ಬುಲ್ಟ್ರಾಲ್ ಮೀನುಗಾರಿಕೆ ನಿಷೇಧಿಸಿ: ಒಕ್ಕೂಟ ಆಗ್ರಹ
ಉಡುಪಿ: ಬುಲ್ಟ್ರಾಲ್ ಮೀನುಗಾರಿಕೆಯಿಂದ ಕರಾವಳಿ ಜಿಲ್ಲೆಗಳ ಮೀನುಗಾರರ ಮಧ್ಯೆ ಗೊಂದಲದ ವಾತವರಣ ಸೃಷ್ಟಿಯಾಗಿದ್ದು, ಇದು ಮೀನುಗಾರರ ನಡುವೆ ಕಲಹಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ, ಬುಲ್ಟ್ರಾಲ್ ಮೀನುಗಾರಿಕೆ ನಿಷೇಧಿಸಬೇಕು ಎಂದು ಅಖಿಲ ಕರ್ನಾಟಕ ಕರಾವಳಿ ಪರ್ಸಿನ್ ಹಾಗೂ ಸಾಂಪ್ರಾದಾಯಿಕ ಮೀನುಗಾರರ ಒಕ್ಕೂಟದ ಗೌರವಾಧ್ಯಕ್ಷ ಮದನ್ ಕುಮಾರ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ- ದ.ಕ. ಜಿಲ್ಲೆಗಳಲ್ಲಿ ಒಟ್ಟು 500 ಪರ್ಸಿನ್ ಬೋಟು, 2000 ಟ್ರಾಲ್ ಬೋಟುಗಳಿವೆ. ಈ ಬುಲ್ಟ್ರಾಲ್ ಬೋಟುಗಳಲ್ಲಿ ದೊಡ್ಡ ಬಲೆಗಳನ್ನು ಉಪಯೋಗಿಸಿ ಮೀನುಗಾರಿಕೆ ಮಾಡಲಾಗುತ್ತದೆ.
ಇದು ಮೀನಿನ ಸಂತತಿ ನಾಶಕ್ಕೆ ಕಾರಣವಾಗುತ್ತಿದೆ. ಮುಂದೆ ಇದು ಮೀನುಗಾರಿಕೆ ಮತ್ತು ಮೀನುಗಾರರ ಅಸ್ತಿತ್ವಕ್ಕೆ ಕೊಡಲಿಯೇಟು ಹಾಕುತ್ತದೆ. ಆದ್ದರಿಂದ ಸರ್ಕಾರ ತಕ್ಷಣ ಬುಲ್ಟ್ರಾಲ್ ಮೀನುಗಾರಿಕೆ ನಿಷೇಧಿಸಬೇಕು. ಇಲ್ಲವಾದಲ್ಲಿ ಎಲ್ಲಾ ಮೀನುಗಾರರೂ ಒಟ್ಟು ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ಬುಲ್ಟ್ರಾಲ್ ಮೀನುಗಾರಿಕೆಯಿಂದ ಸಾಂಪ್ರಾದಾಯಿಕ, ಯಾಂತ್ರೀಕೃತ ಪರ್ಸಿನ್ ಮೀನುಗಾರರಿಗೆ ಶೇ. 95ರಷ್ಟು ನಷ್ಟವಾಗುತ್ತಿದೆ. ಆದ್ದರಿಂದ ಈ ನಷ್ಟ ಸರಿಪಡಿಸಿ ಅವರ ಜೀವನ ನಡೆಸುವುದಕ್ಕೆ ಅನುಕೂಲ ಮಾಡಿಕೊಡಬೇಕು, ಅಲ್ಲದೇ ರಾತ್ರಿ ವೇಳೆ ಟ್ರಾಲ್ಮೀನುಗಾರಿಕೆ ನಿಷೇಧಿಸಬೇಕು, ಬೋಟುಗಳಿಗೆ 250 ಅಶ್ವಶಕ್ತಿಗಿಂತ ಅಧಿಕ ಸಾಮಥ್ಯವಿರುವ ಎಂಜಿನ್ ಬಳಸುವ ದೋಣಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಮಳೆಗಾಲದ ರಜೆಯನ್ನು 57 ದಿನಗಳ ಬದಲಾಗಿ 90 ದಿನಗಳಿಗೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಗೌರವಾಧ್ಯಕ್ಷ ಗುರುದಾಸ್ ಬಂಗೇರ ಉಡುಪಿ, ನವೀನ್ ಬಂಗೇರ ಮಂಗಳೂರು, ಉಪಾಧ್ಯಕ್ಷ ಯಶೋಧರ ಅಮೀನ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಮೆಂಡನ್, ಕೋಶಾಧಿಕಾರಿ ಬಿ. ಅಣ್ಣಪ್ಪ ಖಾರ್ವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

