ಗಿಡ, ಮರಗಳಿಗೂ ಬದುಕುವ ಹಕ್ಕಿದೆ: ನ್ಯಾ.ನಾಗಜ್ಯೋತಿ ಕೆ.ಎ.
ಉಡುಪಿ: ಶುದ್ಧ ಪರಿಸರದಲ್ಲಿ ಮಾನವರ ಜೊತೆಗೆ ಸುತ್ತಮುತ್ತಲಿರುವ ಗಿಡ ಮರಗಳಿಗೂ ಜೀವಿಸುವ ಹಕ್ಕಿದೆ. ಗಿಡ - ಮರಗಳು ಹೇಗೆ ಇವೆಯೋ ಅವುಗಳನ್ನು ಹಾಗೆಯೇ ಬದುಕಲು ಬಿಡುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಕೆ.ಎ. ಹೇಳಿದ್ದಾರೆ.
ಗುರುವಾರ ಇಲ್ಲಿನ ಆದಿಉಡುಪಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 'ವಿಶ್ವ ಪರಿಸರ ದಿನಾಚರಣೆ'ಯ ಅಂಗವಾಗಿ ಹಮ್ಮಿಕೊಂಡ 'ಕಾನೂನು ಮಾಹಿತಿ ಕಾರ್ಯಕ್ರಮ' ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಭಕ್ಷಣೆ: ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಪ್ರಸಾದ್ ಶೆಟ್ಟಿ ಮಾತನಾಡಿ, ಕಾನೂನು ಇದ್ದರೂ ಏನೂ ಮಾಡದ ಕಾರಣ ಪರಿಸರ ಭಕ್ಷಣೆಯಾಗುತ್ತಿದೆ. ಕಾನೂನು ಎಲ್ಲಿ, ಹೇಗೆ ಬದಲಾಗಬೇಕೆಂದರೆ, ಅಗತ್ಯ ಇರುವವರಿಗೆ ಭೂಮಿ, ನೀರು ಸಿಗುವಂತೆ ಮಾಡಬೇಕು. ಆದರೆ, ಇವೆಲ್ಲಾ ಇಂದು ಅಗತ್ಯವಿರುವರಿಗೆ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಅಗತ್ಯ ಇಲ್ಲದವರು ಭೂಮಿ, ನೀರು, ಗಾಳಿ ಸಹಿತ ಪರಿಸರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮಗಳು ಜರಗುತ್ತಿಲ್ಲ, ಆದ್ದರಿಂದ ಕಾನೂನು ಬದಲಾಯಿಸುವ ಬಗ್ಗೆ ವಿಮರ್ಶೆ ನಡೆಯಬೇಕು ಎಂದರು.
ತಾಯಿಗಿಂತಲೂ ಹೆಚ್ಚು: ಪರಿಸರ ತಾಯಿಗಿಂತಲೂ ಹೆಚ್ಚು ಮಹತ್ವದ್ದು. ಅದಿಲ್ಲದೆ ಬದುಕು ಸಾಧ್ಯವೇ ಇಲ್ಲ. ಪರಿಸರ ಸರಿಯಾಗಿದ್ದರೆ ಸಮಾಜದ ಭೌದ್ಧಿಕ, ಆಧ್ಯಾತ್ಮಿಕ, ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂದಾಪುರ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಶೆಟ್ಟಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಮಾಧವ ಆಚಾರ್ ಎ., ಉಡುಪಿ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಆದಿ ಉಡುಪಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ. ರಾಮದಾಸ್ ಭಟ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

