ಉಡುಪಿ

ಸಾಲ ಪಡೆದು ಹಿಂತಿರುಗಿಸದ ಯುವಕ: ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

Published On :

ಸುಳ್ಯ: ಮದುವೆ ಮಾತುಕತೆ ನಡೆದ ಬಳಿಕ ಯುವತಿಯಿಂದ ಯುವಕ 40 ಸಾವಿರ ಹಣ ಪಡೆದ ಹಾಗೂ ಅವರೊಳಗೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಯುವತಿಯ ಕಡೆಯವರು ಪೋಲೀಸ್ ಠಾಣೆ ಮೆಟ್ಟಿಲೇರಿದ ಹಾಗೂ ಮಾತುಕತೆಯಲ್ಲಿ ಯುವಕ ಪಡಕೊಂಡ ಸಾಲವನ್ನು ವರ್ಷದೊಳಗೆ ಹಿಂತಿರುಗಿಸಲು ನಿರ್ಧಾರವಾದ ಘಟನೆ ನಡೆದಿದೆ.
 ಬೆಳ್ಳಾರೆ ಗ್ರಾಮದ ಕಾವಿನಮೂಲೆಯ, ಬೆಂಗಳೂರಿನಲ್ಲಿ ನರ್ಸ್ ಕೆಲಸ ಮಾಡುತ್ತಿರುವ ಯುವತಿಯೊಬ್ಬಳಿಗೆ ಹಾಗೂ ಕೊಡಿಯಾಲ ಗ್ರಾಮದ ಶ್ರೀಧರ ಎಂಬವರ ಮಗ, ಬೆಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ರಂಜಿತ್ ಎಂಬ ಯುವಕನಿಗೆ ಮೂರು ವರುಷದ ಹಿಂದೆ ಪರಿಚಯವಾಗಿತ್ತು. ಇಬ್ಬರ ಮನೆಯವರಿಗೂ ಪರಸ್ಪರ ಪರಿಚಯವಿದ್ದುದರಿಂದ ಇವರಿಗೆ ಮದುವೆ ಮಾಡುವುದಾಗಿ ಮಾತನಾಡಿ ಕೊಂಡಿದ್ದರು. ಮದುವೆ ಮಾಡಿಸಲು ಮನೆಯವರು ನಿರ್ಧರಿಸಿದ್ದರು. ಮದುವೆ ಮಾತುಕತೆ ನಡೆದ ಬಳಿಕ ರಂಜಿತ್ ಯುವತಿಯ ಕೈಯಿಂದ ರು. 40 ಸಾವಿರವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದ. ಇತ್ತೀಚಿನ ದಿನದಲ್ಲಿ ರಂಜಿತ್ ಹಾಗೂ ಯುವತಿಯ ಮಧ್ಯೆ ಭಿನ್ನಾಭಿಪ್ರಾಯ ಬಂದಿತ್ತೆನ್ನಲಾಗಿದೆ. ಆದ್ದರಿಂದ ಯುವತಿ ತನ್ನಿಂದ ಪಡೆದಿರುವ ಹಣವನ್ನು ಹಿಂತಿರುಗಿಸುವಂತೆ ಹೇಳಿದಳೆಂದೂ, ಆದರೆ ಯುವಕ ಹಣ ನೀಡಲು ಒಪ್ಪದೆ, ಮದುವೆಯಾಗುವಂತೆ ಆಕೆಗೆ ಒತ್ತಡ ಹಾಕತೊಡಗಿದ. ಅದನ್ನು ಒಪ್ಪದ ಆಕೆ ರಂಜಿತ್ ಕಿರುಕುಳ ನೀಡುವ ವಿಷಯ ಮನೆಯಲ್ಲಿ ತಿಳಿಸಿದ್ದು, ಮನೆಯವರು ಪೋಲೀಸ್ ಠಾಣೆ  ಮೆಟ್ಟಿಲೇರಿದರು. ಪೋಲೀಸರು ರಂಜಿತ್‌ನನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದರು. ಈ ವೇಳೆ ಯುವತಿಯ ಕಡೆಯವರು ಮದುವೆಗೆ ಒಪ್ಪದೆ ಯುವತಿಯಿಂದ ಪಡೆದ ಹಣವನ್ನು ಹಿಂತಿರುಗಿಸಲು ಕೇಳಿಕೊಂಡರೆನ್ನಲಾಗಿದೆ. ಮಾತುಕತೆಯಲ್ಲಿ ಯುವಕ ಹಣ ನೀಡಲು ಒಪ್ಪಿದ್ದು, ಒಂದು ವರ್ಷದೊಳಗೆ ಪಡೆದ ಹಣ ನೀಡುವುದಾಗಿ ಲಿಖಿತ ಹೇಳಿಕೆ ನೀಡುವುದರೊಂದಿಗೆ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.