ಬಾಸೆಲ್ ಕಲಾ ಮೇಳಕ್ಕೆ ತಲ್ಲೂರು ಎಲ್.ಎನ್. ಆಯ್ಕೆ
ಉಡುಪಿ: ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಮಕಾಲೀನ ಕಲಾ ಮೇಳವಾದ ಆರ್ಟ್ ಬಾಸೆಲ್ನ 'ಆರ್ಟ್ ಅನ್ ಲಿಮಿಟೆಡ್' ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಕುಂದಾಪುರ ಮೂಲದ ಕಲಾವಿದ ತಲ್ಲೂರು ಎಲ್.ಎನ್. ಆಯ್ಕೆ ಆಗಿದ್ದಾರೆ.
ಈ ತನಕ ಬೆರಳೆಣಿಕೆಯ ಭಾರತೀಯ ಕಲಾವಿದರು ಮಾತ್ರ ಪಾಲ್ಗೊಂಡಿರುವ ಈ ಕಲಾಮೇಳ ಜೂ. 13ರಿಂದ 16ರ ತನಕ ಸ್ವಿಜರ್ಲ್ಯಾಂಡ್- ಜರ್ಮನಿ ಗಡಿ ಭಾಗದಲ್ಲಿರುವ ಬಾಸೆಲ್ ನಗರದಲ್ಲಿ ನಡೆಯಲಿದೆ. ಈ ಪ್ರದರ್ಶನದಲ್ಲಿ ಮುಂಬಯಿಯ ಕೆಮೊಲ್ಡ್ ಮತ್ತು ದಿಲ್ಲಿಯ ನೇಚರ್ ಮೋರ್ತಾ ಗ್ಯಾಲರಿಗಳು ಜೊತೆಯಾಗಿ ತಲ್ಲೂರು ಎಲ್.ಎನ್. ಅವರನ್ನು ಪ್ರಾಯೋಜಿಸಿವೆ.
ತಲ್ಲೂರು ಎಲ್.ಎನ್. ಅವರ 'ವೆನಿ, ವಿಡಿ, ವಿಸಿ' ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿದ್ದು, ಕರಾವಳಿ ಜಿಲ್ಲೆಗಳ ಜೊತೆ ಬಾಸೆಲ್ ಮಿಷನರಿಗಳ ನಿಡುಗಾಲದ ಸಂಬಂಧಗಳ ಹಿನ್ನೆಲೆಯಲ್ಲಿ ಅವರದೇ ಕೊಡುಗೆಯಾದ ಹೆಂಚುಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವ ಕಲಾಕೃತಿ ಮೂಲ ಬಾಸೆಲ್ ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಮಹತ್ವದ್ದೆನಿಸಿದೆ.
ಜಗತ್ತಿನಾದ್ಯಂತ ಆಯ್ದ 79 ಮಂದಿ ಕಲಾವಿದರು ಈ 'ಆರ್ಟ್ ಅನ್ ಲಿಮಿಟೆಡ್' ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿ ಜಗತ್ತಿನ ಒಟ್ಟು 300 ಗ್ಯಾಲರಿಗಳು ತಮ್ಮ ಕಲಾವಿದರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಿದ್ದು, ಜಗತ್ತಿನ ಎಲ್ಲ ಪ್ರಮುಖ ಸಮಕಾಲೀನ ಕಲಾವಿದರು ಇಲ್ಲಿ ಪ್ರದರ್ಶನಗೊಳ್ಳಲಿದ್ದಾರೆ. ಇತ್ತೀಚೆಗೆ ತಾನೇ ತಲ್ಲೂರ್ ಅವರು ತಮ್ಮ ಸಮಕಾಲೀನ ಕಲಾಕೃತಿಗಳಿಗಾಗಿ ವಿಶ್ವಪ್ರತಿಷ್ಠಿತ 'ಸ್ಕೋಡ- 2012' ಪ್ರಶಸ್ತಿಯನ್ನು ರು. 10 ಲಕ್ಷ ನಗದು ಬಹುಮಾನವನ್ನೂ ಗೆದ್ದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

