ಉಡುಪಿ ನಗರಸಭೆಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ
ಉಡುಪಿ: ಉಡುಪಿ ನಗರಸಭೆಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ 2008ರಿಂದ ಇದುವರೆಗೆ ನಗರಸಭೆಯ ಎಲ್ಲ ಹೊರಗುತ್ತಿಗೆ, ಖರೀದಿ ಮತ್ತು ಪಾವತಿಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮಾಜಿ ಉಪಾಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಆಗ್ರಹಿಸಿದ್ದಾರೆ.
ನಗರಸಭೆಯಲ್ಲಿ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ನಗರಸಭೆಗೆ ವಾಹನಗಳ ಪೂರೈಕೆ ಮಾಡುವ ಗುತ್ತಿಗೆ, ತ್ಯಾಜ್ಯ ಸಂಗ್ರಹ- ಸ್ವಚ್ಛತಾ ನಿರ್ವಹಣೆ ಗುತ್ತಿಗೆ, ದೂರು ಸ್ವೀಕರಿಸುವ ಸಹಾಯವಾಣಿ ಗುತ್ತಿಗೆ, ನೀರು ಸರಬರಾಜು ವಿಭಾಗದ ಬಿಲ್ಲಿಂಗ್ ಗುತ್ತಿಗೆ, ಒಳಚರಂಡಿ ನಿರ್ವಹಣೆ - ದುರಸ್ತಿ ವಹಿಸಿಕೊಂಡಿರುವ ಗುತ್ತಿಗೆದಾರರ ಟೆಂಡರು ಅವಧಿ ಮುಗಿದಿದ್ದರೂ, ಅವರನ್ನೇ ಮುಂದುವರಿಸಲಾಗಿದೆ.
ನಗರಸಭಾ ಕಾರ್ಯಾಲಯ, ನೀರು ಸರಬರಾಜು ಮತ್ತು ತ್ಯಾಜ್ಯ ಸಂಸ್ಕರಣೆಗೆ ಸಿಬ್ಬಂದಿ ನೇಮಕ, ನಗರಸಭಾ ವ್ಯಾಪ್ತಿಯಲ್ಲಿ ಮರ, ಗೆಲ್ಲುಗಳನ್ನು ಕಡಿಯುವುದು, ದಾರಿ ದೀಪ ನಿರ್ವಹಣೆ, ನೀರಿನ ಕೊಳವೆ ದುರಸ್ತಿ ಇತ್ಯಾದಿ ದುಬಾರಿ ದರದಲ್ಲಿ ಹೊರಗುತ್ತಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನವೀಕೃತ ಪುರಭವನ ಉದ್ಘಾಟನೆಗೆ ರು. 1.43 ಲಕ್ಷ, ನಗರಸಭೆಯ ಬಗ್ಗೆ ಸಾಕ್ಷ್ಯಚಿತ್ರ ತಯಾರಿಕೆಗೆ 1.25 ಲಕ್ಷ, ತಾತ್ಕಾಲಿಕ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ರು. 5 ಲಕ್ಷಗಳನ್ನು ಅನಾವಶ್ಯಕವಾಗಿ ಬಳಸಲಾಗಿದೆ. ನಿರುಪಯೋಗಿ ವಾಹನಗಳನ್ನು ಅತ್ಯಂತ ಕಡಿಮೆ ದರದಲ್ಲಿ ಹರಾಜು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

