ಉಡುಪಿ

'ತೆಂಗಿನ ಮರದ ಸ್ನೇಹಿತರು' ತರಬೇತಿ

Published On :

ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಮತ್ತು ಬೆಂಗಳೂರಿನ ತೆಂಗು ಅಭಿವೃದ್ಧಿ ನಿಗಮಗಳ ಸಂಯುಕ್ತಾಶ್ರಯದಲ್ಲಿ 6 ದಿನಗಳ 'ತೆಂಗಿನ ಮರದ ಸ್ನೇಹಿತರು' ಎಂಬ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಕಾಸರಗೋಡಿನ ಸಿಪಿಸಿಆರ್‌ಐ ಯೋಜನಾ ಸಂಯೋಜಕ ಡಾ. ಎಚ್. ಪಿ. ಮಹೇಶ್ವರಪ್ಪ ಉದ್ಘಾಟಿಸಿದರು. ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ. ಎಮ್. ಹನುಮಂತಪ್ಪ ಆಗಮಿಸಿದ್ದರು.  ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ದಿನೇಶ್ ಇಲಾಖಾ ಯೋಜನೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಜಯಲಕ್ಷ್ಮಿ ಎನ್. ಹೆಗಡೆ ತೆಂಗಿನ ಮರ ಹತ್ತುವ ಯಂತ್ರದ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಕೀಟಶಾಸ್ತ್ರಜ್ಞ ಡಾ. ಎಸ್. ಯು. ಪಾಟೀಲ್ ಮತ್ತು ನರಸಿಂಹ ಆರ್. ಶ್ಯಾನುಭಾಗ್ ಮುಖ್ಯ ತರಬೇತುದಾರರಾಗಿದ್ದಾರೆ. 20 ಜನ ಶಿಬಿರಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇಲಾಖೆಯ ವಿಷಯ ತಜ್ಞ ಚೈತನ್ಯ ಎಚ್.ಎಸ್. ಸ್ವಾಗತಿಸಿದರು. ತರಬೇತಿ ಸಹಾಯಕ ಸಂಜೀವ್ ಕ್ಯಾತಪ್ಪನವರ್ ನಿರೂಪಿಸಿದರು. ವಿಷಯತಜ್ಞ ಜಯಪ್ರಕಾಶ್ ಆರ್. ವಂದಿಸಿದರು.  

24ರಂದು ರಾಜ್ಯಮಟ್ಟದ ವಾಲಿಬಾಲ್
ಕಾರ್ಕಳ: ಪಳ್ಳಿ ಕೊಕೈಲ್ ಫ್ರೆಂಡ್ಸ್ ಆಶ್ರಯದಲ್ಲಿ ಫೆ.24ರಂದು ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಕೂಟ 'ಸ್ನೇಹ ಟ್ರೋಫಿ' ಪಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಪ್ರಥಮ ಸ್ಥಾನಿಗಳಿಗೆ 25 ಸಾವಿರ, ದ್ವಿತೀಯ ಸ್ಥಾನಿಗಳಿಗೆ 15 ಸಾವಿರ ಮತ್ತು ವೈಯಕ್ತಿಕ ಬಹುಮಾನಗಳಿವೆ ಹೆಚ್ಚಿನ ಮಾಹಿತಿಗೆ 9481753972, 9632928692  ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.