ಅಂತರ್ಜಾಲ ಜಾಲದಿಂದ ಮಕ್ಮಲ್ ಟೋಪಿ
ಸಿದ್ದಾಪುರ: ಜಾಹೀರಾತುಗಳನ್ನು ನೀಡಿ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡುವ ಭರವಸೆಯ ಮಾಹಿತಿ ನೀಡಿ ಅದನ್ನು ಪಡೆಯಬೇಕಾದರೆ ಜನರನ್ನು ಮೋಸ ಮಾಡುವ ಪ್ರಯತ್ನ ಹಲವು ಕಂಪನಿಗಳು ಮಾಡುತಿದ್ದು, ಇದರಿಂದ ಅದೆಷ್ಟೋ ಮಂದಿ ಮೋಸಕ್ಕೆ ಒಳಗಾಗಿದ್ದಾರೆ.
ಇಂಥ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಬಿಜು ಎಂಬವರು ಪತ್ರಿಕೆಯಲ್ಲಿ ಬಂದ ಜಾಹೀರಾತು ನೋಡಿ ರು. 10,000 ಮೌಲ್ಯದ ಮೊಬೈಲ್ನ್ನು ಕೇವಲ ರು. 3,359 ಕಡಿಮೆ ಬೆಲೆಗೆ ಪಡೆಯಬಹುದೆಂದು ಬುಕ್ಕಿಂಗ್ ಮಾಡಿದರು. ಒಂದು ವಾರದಲ್ಲೇ ನೆಲ್ಯಹುದಿಕೇರಿ ಅಂಚೆ ಕಚೇರಿಗೆ ಪಾರ್ಸಲ್ ಬಂದಿದ್ದು, ಬಿಜುರವರು ಅದನ್ನು ಪಡೆದುಕೊಳ್ಳಲಿಕ್ಕೆ ಅಂಚೆ ಕಚೇರಿಗೆ ತೆರಳಿ ರು. 3,359 ಕಟ್ಟಿ ಪಾರ್ಸಲ್ ಪಡೆದುಕೊಂಡರು.
ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡಾಗ ಬಾಕ್ಸ್ ತೂಕ ಕಡಿಮೆ ಇರುವುದನ್ನು ಗಮನಿಸಿ ತಕ್ಷಣ ಅದೇ ಸ್ಥಳದಲ್ಲಿ ಪಾರ್ಸಲ್ ಬಿಡಿಸಿ ನೋಡಬೇಕಾದರೆ ಆಶ್ಚರ್ಯ ಕಾದಿತ್ತು.
ಇಡೀ ಬಾಕ್ಸ್ ಬಿಡಿಸಿ ನೋಡಿದರೂ ಮೊಬೈಲ್ ಕಾಣದೆ ಖಾಲಿ ಬಾಕ್ಸ್ ಆಗಿದನ್ನು ಕಂಡು ಬೇಸರಗೊಂಡು ವಿಷಯ ಅಂಚೆ ಕಚೇರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ನಂತರ ಬಿಜುರವರು ಕಂಪನಿಯ ದೂರವಾಣಿಗೆ ಸಂಪರ್ಕಿಸಿದರೆ ಸ್ವಿಚ್ಚ್ ಆಫ್. ದೂರವಾಣಿ ಸಂಖ್ಯೆ ಚಾಲನೆಯಲ್ಲಿ ಇಲ್ಲ ಎಂಬ ಕಾರಣಗಳು ಬರುತ್ತಿದ್ದು ಬೇಸರಗೊಂಡ ಅವರು ಮೋಸಗೊಳಗಾದ ಕಂಪನಿ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲವರಿಗೆ ಕಹಿ ಅನುಭವ: ಈ ಭಾಗದಲ್ಲಿ ಹಲವಾರು ಮಂದಿ ಜಾಹೀರಾತಿನಿಂದ ಮೋಸಗೊಳಗಾಗಿ ಹೇಳಿಕೊಳ್ಳಲಿಕ್ಕೆ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ. ಮಾಲ್ದಾರೆಯ ನಿವಾಸಿಯೊಬ್ಬರಿಗೆ ಕಳೆದ ವಾರವಷ್ಟೆ ವಸ್ತುವೊಂದನ್ನು ಬುಕ್ ಮಾಡಿ ನಂತರ ಅವರಿಗೆ ಬಂದಿದ್ದು ಖಾಲಿ ಬಾಕ್ಸ್ನೊಂದಿಗೆ ಮರದ ಹುಡಿ.
ಕಳೆದ ತಿಂಗಳು ಸಿದ್ದಾಪುರದ ನಿವಾಸಿಯೊಬ್ಬರು ಜಾಹೀರಾತು ನೋಡಿ ಕ್ಯಾಮೆರಾ ಒಂದನ್ನು ಬುಕ್ ಮಾಡಿ ಹಣ ಕಟ್ಟಿ ಪಾರ್ಸಲ್ ಬಿಡಿಸಿ ನೋಡಿದಾಗ ಬಾಕ್ಸ್ನಲ್ಲಿ ಇದ್ದದ್ದು 10 ರುಪಾಯಿ ಮೌಲ್ಯದ ಮೆಹಂದಿ. ಕರಡಿಗೋಡು ನಿವಾಸಿಯೊಬ್ಬರು ಮೊಬೈಲ್ ಒಂದನ್ನು ಬುಕ್ ಮಾಡಿದ ಸಂದರ್ಭ ಸಿಕ್ಕಿದ್ದು ಮೊಬೈಲ್ ಕವರ್ ಮಾತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

