ಉಡುಪಿ

ಸಪ್ತಪದಿ ತುಳಿದ ಕಬಡ್ಡಿ ಧೀರೆ

Published On :

ಉಡುಪಿ: ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಭಾರತದ ಕಬಡ್ಡಿ ತಂಡದ ನಾಯಕಿ, ಕನ್ನಡತಿ ಮಮತಾ ಪೂಜಾರಿ ಬುಧವಾರ ಉಡುಪಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಭೋಜ-ಕಿಟ್ಟಿ ಪೂಜಾರಿ ಮಗಳು ಮಮತಾ, ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಸಂಜೀವ-ಇಂದಿರಾ ದಂಪತಿ ಮಗ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಅಬಿಷೇಕ್ ಅವರನ್ನು ವರಿಸಿದರು.
ಥಾಯ್ಲೆಂಡ್‌ನಲ್ಲಿ ಮಧುಚಂದ್ರ: ಉಭಯ ಕುಟುಂಬಗಳ ಸದಸ್ಯರು ಮತ್ತು ಬಂಧು ಮಿತ್ರರು ಸಹಿತ ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ಸರಳವಾಗಿ ಮದುವೆಯಾದ ಈ ಜೋಡಿ, ಮಂದಿನ ವಾರ ಥಾಯ್ಲೆಂಡ್‌ನಲ್ಲಿ ಮಧುಚಂದ್ರ ನಡೆಸಲಿದ್ದೇವೆ ಎಂದು ಸಂತೋಷದಿಂದ ಹೇಳಿಕೊಂಡರು.
ಫಾರ್ಮ್ ನೋಡಿ ಭವಿಷ್ಯ ನಿರ್ಧಾರ: ಇದು ತನ್ನ ಜೀವನ ಅತ್ಯಂತ ಮಧುರ ದಿನ. ಮದುವೆಯಿಂದಾಗಿ ತಾನು ಅನಿವಾರ್ಯವಾಗಿ ಒಂದಷ್ಟು ದಿನ ಕಬಡ್ಡಿಯಿಂದ ದೂರ ಇರಬೇಕಾಗಿದೆ.
ಮುಂದೆ ತನ್ನ ಫಾರ್ಮ್ ನೋಡಿ ಕಬಡ್ಡಿ ಮುಂದುವರಿಸಬೇಕೋ ಬೇಡವೋ ನಿರ್ಧರಿಸುತ್ತೇನೆ ಎಂದು ಮಮತಾ ತಿಳಿಸಿದ್ದಾರೆ.
ಮಮತಾ ಆಟಕ್ಕೆ ನಿರ್ಬಂಧ ಇಲ್ಲ: ಮಮತಾ ತನಗೆ ಇಷ್ಟ ಬಂದಷ್ಟು ಕಾಲ ಕಬಡ್ಡಿ ಆಡಬಹುದು, ತನ್ನಿಂದ ಯಾವುದೇ ನಿರ್ಬಂಧ ಇಲ್ಲ ಎಂದ ಅಭಿಷೇಕ್, ಅವರ ಅಂತಾರಾಷ್ಟ್ರೀಯ ಖ್ಯಾತಿ, ಕಬಡ್ಡಿ ಆಟಗಾರ್ತಿ ಎಂಬ ಕಾರಣಕ್ಕೆ ತಾನು ಅವರನ್ನು ಮದುವೆಯಾಗುತ್ತಿಲ್ಲ, ಅವರ ಸರಳತೆ ಮೆಚ್ಚಿ ಮದುವೆಯಾಗುತ್ತಿದ್ದೇನೆ ಎಂದರು.
ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಮತ್ತು ಕಾರ್ಕಳದ ಶಾಸಕ ಎಚ್. ಗೋಪಾಲ ಭಂಡಾರಿ, ಉಡುಪಿ ಶಾಸಕ ರಘುಪತಿ ಭಟ್, ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಆಗಮಿಸಿ ಮದುಮಕ್ಕಳಿಗೆ ಶುಭ ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.