ಶಿರ್ವ ರೋಟರಿ ಸಂಸ್ಥೆಗೆ ಪ್ರಶಸ್ತಿ; ಅಭಿನಂದನೆ
ಉಡುಪಿ: ರೋಟರಿ ಕ್ಷೇತ್ರದಲ್ಲಿ 42 ವರ್ಷಗಳ ಸೇವಾ ಇತಿಹಾಸವಿರುವ ಇಲ್ಲಿನ ಪ್ರತಿಷ್ಠಿತ ಶಿರ್ವ ರೋಟರಿ ಸಂಸ್ಥೆಗೆ ಉತ್ತಮ ಸಾಧನೆಗಾಗಿ 2012- 13ನೇ ಸಾಲಿನ ಜಿಲ್ಲಾ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ರೋಟರಿ ಅಧ್ಯಕ್ಷ ಮತಾಯಸ್ ಲೋಬೋ, ಕಾರ್ಯದರ್ಶಿ ಎಸ್. ಪಾಂಡುರಂಗ ಕಾಮತ್ ಮತ್ತು ಬಳಗವನ್ನು ಇತ್ತೀಚೆಗೆ ಅಭಿನಂದಿಸಲಾಯಿತು.
ಶಿರ್ವದ ಹೋಟೆಲ್ ಮಿಲನ್ ಸಭಾಂಗಣದಲ್ಲಿ ಜರುಗಿದ ರೋಟರಿ ಕುಟುಂಬ ಸಮ್ಮಿಲನ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ. ಪುಂಡಲೀಕ ಮರಾಠೆ ಮಾತನಾಡಿ, ಶತಮಾನೋತ್ತರ ಇತಿಹಾಸವಿರುವ ಅಂತಾರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಸದಸ್ಯತನ ಪಡೆಯುವುದು ವ್ಯಕ್ತಿಗೆ ಸಿಗುವ ಶ್ರೇಷ್ಟ ಗೌರವವಾಗಿದೆ. ರೋಟರಿಯಲ್ಲಿ ಪ್ರತಿವರ್ಷ ಅಧಿಕಾರ ಬದಲಾವಣೆಯಾಗುತ್ತಿರುವುದರಿಂದ ಹೊಸ ವಿಚಾರಗಳೊಂದಿಗೆ ಜವಾಬ್ದಾರಿತಯತ ನಾಯಕರ ನಿರ್ಮಾಣವಾಗುತ್ತಿದೆ ಎಂದರು. ಸೇವೆ, ಸಹಬಾಳ್ವೆ, ಪ್ರೀತಿ ವಿಶ್ವಾಸದೊಂದಿಗೆ ವಿಶ್ವಮಾನವತೆಯ ಶಾಂತಿ ಸಂದೇಶವನ್ನು ರೋಟರಿ ಜಗತ್ತಿಗೆ ನೀಡುತ್ತಿದೆ ಎಂದರು.
ನಿಯೋಜಿತ ರೋಟರಿ ಅಧ್ಯಕ್ಷ ಲಿಯೊ ನೊರೋನ್ನಾ, ವಿಲಿಯಮ್ ಮಚಾದೊ ಅಭಿನಂದಿಸಿದರು. ಕಾರ್ಯದರ್ಶಿ ಪಾಂಡುರಂಗ ಕಾಮತ್ ತಮ್ಮ ಅನುಭವ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಮತಾಯಸ್ ಲೋಬೋ ವಹಿಸಿದ್ದರು. ಪೂರ್ವಾಧ್ಯಕ್ಷ ಲೂಕಾಸ್ ಡಿಸೋಜ ಸೌಹಾರ್ದ ಆಟಗಳನ್ನು ಸಂಯೋಜಿಸಿದ್ದರು.
ಮಾಜಿ ಸಹಾಯಕ ಗವರ್ನರ್ ಕೆ.ಆರ್. ಪಾಟ್ಕರ್ ನಿರೂಪಿಸಿದರು. ಹಿರಿಯ ರೊಟೇರಿಯನ್ ಡಾ.ಎನ್.ಎಸ್. ಶೆಟ್ಟಿ, ಸುಮಾ ನಾಯಕ್ ಮುಂಬೈ ಉಪಸ್ಥಿತರಿದ್ದರು. ರಘುಪತಿ ಐತಾಳ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

