ಸುದ್ದಿ ಸಂಕ್ಷೇಪ
ತ್ರಾಸಿ ಬೀಚ್ನಲ್ಲಿ ಎಚ್ಚರಿಕೆ ಫಲಕ ಅಳವಡಿಕೆ
ಮರವಂತೆ: ತ್ರಾಸಿ ಬೀಚ್ಗೆ ಪ್ರತಿದಿನ ನೂರಾರು ಪ್ರವಾಸಿಗಳು ಬರುತ್ತಾರೆ. ಅವರಿಗೆಲ್ಲ ಸಮುದ್ರ ಒಂದು ಪ್ರಮುಖ ಆಕರ್ಷಣೆ. ಹೊರಗಿನಿಂದ ಬರುವ ಪ್ರವಾಸಿಗಳಿಗೆ ಸಮುದ್ರಕ್ಕೆ ಇಳಿಯುವುದರ ಅಪಾಯದ ಕುರಿತು ಮುನ್ನೆಚ್ಚರಿಕೆ ನೀಡಲು ಗಂಗೊಳ್ಳಿಯ ಸಮಾಜ ಸೇವಾ ಸಂಸ್ಥೆ 24್ಗ7 ಹೆಲ್ಪ್ಲೈನ್ ಹಾಗೂ ಸ್ಥಳೀಯ ದಾನಿಗಳ ನೆರವು ಪಡೆದು ಬೀಚ್ನಲ್ಲಿ ಎಂಟು ಕಡೆ ಎಚ್ಚರಿಕೆಯ ಫಲಕ ಅಳವಡಿಸಿದೆ. ಕೆಲವರು ಹಿಂದೆಮುಂದೆ ನೋಡದೆ ಸಮುದ್ರಕ್ಕಿಳಿಯುತ್ತಾರೆ. ಇಲ್ಲಿ ಸಮುದ್ರ ಆಳವಾಗಿದೆ. ಈಗ ಮಳೆಗಾಲವಾದ್ದರಿಂದ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಫಲಕ ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಗುರುವಾರ ಗಂಗೊಳ್ಳಿಯ ಕರಾವಳಿ ರಕ್ಷಣಾ ಪೊಲೀಸ್ ಪಡೆಯ ನಿರೀಕ್ಷಕ ಕೆ. ತಾರಾನಾಥ ಮತ್ತು ಗಂಗೊಳ್ಳಿ ಠಾಣೆಯ ಉಪ ನಿರೀಕ್ಷಕ ಎಸ್. ಸಂಪತ್ ಕುಮಾರ್ ಚಾಲನೆ ನೀಡಿ ಸಂಸ್ಥೆಯ ಸಮಾಜಮುಖಿ ಚಿಂತನೆಯನ್ನು ಶ್ಲಾಘಿಸಿದರು. ಸಂಸ್ಥೆಯ ಅಧ್ಯಕ್ಷ ಮಹಮದ್ ಇಬ್ರಾಹಿಂ, ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸದಸ್ಯ ಎಸ್. ಜನಾರ್ದನ, ಪೊಲೀಸ್ ಸಿಬ್ಬಂದಿ ಇದ್ದರು.
ಶಾಲಾ ಚೀಲ, ಪುಸ್ತಕ ವಿತರಣೆ
ಉಡುಪಿ: ಬೆಂಗಳೂರು ಡೆಲ್ ಇಂಡಿಯಾ ಕಂಪನಿ ಮತ್ತು ಯೂತ್ ಫಾರ್ ಸೇವಾ ಸಂಘಟನೆ ಸಹಭಾಗಿತ್ವದಲ್ಲಿ ಶಿರ್ವ ಹಿಂದೂ ಹಿ.ಪ್ರಾ. ಶಾಲೆ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ, ಲೇಖನ ಸಾಮಾಗ್ರಿಗಳನ್ನು ಇತ್ತೀಚೆಗೆ ವಿತರಿಸವಾಯಿತು. ಶಿರ್ವ ಮಹಿಳಾ ಮಂಡಳಿ ಅಧ್ಯಕ್ಷೆ ಬಬಿತಾ ಜಗದೀಶ್ ಅರಸ್ ವಿತರಿಸಿದರು. ಶಾಲಾ ಸಂಚಾಲಕ ವರ್ವಾಡಿ ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಲಿಲ್ಲಿ ನಜ್ರೆತ್ ಸ್ವಾಗತಿಸಿದರು. ಸಹ ಶಿಕ್ಷಕ ಪ್ರಭಾಕರ ರಾವ್ ನಿರೂಪಿಸಿದರು. ಸೀತಾರಾಮ ಪ್ರಭು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

