'ಆಧಾರ್'ಗೆ ಹೆಚ್ಚಿನ ಕೇಂದ್ರ ತೆರೆಯಲು ಆಗ್ರಹ
ಉಡುಪಿ: ಉಡುಪಿ, ಕುಂದಾಪುರ, ಕಾರ್ಕಳದ ಮುಖ್ಯ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ಗಳಿಗೆ ಫೊಟೋ ತೆಗೆಯುವ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಫೊಟೋ ತೆಗೆಯುವ ಕೇಂದ್ರಗಳನ್ನು ಆರಂಭಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಉಡುಪಿಯ ಅಂಚೆ ಕಚೇರಿಯಲ್ಲಿ ಅಧಾರ್ ಕಾರ್ಡ್ಗೆ ಫೊಟೋ ತೆಗೆಯಲು ಭಾರಿ ಸರದಿ ಸಾಲು ಕಂಡು ಬರುತ್ತಿದೆ. ಕಚೇರಿ ಆರಂಭವಾಗುವುದು ಬೆಳಗ್ಗೆ 9.30 ಗಂಟೆಗೆ, ಆದರೆ, ಮೊದಲು ಬಂದವರಿಗೆ ಆದ್ಯತೆಯಾದ್ದರಿಂದ ಜನರು ಬೆಳಗ್ಗೆ 5 ಗಂಟೆಗೆ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಈಗ ಮಳೆಗಾಲ ಬೇರೆ, ವಿಪರೀತ ಮಳೆ ಬರುತ್ತಿದೆ, ಜನರು ಕೊಡೆ ಹಿಡಿದು ಸರದಿ ಸಾಲಿನಲ್ಲಿ ನಿಲ್ಲುವುದಕ್ಕೆ ಭಾರಿ ಕಷ್ಟ ಪಡುತ್ತಿದ್ದಾರೆ.
ದಿನವೊಂದಕ್ಕೆ ಕೇವಲ 50 ಮಂದಿಯ ಫೊಟೋ ಮಾತ್ರ ತೆಗೆಯುತ್ತಾರೆ. ಆದರೆ, ನೂರಿನ್ನೂರು ಜನರು ಸರದಿಯಲ್ಲಿ ನಿಂತುಕೊಳ್ಳುತ್ತಿದ್ದಾರೆ ಮತ್ತು ಕೊನೆಗೆ ಕೆಲವು ಮಂದಿ ಫೊಟೋ ತೆಗೆಯಲಾಗದೆ ನಿರಾಶರಾಗಿ ಹಿಂತಿರುಗುತ್ತಿದ್ದಾರೆ. ಈ ಹಿಂದೆ ಒಬ್ಬರು ಅರ್ಜಿ ನೀಡಿ, ಫೊಟೋ ತೆಗೆಯಲು ದಿನ ಮತ್ತು ಸಮಯವನ್ನು ನಿಗದಿಪಡಿಸುವ ಕ್ರಮ ಇತ್ತು. ಆದರೆ, ಈಗ ಮನೆಯ ಯಜಮಾನ ಮತ್ತು ಕುಟುಂಬದ ಸದಸ್ಯರೆಲ್ಲರೂ ಸರದಿಯಲ್ಲಿ ನಿಂತು ತಮ್ಮ ಅರ್ಜಿಯನ್ನು ತಾವೇ ನೀಡಿ, ಫೊಟೋ ತೆಗೆಸಿಕೊಳ್ಳಬೇಕು ಎಂದು ಅಂಚೆ ಇಲಾಖೆಯ ಅಧೀಕ್ಷಕರು ತಿಳಿಸಿದ್ದಾರೆ. ಇದು ಭಾರಿ ತೊಂದರೆಗೆ ಕಾರಣವಾಗುತ್ತಿದೆ. ಆದ್ದರಿಂದ ಹಿಂದಿನ ಪದ್ಧತಿ ಅನುಸರಿಬೇಕು, ಮತ್ತು ಫೊಟೋ ತೆಗೆಯುವ ಕಂಪ್ಯೂಟರ್ ಸಂಖ್ಯೆ ಹೆಚ್ಚಿಸಬೇಕು, ಅಂಚೆ ಕಚೇರಿಯಲ್ಲಿ ಮಾತ್ರವಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಫೊಟೋ ತೆಗೆಯುವ ಕೇಂದ್ರಗಳನ್ನು ಆರಂಭಿಸಬೇಕು , ಸ್ಥಳದಲ್ಲಿಯೇ ಕಾರ್ಡು ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

