ಉಡುಪಿ

ನಿಡ್ಡೋಡಿ ಸ್ಥಾವರ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ

Published On :

ಮಂಗಳೂರು: ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ ಜನಸಂಘಟಿಸಿ ಹೋರಾಟ ನಡೆಸಬೇಕು ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ.
 ನಗರದ ಸಹೋದಯದಲ್ಲಿ ಶನಿವಾರ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ ಆಶ್ರಯದಲ್ಲಿ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
 ಜಿಲ್ಲೆಯವಲ್ಲಿ ಅಮೂಲ್ಯ ಜೀವಸೆಲೆಯಾದ ಪಶ್ಚಿಮ ಘಟ್ಟವನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಎತ್ತಿನಹೊಳೆ ಯೋಜನೆ, ಶಿರಾಡಿ ಘಾಟ್‌ಗೆ ಸುರಂಗ ಮಾರ್ಗ, ವಿದ್ಯುತ್ ಲೈನ್ ಇತ್ಯಾದಿ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. ಇದರ ವಿರುದ್ಧ ಜನತೆ ಹೋರಾಟ ನಡೆಸಬೇಕು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಬೇಕು. ಈ ಪ್ರದೇಶದ ಪರಿಸರ ಅಧ್ಯಯನ ನಡೆಯಬೇಕು. ಈ ಮೂಲಕ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಜನರೇ ಬಿಸಿ ಮುಟ್ಟಿಸಬೇಕು ಎಂದರು.
 1991ರಲ್ಲಿ ಕೊಜೆಂಟ್ರಿಕ್ಸ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಹೋರಾಟವನ್ನು ಪ್ರಸ್ತಾಪಿಸಿದ ಅವರು, ಯಾವಾಗಲೂ ಒಪ್ಪಂದ ನಡೆಯುವುದು ಕಂಪನಿ ಮತ್ತು ಸರ್ಕಾರದ ಮಧ್ಯೆ. ಇದನ್ನು ಜನರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಜನರು ಸೂಕ್ತ ಪರಿಹಾರಕ್ಕೆ ಹಕ್ಕು ಮಂಡಿಸುವುದರಲ್ಲಿ ತಪ್ಪಿಲ್ಲ ಎಂದರು.
 ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿ ಸಂಚಾಲಕ ಕಿರಣ್ ಮಂಜನಬೈಲು ಮಾತನಾಡಿ, ಎಲ್ಲೂರಿನ ಯುಪಿಸಿಎಲ್ ಸ್ಥಾವರದಿಂದ ಪರಿಸರದಲ್ಲಿ ಮಾಲಿನ್ಯವಲ್ಲದೆ, ಚರ್ಮರೋಗಕ್ಕೆ ಜನತೆ ತುತ್ತಾಗಿದ್ದಾರೆ. ದ.ಕ. ಜಿಲ್ಲೆ ಉಷ್ಣ ವಿದ್ಯುತ್ ಸ್ಥಾವರಕ್ಕೆ ಸೂಕ್ತವಲ್ಲ ಎಂದು ಅಧ್ಯಯನವೊಂದು ಹೇಳಿದೆ. ನಿಡ್ಡೋಡಿಯಲ್ಲಿ ಕೃಷಿಭೂಮಿಯನ್ನೇ ಸ್ಥಾವರ ಉದ್ದೇಶಕ್ಕೆ ಗುರುತಿಸಲಾಗಿದೆ ಎಂದರು.
 ಬಲ್ಮಠ ಕೆಟಿಸಿ ಪ್ರಾಂಶುಪಾಲ ವಾಟ್ಸನ್ ವಿಚಾರ ಸಂಕಿರಣ ಉದ್ಘಾಟಿಸಿದರು.
ಇಫ್ಕಾ ಮಂಗಳೂರು ಘಟಕ ಅಧ್ಯಕ್ಷ ರೋಯ್ ಕಾಸ್ಟಲಿನೊ, ರಾಜ್ಯ ಸಮಿತಿ ಸದಸ್ಯ ಡೆನ್ನಿಸ್ ಡಿಸಿಲ್ವ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.