ಸಂಘ ಪರಿವಾರಕ್ಕೆ ಮುಸ್ಲಿಮರಿಂದ ಪಾಠ ಹೇಳಿಸಿಕೊಳ್ಳುವ ಸ್ಥಿತಿ ಬಂದಿದೆ: ಇಬ್ರಾಹಿಂ
ಕಾಪು: 'ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಇದರಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ಮಾಡಬೇಕು ಹೇಳಿ ನಾನು ಸಿದ್ಧನಿದ್ದೇನೆ, ಒಂದು ವೇಳೆ ನನ್ನ ಕೈಯಲ್ಲಿ ಆಗದಿದ್ದರೆ ಶಿರಚ್ಛೇದನ ಮಾಡಿಕೊಳ್ಳುತ್ತೇನೆ'
ಇದು ಮಾಜಿ ಕೇಂದ್ರ ಮಂತ್ರಿ ಸಿ.ಎಂ. ಇಬ್ರಾಹಿಂ ಸಂಘ ಪರಿವಾರಕ್ಕೆ ಹಾಕಿದ ಸವಾಲು.
ಗುರುವಾರ ಕಾಪುವಿನಲ್ಲಿ ಕಾಂಗ್ರೆಸ್ ನಡಿಗೆ ಸಾಮರಸ್ಯದೆಡೆಗೆ ಪಾದಯಾತ್ರೆಯ 3ನೇ ದಿನದ ಕೊನೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
'ಹಿಂದೂ ಧರ್ಮ ಅನವಶ್ಯಕವಾಗಿ ಈ ಸಂಘ ಪರಿವಾರದ ಕೈಯಲ್ಲಿ ಹಾಳಾಗುತ್ತಿದೆಯಲ್ಲಾ ಎಂದು ನಮ್ಮಂತಹ ಮುಸ್ಲಿಮರಿಗೆ ನೋವಾಗುತ್ತಿದೆ. ರಾಮನ ಬಗ್ಗೆ ಈ ಸಂಘ ಪರಿವಾರದವರು ಮುಸ್ಲಿಂಮರಿಂದ ಪಾಠ ಹೇಳಿಸಿಕೊಳ್ಳುವ ಪರಿಸ್ಥಿತಿ ಬಂದಿದೆ' ಎಂದು ಅವರು ಹೇಳಿದರು.
ಉಡುಪಿಗೆ ಈ ಪಾದಯಾತ್ರೆ ಮಾಡುತ್ತಿರುವುದು, ಕೃಷ್ಣ ಮಠಕ್ಕೆ ಹೋಗಿ 'ಕನಕನಿಗೆ ದರ್ಶನ ನೀಡಿದ ಕೃಷ್ಣ ದೇವರೇ ನಿನ್ನ ರಾಜ್ಯದಲ್ಲಿ ಬಿಜೆಪಿಯ ಪಾಪಿಗಳು ತುಂಬಿ ತುಳುಕಾಡುತ್ತಿದ್ದಾರೆ, ಅವರನ್ನೆಲ್ಲಾ ಮುಗಿಸಿ ಬಿಡಯ್ಯ' ಎಂದು ಪ್ರಾರ್ಥಿಸುವುದಕ್ಕೆ ಎಂದು ಇಬ್ರಾಹಿಂ ಹೇಳಿದರು.
ನಮಗೆ ಯಾವ ಹುತ್ತದಲ್ಲಿ ಯಾವ ಹಾವಿದೆ ಎನ್ನುವುದು ಗೊತ್ತಿದೆ, ನಮ್ಮ ಸಿದ್ರಾಮಣ್ಣ ಕೈಯಲ್ಲಿ ಅಧಿಕಾರದ ಪುಂಗಿ ನೀಡಿದರೆ ಎಂತಹ ಹುತ್ತದಲ್ಲಿರುವ ಹಾವುಗಳು ಕೂಡ ಸರಸರಸರ ಅಂತ ಈಚೆಗೆ ಬರುತ್ತವೆ ಎಂದು ಹಾಸ್ಯ ಮಾಡಿದರು.
ತಮ್ಮ ಭಾಷಣದುದ್ದಕ್ಕೂ ವ್ಯಂಗ್ಯ, ಟೀಕೆ, ಹಾಸ್ಯಗಳಿಂದ ಇಬ್ರಾಹಿಂ ನೆರದಿದ್ದವರ ಮನರಂಜಿಸಿ ಸಕತ್ ಚಪ್ಪಾಳೆ ಗಿಟ್ಟಿಸಿಕೊಂಡರು.
ವೇದಿಕೆಯಲ್ಲಿ ಸಂಸದ ಜಯಪ್ರಕಾಶ ಹೆಗ್ಡೆ, ಜನಾರ್ದನ ಪೂಜಾರಿ, ವಸಂತ ಸಾಲ್ಯಾನ್, ಎಂ.ಎ. ಗಫೂರ್, ಗೋಪಾಲ ಭಂಡಾರಿ, ಯು.ಕೆ. ಖಾದರ್ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

