲ್ಲಿ ಇಲ್ಲಿನ ಮಣಿಪಾಲದ ಎಂಜೆಸಿ ಮೈದಾನದಲ್ಲಿ ಏ.27ರಂದು ಲೋಕ ಕಲ್ಯಾಣಾರ್ಥಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಲಾಗಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ವೇದಮೂರ್ತಿ ಶಿವಾನಂದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅಂದು 4.30 ಗಂಟೆಗೆ ಶ್ರೀದುರ್ಗಾಂಬ ಮಂದಿರದಿಂದ ಶ್ರೀನಿವಾಸ ದೇವರ ಭವ್ಯ ಶೋಭಾಯಾತ್ರೆ ಹೊರಟು ಎಂಜೆಸಿ ಮೈದಾನದ ಶ್ರೀನಿವಾಸ ಕಲ್ಯಾಣಮಂಟಪಕ್ಕೆ ತಲುಪಿದ ನಂತರ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೈವಲ್ಯ ಮಠಾಧೀಶ ಶ್ರೀಶಿವಾನಂದ ಸರಸ್ವತಿ ಶ್ರೀಪಾದರು ಉಪಸ್ಥಿತರಿರುತ್ತಾರೆ. ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ಮೂಲಕ ನಡೆಯುವ ಈ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ತಿರುಪತಿ ಲಡ್ಡು ಪ್ರಸಾದ ವಿತರಿಸಲಾಗುವುದು ಎಂದವರು ತಿಳಿಸಿದರು.ಅನಂತರಾಯ ಕಾಮತ್, ಮಹೇಶ್ ಠಾಕೂರ್, ವಿನಯ ಕಾಮತ್, ಅಜಯ ಕಾಮತ್ ಇದ್ದರು.
ಶೇಖ್ ಅಧಿಕಾರ ಸ್ವೀಕಾರ
ಉಡುಪಿ: ಉಡುಪಿ ಚುನಾವಣಾ ತಹಸೀಲ್ದಾರ್ ಆಗಿ ಎಂ.ಎ. ಶೇಖ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಕಾರವಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಉಡುಪಿಯಲ್ಲಿ ಈ ಹಿಂದೆ ಚುನಾವಣಾ ತಹಸೀಲ್ದಾರ್ ಆಗಿದ್ದ ಮದಕರಿ ನಾಯ್ಕ್ ಅವರು ಕಾರವಾರ ಚುನಾವಣಾ ತಹಸೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.'
ಶಿವಪುರದಲ್ಲಿ ಮತದಾರರಿಗೆ ಬಾಡೂಟ ಸಾಗಾಟ, ನಾಲ್ವರ ವಿರುದ್ಧ ಕೇಸ್
ಹೆಬ್ರಿ: ಶಿವಪುರ ಗ್ರಾಮದ ಕುಬ್ರಿಯಲ್ಲಿ ಮತದಾರರಿಗೆ ವಿತರಿಸಲು ರಿಕ್ಷಾದಲ್ಲಿ ಸಾಗಿಸುತ್ತಿದ್ದ ಬಾಡೂಟವನ್ನು ಚುನಾವಣೆಯ ಫ್ಲೆ ೈಯಿಂಗ್ ದಳದ ಮುಖ್ಯಸ್ಥ ತಿಪ್ಪೇಶಪ್ಪ ಎಂ. ಅವರು ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಶಿವಪುರದ ಕುಬ್ರಿ ಎಂಬಲ್ಲಿ ನಿಂತಿದ್ದ ರಿಕ್ಷಾವನ್ನು ಪರಿಶೀಲಿಸಿದಾಗ, ಮುದ್ರಾಡಿ ಉಪ್ಪಳದವರಾದ ಪ್ರವೀಣ ಪೂಜಾರಿ, ಸುಧಾಕರ ನಾಯ್ಕ್, ಸುರೇಶ ನಾಯ್ಕ್ ಎಂಬವರು ರಿಕ್ಷಾದಲ್ಲಿ 100 ಮಂದಿಗೆ ಮಾಂಸದೂಟ- ಅನ್ನ ಸಾಗಿಸುತ್ತಿರುವುದು ಕಂಡುಬಂತು. ಈ ಮಾಂಸದೂಟವನ್ನು ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ನೀಡಲು ಕೊಂಡೊಯ್ಯಲಾಗುತ್ತಿತ್ತು. ಆರೋಪಿಗಳ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಹೆಬ್ರಿ ಠಾಣೆಯಲ್ಲಿ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

