45,000 ಹೆಕ್ಟೇರ್ನಲ್ಲಿ ಮುಂಗಾರು ಬತ್ತ ಬೆಳೆ ನಿರೀಕ್ಷೆ
ಉಡುಪಿ: ಜಿಲ್ಲೆಯಲ್ಲಿ ಈ ವರ್ಷ ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬತ್ತದ ಬೆಳೆಗೆ ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಬತ್ತದ ಬೀಜ, ರಸಗೊಬ್ಬರಗಳನ್ನು ದಾಸ್ತಾನಿರಿಸಿ ರೈತರಿಗೆ ವಿತರಿಸಲಾಗುತ್ತಿದೆ.
ಉಡುಪಿ ತಾಲೂಕಿನಲ್ಲಿ 18,500 ಹೆಕ್ಟೇರ್, ಕುಂದಾಪುರ ತಾಲೂಕಿನಲ್ಲಿ 18,000 ಹೆಕ್ಟೇರ್ ಹಾಗೂ ಕಾರ್ಕಳ ತಾಲೂಕಿನಲ್ಲಿ 8500 ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬೆಳೆ ಗುರಿ ಇದೆ.
ಜಿಲ್ಲೆಯ ಸರಾಸರಿ ವಾಡಿಕೆ ಮಳೆ ಪ್ರಮಾಣ 4182 ಮಿ.ಮೀ. ಇದ್ದು, ಜೂನ್ ಅಂತ್ಯದವರೆಗಿನ 1272.70 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ.
ಈ ಬಾರಿ ಈವರೆಗೆ 2 ವಾರಗಳಲ್ಲಿ 849.40 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ. ಬತ್ತದ ಬೀಜ ಬಿತ್ತನೆಗೆ ಇದು ಉತ್ತಮ ಕಾಲವಾಗಿದೆ.
ಬೀಜ ಪೂರೈಕೆ ಇದೆ: ಜಿಲ್ಲೆಯಲ್ಲಿ ರೈತರಿಗೆ ಪೂರೈಕೆಗೆ 2060 ಕ್ವಿಂಟಾಲ್ನಷ್ಟು ಬತ್ತಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಎಂಒ 4 ತಳಿಯ ಬತ್ತದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದುದರಿಂದ 1825 ಕ್ವಿಂಟಾಲಿನಷ್ಟು ಎಂಒ 4 ತಳಿಯ ಬೀಜ ತರಿಸಲಾಗಿದ್ದು, ಜಿಲ್ಲೆಯ ಎಲ್ಲಾ 9 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಬೀಜಕ್ಕೆ ಪ್ರತಿ ಕೆ.ಜಿ.ಗೆ ರು. 7 ರಷ್ಟು ಸಹಾಯಧನ ಕೂಡ ಇದೆ. ಈ ಬಾರಿ ಇದುವರೆಗೆ 3,873 ಮಂದಿ ರೈತರು 1613 ಕ್ವಿಂಟಾಲಿನಷ್ಟು ಬೀಜ ಖರೀದಿಸಿದ್ದಾರೆ. ಇನ್ನೂ ಅಗತ್ಯವಿರುವ ರೈತರು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.
ಗೊಬ್ಬರ ಕೊರತೆ ಇಲ್ಲ: ಜಿಲ್ಲೆಯ ರಸಗೊಬ್ಬರಗಳ ದಾಸ್ತಾನು ಕೂಡ ಸಮರ್ಪಕವಾಗಿದ್ದು, ಕ.ರಾ. ಸಹಕಾರ ಮಾರಾಟ ಮಹಾಮಂಡಳಿಯ ಕುಂದಾಪುರ ಶಾಖೆ, ಸಹಕಾರಿ, ಖಾಸಗಿ ಮಾರಾಟ ಮಳಿಗೆಗಳಲ್ಲಿ 1810 ಮೆಟ್ರಿಕ್ ಟನ್ಗಳಷ್ಟು ವಿವಿಧ ರಸಗೊಬ್ಬರ ದಾಸ್ತಾನಿದೆ. ಅದಕ್ಕೂ ಸರ್ಕಾರದ ಸಹಾಯಧನ ಇದೆ. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಜೊತೆಗೆ, ಜಿಂಕ್ ಸಲ್ಫೇಟ್, ಬೋರಾಕ್ಸ್, ಸುಣ್ಣ, ಸಾವಯವ ಗೊಬ್ಬರಗಳು ಲಭ್ಯವಿದ್ದು, ಅಗತ್ಯ ಇರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಸಹಾಯಧನದಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

