ನಗರಾಡಳಿತ ಚುನಾವಣೆ; ಅಭ್ಯರ್ಥಿಗಳ ವೆಚ್ಚದ ಮೇಲೆ ಆಯೋಗ ನಿಗಾ
ಉಡುಪಿ: ಈ ಬಾರಿ ನಗರಾಡಳಿತ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಚುನಾವಣಾ ಆಯೋಗ ನಿಗಾ ಇಡುತ್ತಿದೆ.
ಲೋಕಸಭಾ-ವಿಧಾನಸಭಾ ಚುನಾವಣೆಯಲ್ಲಿ ಈ ಕ್ರಮ ಜಾರಿಯಲ್ಲಿತ್ತು. ಆದರೆ ನಗರಾಡಳಿತ ಚುನಾವಣೆಗೆ ಅಭ್ಯರ್ಥಿಗಳು ಮೀತಿ ಇಲ್ಲದೆ ಖರ್ಚು ಮಾಡುತ್ತಿದ್ದರು. ಮಾ. 7ರಂದು ನಡೆಯಲಿರುವ ನಗರಾಡಳಿತ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿಗೆ ಮಿತಿ ಹೇರಲಾಗಿದೆ. ಚುನಾವಣೆ ನಂತರ ಅಭ್ಯರ್ಥಿಗಳು ತಾವು ಮಾಡಿದ ಖರ್ಚಿನ ವಿವರಗಳನ್ನು ಆಯೋಗಕ್ಕೆ ಸಲ್ಲಿಸಬೇಕಾಗಿದೆ.
4 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ಜಿಲ್ಲೆಯಲ್ಲಿ ಉಡುಪಿ ನಗರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಕಾರ್ಕಳ ಮತ್ತು ಕುಂದಾಪುರ ಪುರಸಭೆಗಳಲ್ಲಿ ಸೇರಿ ಒಟ್ಟು 4 ನಗರಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗಳ ಬಗ್ಗೆ ಶನಿವಾರ ಉಡುಪಿ ಜಿಲ್ಲಾಧಿಕಾರಿ ಡಾ. ಎಂ. ಟಿ. ರೇಜು ಮತ್ತು ಎಸ್ಪಿ ಡಾ. ಬೋರಲಿಂಗಯ್ಯ ಎಂ. ಬಿ. ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಗರಿಷ್ಠ ರು. 2 ಲಕ್ಷ, ಪುರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಗರಿಷ್ಠ ರು. 1.50 ಲಕ್ಷ ಹಾಗೂ ಪಟ್ಟಣ ಪಂಚಾಯತಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಗರಿಷ್ಠ ರು. 1 ಲಕ್ಷ ಖರ್ಚು ಮಾಡಬಹುದಾಗಿದೆ.
ನಗರಸಭೆಯಲ್ಲಿ ಒಟ್ಟು 35 ವಾರ್ರ್ಡ್ಗಳಿದ್ದು, 88 (17 ಅತೀಸೂಕ್ಷ್ಮ, 40 ಸೂಕ್ಷ್ಮ, 31 ಸಾಮಾನ್ಯ) ಮತಗಟ್ಟೆಗಳಿವೆ. ಕುಂದಾಪುರ ಪುರಸಭೆಯಲ್ಲಿ 23 ವಾರ್ಡುಗಳಿಗೆ 23 (1 ಅತೀಸೂಕ್ಷ್ಮ, 10 ಸೂಕ್ಷ್ಮ, 12 ಸಾಮಾನ್ಯ) ಮತಗಟ್ಟೆಗಳು, ಕಾರ್ಕಳ ಪುರಸಭೆಯಲ್ಲಿ 23 ವಾರ್ಡುಗಳಿಗೆ 23 (9 ಸೂಕ್ಷ್ಮ, 14 ಸಾಮಾನ್ಯ) ಮತಗಟ್ಟೆಗಳು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತಿನ 14 ವಾರ್ಡುಗಳಿಗೆ 14 (2 ಅತಿ ಸೂಕ್ಷ್ಮ, 10 ಸೂಕ್ಷ್ಮ, 2 ಸಾಮಾನ್ಯ) ಮತಗಟ್ಟೆಗಳಿವೆ.
ಒಟ್ಟು ಜಿಲ್ಲೆಯಲ್ಲಿ ಈ 4 ನಗರಾಡಳಿತ ಸಂಸ್ಥೆಗಳಲ್ಲಿ ಒಟ್ಟು 95 ವಾರ್ಡುಗಳಿಗೆ 144 (20 ಅತೀಸೂಕ್ಷ್ಮ, 69 ಸೂಕ್ಷ್ಮ, 59 ಸಾಮಾನ್ಯ) ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 75,518, ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 19,482, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 16,487 ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10,966 ಮತದಾರರು ಸೇರಿ, ಒಟ್ಟು 1,22,453 ಮಂದಿ ಮತದಾರರಿಗೆ ಮತದಾನ ಅರ್ಹತೆ ಇದೆ.
ಈ ಬಾರಿ ಜಿಲ್ಲೆಯ ನಗರಾಡಳಿತ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಓಟಿಂಗ್ ಮೆಶಿನ್ ಬಳಸಲಾಗುತ್ತಿದೆ. ಉಡುಪಿ ನಗರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮತಎಣಿಕೆ ಅಜ್ಜರಕಾಡಿನ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ, ಕುಂದಾಪುರ ಪುರಸಭೆಯ ಮತಎಣಿಕೆ ಕೋಯಕುಟ್ಟಿ ಸಭಾಂಗಣ, ಕಾರ್ಕಳ ಪುಸಭೆಯ ಮತಎಣಿಕೆ ಕಾರ್ಕಳ ಮಿನಿ ವಿಧಾನ ಸೌಧಗಳಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

