ಉಡುಪಿ

ಇಂದು ವಿಜ್ಞಾನ ಮಾದರಿ ಪ್ರದರ್ಶನ

Published On :

ಮಣಿಪಾಲ: ಯುವ ವಿದ್ಯಾರ್ಥಿಗಳಿಗೆ ವಿಜ್ಞಾನದ ಅಗಾಧತೆಯನ್ನು ಪರಿಚಯಿಸುವ, ಅವರಿಗೆ ವಿಜ್ಞಾನದಲ್ಲಿ ಅಭಿರುಚಿ, ವೈಜ್ಞಾನಿಕ ಮನೋಭಾವ ಹುಟ್ಟಿಸುವ ಉದ್ದೇಶದಿಂದ ಮಣಿಪಾಲ ವಿವಿಯು ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಪ್ರಾಯೋಗಿಕ ವಿಜ್ಞಾನ ಶಿಬಿರವನ್ನು ಈ ಬಾರಿಯೂ ಆಯೋಜಿಸಿತ್ತು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ಫೆ.28ರಂದು ಇಲ್ಲಿನ ಫಾರ್ಚೂನ್ ವ್ಯಾಲಿವ್ಯೂ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಕೇಂದ್ರದ ನಿರ್ದೇಶಕ ಡಾ. ಸತ್ಯಮೂರ್ತಿ ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರದರ್ಶನದಲ್ಲಿ ಸುಮಾರು 60 ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವನ್ನು ಜಿಲ್ಲೆ ವಿವಿಧ ಪ್ರೌಢಶಾಲೆಗಳ 450 ವಿದ್ಯಾರ್ಥಿಗಳು ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಉಡುಪಿ ಮತ್ತು ನೆರೆಯ ಜಿಲ್ಲೆಗಳ ಪ್ರೌಢ ಶಾಲೆಗಳ 9ನೇ ತರಗತಿಯ 22 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಈ 5 ದಿನದ ಶಿಬಿರದಲ್ಲಿ ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳಿಗೆ ಇಲ್ಲಿನ ಲೈಫ್ ಸಯನ್ಸ್ ಸೆಂಟರ್ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್, ಭೌಶಶಾಸ್ತ್ರ, ರಸಾಯನಶಾಸ್ತ್ರ, ಜೀವ ವಿಜ್ಞಾನ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಪ್ರತ್ಯಕ್ಷ ಮಾಹಿತಿ ಮತ್ತು ಮಾದರಿಗಳ ರಚನೆ ಬಗ್ಗೆ ಪ್ರಾತ್ಯಕ್ಷಿಕೆ, ತರಬೇತಿ ನೀಡಲಾಗಿದೆ ಎಂದು ಡಾ. ಸತ್ಯಮೂರ್ತಿ ತಿಳಿಸಿದರು.
ಶಿಬಿರಾರ್ಥಿ, ಆಗುಂಬೆ ಎವಿಎಂ ಪ್ರೌಢಶಾಲೆಯ ವಿದ್ಯಾರ್ಥಿ ಸುದರ್ಶನ್ ಹೆಬ್ಬಾರ್ ಮಾತನಾಡಿ, ಈ ಶಿಬಿರದಲ್ಲಿ ಎಲೆಕ್ಟ್ರಾನಿಕ್ಸ್, ವಿವಿಧ ಬಗೆಯ ಎಂಜಿನ್, ಮೊಬೈಲ್, ಕಾರ್ಬೋಹೈಡ್ರಾಕ್ಸೆಡ್ ಇತ್ಯಾದಿಗಳ ಬಗ್ಗೆ ತಾನು ಪಡೆದ ಹೊಸ ಮಾಹಿತಿಗಳನ್ನು ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ವಿಜ್ಞಾನಿ ಡಾ.ಪಿ.ಎಂ. ಗೋಪಿನಾಥ್, ಜಪಾನಿನ ನಗೋಯಾ ವಿವಿಯ ಪ್ರೊ. ಸುಜಿಮಾ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.