ಉಡುಪಿ

ರೋಗ ಬಾರದಂತೆ ಎಚ್ಚರ ಅಗತ್ಯ: ಡಾ.ಕೃಷ್ಣ

Published On :

ಉಡುಪಿ: ರೋಗ ಆಕ್ರಮಿಸಿದ ಮೇಲೆ ಕಂಡುಕೊಳ್ಳುವ ಪರಿಹಾರಕ್ಕಿಂತ ರೋಗ ಬಾರದಿರುವಂತೆ ಎಚ್ಚರ ವಹಿಸುವುದು ಒಳಿತು. ದೈಹಿಕ, ಮಾನಸಿಕವಾದ ನಾನಾ ಚಟುವಟಿಕೆಗಳಿಂದ ಸಂಭಾವ್ಯ ರೋಗ ತಡೆಗಟ್ಟಬಹುದು ಎಂದು ಜಪಾನಿನ ನಿಪ್ಪೋನ್ ಆಯುರ್ವೇದ ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ಕೃಷ್ಣ ಯು.ಕೆ. ಹೇಳಿದ್ದಾರೆ.
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಇತ್ತೀಚಿಗೆ 'ವಿದ್ಯಾರ್ಥಿ ದೆಸೆಯಲ್ಲಿ ಆರೋಗ್ಯದ ಮಹತ್ವ' ಎಂಬ ವಿಚಾರದ ಮೇಲೆ ಅವರು ಮಾತನಾಡಿದರು.
ಆಧುನಿಕ ಯಾಂತ್ರೀಕೃತ ಬದುಕಿನಲ್ಲಿ ದೈಹಿಕ ಶ್ರಮ ವಿರಳವಾಗುತ್ತಿದ್ದು, ಇದರಿಂದ ಮಾನಸಿಕ ಒತ್ತಡ ಹೆಚ್ಚಿ ರೋಗಾಣುಗಳ ಪ್ರವೇಶಕ್ಕೆ ಅವಕಾಶವಾಗುವುದು. ಆಹಾರ ಸ್ವೀಕಾರದಲ್ಲಿ ಸಮತೋಲವನ್ನು, ನಿಯತ ಸಮಯವನ್ನು ಕಾಯ್ದುಕೊಳ್ಳುವುದರಿಂದ ಮಧುಮೇಹ ಮೊದಲಾದ ಅಪರಿಹಾರ್ಯ ರೋಗ ಮನುಷ್ಯನನ್ನು ಮುತ್ತಿಕೊಳ್ಳುತ್ತದೆ ಎಂದು ಹೇಳಿದರು.
ಯೋಗಾಭ್ಯಾಸಗಳಿಂದ, ನಿಯತಕಾಲದಲ್ಲಿ ಸಮತೋಲಿತ ಆಹಾರ ಸ್ವೀಕರಿಸುವುದರಿಂದ ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಎಳುವುದರಿಂದ ಯಾವುದೇ ರೋಗಾದಿಗಳಿಗೆ ಎಡೆ ಮಾಡಿ ಕೊಡದಂತೆ ಅನಾಯಾಸ ಮರಣ ತಂದುಕೊಳ್ಳಬಹುದು ಎಂದು ಡಾ.ಕೃಷ್ಣ ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂಧನ ಭಟ್, ರಾ.ಸೇ. ಯೋಜನೆ ಸಹ ಸಂಯೋಜಕ ಉಪನ್ಯಾಸಕ ಚಂದ್ರಶೇಖರ್ ಇದ್ದರು.
ಕಾರ್ಯಕ್ರಮದಲ್ಲಿ ರಂಜಿತಾ ಪ್ರಾರ್ಥಿಸಿದರು. ಪುನೀತಾ ಸ್ವಾಗತಿಸಿದರು, ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಅಫರೀನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.