ಉಡುಪಿ

ಎನ್‌ಪಿಆರ್, ಆಧಾರ್ ಕಾರ್ಡ್ ಎರಡೂ ಒಂದೇ: ಶಾಸಕ ಸ್ಪಷ್ಟನೆ

Published On :

ಉಡುಪಿ: ಈಗಾಗಲೇ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್.ಪಿ.ಆರ್.) ಕಾರ್ಡ್ ಮಾಡಿಸಿಕೊಂಡವರು ಆಧಾರ್ ಕಾರ್ಡ್ ಮಾಡಿಸಬೇಕಾಗಿಲ್ಲ, ಅವೆರಡೂ ಒಂದೇ ಆಗಿವೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ಸೂಕ್ತ ದಾಖಲೆ, ಬಯೋವುಟ್ರಿಕ್ ವಿವರಗಳನ್ನು ನೀಡಿ ಎನ್.ಪಿ.ಆರ್. ಕಾರ್ಡುಗಳನ್ನು ಮಾಡಿಸಿಕೊಂಡಿದ್ದಾರೆ, ಅವರಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಮಂದಿಗೆ ಈ ಎನ್.ಪಿ.ಆರ್. ಕಾರ್ಡುಗಳನ್ನು ಈಗಾಗಲೇ ವಿತರಿಸಲಾಗಿದೆ. ಅವರು ಈಗ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅಂಚೆ ಕಚೇರಿ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
ಎನ್.ಪಿ.ಆರ್. ಕಾರ್ಡ್‌ಗೆ ದಾಖಲೆಗಳನ್ನು ನೀಡಿ ಫೋಟೊ ತೆಗೆಸಿಕೊಂಡವರ ಕಾರ್ಡುಗಳು ಅವರವರ ಮನೆ ವಿಳಾಸಕ್ಕೆ ತಲುಪುತ್ತದೆ. ಆದುದರಿಂದ ಜನರು ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ತಿಳಿಸಿದ್ದಾರೆ.
ದಿನಕ್ಕೆ 50 ಮಂದಿಗೆ ಅವಕಾಶ: ಉಡುಪಿ ಪ್ರಧಾನ
ಅಂಚೆ ಕಚೇರಿಯಲ್ಲಿ ಕಳೆದೆರಡು ದಿನಗಳಿಂದ ಆಧಾರ್ ಕಾರ್ಡ್‌ಗೆ ಫೋಟೊ ತೆಗೆಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಸಾಯಂಕಾಲ ಬರಿಗೈಯಲ್ಲಿ ವಾಪಾಸ್ ಹೋಗುವುದು ಕಂಡುಬಂದಿದೆ.
ಅಂಚೆ ಕಚೇರಿಯಲ್ಲಿ ದಿನಕ್ಕೆ  ಕೇವಲ 50 ಕುಟುಂಬಗಳ ಸೂಕ್ತ ದಾಖಲೆ ಮತ್ತು ಬಯೋವುಟ್ರಿಕ್ ಪಡೆದು ಫೋಟೊ ತೆಗೆಸಲು ಅವಕಾಶ ಇದೆ.
ಅಂಚೆ ಕಚೇರಿಯಲ್ಲಿ ಈ ಪ್ರಕ್ರಿಯೆ ನಿರಂತರವಾಗಿದ್ದು, ಜನರು ಅನಾವಶ್ಯಕವಾಗಿ ಗಡಿಬಿಡಿ ಮಾಡಿ ಅಲ್ಲಿಗೆ ಹೋಗಿ ದಿನವಿಡಿ ಸರದಿಯಲ್ಲಿ ನಿಲ್ಲುವ ಅಗತ್ಯ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.