'ವಿದ್ಯಾರ್ಥಿಗಳಲ್ಲಿ ಭೇದ ಭಾವ ಸಲ್ಲದು'
ಪಡುಬಿದ್ರಿ: ಕರ್ನಾಟಕ ಸರ್ಕಾರದ ಅಹಿಂದ ಮಕ್ಕಳಿಗೆ ಮಾತ್ರ ಉಚಿತ ಶೈಕ್ಷಣಿಕ ಪ್ರವಾಸ ಯೋಜನೆಯಿಂದ ಅಮಾಯಕ ಶಾಲಾ ಮಕ್ಕಳಲ್ಲಿ ಜಾತಿ ಸಂಘರ್ಷ- ದ್ವೇಷ ಭಾವನೆಗೆ ನಾಂದಿ ಹಾಡಲಾಗಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಟೀಕಿಸಿದರು.
ಅಲ್ಲದೇ ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಹಾಗೂ ಸಮಾನತೆಯಿಂದ ಕಾಣುವ ಗುರುಗಳಿಗೂ ಮುಜುಗರ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಆರ್ಥಿಕ ಹಿಂದುಳಿದ ಎಲ್ಲಾ ವರ್ಗದ ಮಕ್ಕಳಿರುತ್ತಾರೆ. ಏನೂ ಅರಿಯದ, ಜಾತಿ ಬಗ್ಗೆ ತಿಳಿಯದ ಮುಗ್ಧ ಮನೋಭಾವದ ಈ ವಿದ್ಯಾರ್ಥಿಗಳಲ್ಲಿ ಮೇಲು-ಕೀಳು ಎಂಬ ಭೇದಭಾವ ಬರಬಾರದು ಎಂಬ ಏಕೈಕ ಉದ್ದೇಶದಿಂದ ಸರ್ಕಾರಗಳು ಏಕರೂಪದ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಉಚಿತ ಬೈಸಿಕಲ್ ಹಾಗೂ ಪುಸ್ತಕಗಳನ್ನು ನೀಡಿ ಮಕ್ಕಳಲ್ಲಿ ಸಮಾನತೆಯ, ಏಕತೆಯ ಬೋಧನೆಯನ್ನು ಮಾಡುತ್ತಿದ್ದರೆ, ಇಂದಿನ ಸರ್ಕಾರ ಕೇವಲ ಜಾತಿ - ಧರ್ಮದ ಆಧಾರದಲ್ಲಿ ಕೆಲವೇ ಮಕ್ಕಳಿಗೆ ಮಾತ್ರ ಶೈಕ್ಷಣಿಕ ಪ್ರವಾಸ ಯೋಜನೆಯ ಮೂಲಕ ತಾರತಮ್ಯ ಭಾವ ಮೂಡಿಸುವುದಕ್ಕೆ ಹೊರಟಿರುವುದು ತೀರಾ ಖಂಡನೀಯ.
ಅಹಿಂದಾ ವರ್ಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹ ನೀಡಲಿ. ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆಗೆ ಯೋಜನೆ ರೂಪಿಸಲಿ, ಅಲೆಮಾರಿ, ನಿರ್ಗತಿಕ ಕುಟುಂಬಗಳಿಗೆ ಬದುಕುವ ಅಸರೆ ನೀಡಲಿ, ಮೂರು ಹೊತ್ತಿನ ಊಟಕ್ಕೂ ಪರದಾಡುವ ನಿವೇಶನ ರಹಿತರಿಗೆ ನಿವೇಶನ ಒದಗಿಸಲಿ, ನಂತರ ಅಹಿಂದಾ ಮಕ್ಕಳಿಗೆ ಪ್ರವಾಸದ ಬಗ್ಗೆ ಯೋಚಿಸಲಿ ಎಂದು ದೇವಿಪ್ರಸಾದ್ ಶೆಟ್ಟಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

