ಸುದ್ದಿ ಸಂಕ್ಷೇಪ
ಕರಾವಳಿಯಲ್ಲಿ ಮಳೆ ಬಿರುಸು
ಮಂಗಳೂರು: ನಗರದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಮಳೆ ಸುರಿದಿದ್ದು, ದಿನವಿಡೀ ಮೋಡ ಕವಿದ ವಾತಾವರಣ, ಮಳೆ ಇತ್ತಾದರೂ, ಮುಸ್ಸಂಜೆ ವೇಳೆ ಬಿರುಸುಗೊಂಡಿತ್ತು. ಗುರುವಾರ ಬೆಳಗ್ಗಿನವರೆಗೆ ಮಂಗಳೂರಿನಲ್ಲಿ 31.3 ಮಿ.ಮೀ., ಹೆಚ್ಚು ಮಳೆ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ಕಾಲೇಜಿನ ಬಳಿಯಿರುವ ದೊಡ್ಡ ತಿರುವಿನಲ್ಲಿ ಮಳೆ ನೀರು ಹೋಗಲು ಸ್ಥಳಾವಕಾಶವಿಲ್ಲದೆ ಅರ್ಧ ರಸ್ತೆಯನ್ನು ಆವರಿಸಿತ್ತು. ಪಂಪ್ವೆಲ್ ವೃತ್ತದ ಪೆಂಟಗಾನ್ ಹೊಟೇಲ್ ಮುಂಭಾಗದಲ್ಲಿ ರಸ್ತೆಯ ಬದಿಯನ್ನು ಅಗೆದ ಪರಿಣಾಮ ಡಾಮರು ಕಿತ್ತು ಹೋಗಿದ್ದು, ಮಳೆ ನೀರು ತುಂಬಿ ನಡೆದಾಡಲು ಜನ ಪರದಾಡಿದರು. ಕಲ್ಲಾಪಿನಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್ನಲ್ಲಿ ಮಳೆ ನೀರು ತುಂಬಿಕೊಂಡಿದೆ. ರಸ್ತೆ ಬದಿಯ ಗದ್ದೆಗಳಲ್ಲಿ ನೀರು ತುಂಬಿದ್ದು, ಪ್ಲಾಸ್ಟಿಕ್, ಕಸಕಡ್ಡಿಗಳು ತೇಲಾಡುತ್ತಿವೆ.
ಮಳೆ ಸುರಿದ ವಿವರ: ಪುತ್ತೂರು- 7.06 ಮಿ.ಮೀ., ಮೂಡುಬಿದಿರೆ- 6.2 ಮಿ.ಮೀ., ಬಂಟ್ವಾಳ- 2.51 ಮಿ.ಮೀ., ಸುಳ್ಯ- 1.2 ಮಿ.ಮೀ., ಕಡಬ- 1.2 ಮಿ.ಮೀ. ಮಳೆ ಸುರಿದ ವರದಿಯಾಗಿದೆ.
ಉಡುಪಿ ವರದಿ: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಗುರುವಾರ ಬಿರುಸಿನ ಮಳೆಯಾಗಿದೆ.
ಮಂಗಳವಾರ ಮತ್ತು ಬುಧವಾರ ಮೋಡ ಕವಿದ ವಾತವರಣವಿತ್ತೆ ಹೊರತು ಮಳೆ ಬಾರದೆ ನಿರಾಶೆ ಮೂಡಿಸಿತ್ತು. ಆದರೆ ಗುರುವಾರ ಮುಂಜಾನೆ ಹೊತ್ತು ಧಾರಕಾರವಾಗಿ ಸುರಿದ ಮಳೆ ಮಧ್ಯಾಹ್ನದ ನಂತರದಲ್ಲಿ ಮತ್ತೆ ಆರಂಭಗೊಂಡು ಉಡುಪಿ ಸೇರಿದಂತೆ ಕಾಪು, ಕೋಟ, ಕುಂದಾಪುರ, ಕಾರ್ಕಾಳದಲ್ಲಿ ಬಿರುಸಿನ ಮಳೆಯಾಗಿದೆ.
ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಸರಾಸರಿ 59.70 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 99.50 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 46.80 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 32.8 ಮಿ.ಮೀ. ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

