ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಬಬಿತಾ ಜಗದೀಶ್ ಅರಸ್
ಉಡುಪಿ: ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸಿ ಸಾಮರಸ್ಯದ ಜೀವನಕ್ಕೆ ಪ್ರೇರಣೆ ನೀಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ. ಸ್ವಾವಲಂಬನೆಯ ಜತೆಗೆ ತಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಜಗದೀಶ್ ಅರಸ್ ಹೇಳಿದ್ದಾರೆ.
ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳ ಸಭಾಂಗಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟಕಲ್ಲು ಒಕ್ಕೂಟದ ವೈಷ್ಣವಿ ಹಾಗೂ ಭಾರ್ಗವಿ ಸ್ವಸಹಾಯ ತಂಡಗಳ 8ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಶಿರ್ವ ಗ್ರಾಪಂ ಸದಸ್ಯ ಕೆ. ರಾಮರಾಯ ಪಾಟ್ಕರ್ ವಹಿಸಿದ್ದರು. ಈ ಸಂದರ್ಭ ಬೆಳ್ಳಿ, ಕಂಚು, ಹಿತ್ತಾಳೆಯಿಂದ ದೇವ- ದೈವಗಳ ವಿಗ್ರಹ ರಚಿಸುವ ಕರಕುಶಲ ಕಲಾಗಾರ್ತಿ ಶಂಕರಪುರ ಪೂರ್ಣಿಮಾ ಆಚಾರ್ಯ ಮತ್ತು ಮದ್ಯವರ್ಜನ ಶಿಬಿರದ ಮೂಲಕ ಪರಿವರ್ತನೆಗೊಂಡು ಕಳೆದ 6 ವರ್ಷಗಳಿಂದ ಸ್ವಾವಲಂಬಿ, ಮಾದರಿ ಕೌಟುಂಬಿಕ ಜೀವನ ನಡೆಸುತ್ತಿರುವ ತಂಡದ ಸದಸ್ಯೆ ಜಲಜಾ ಅವರ ಪತಿ ಬಂಟಕಲ್ಲು ತುಕ್ರ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ ಶುಭಾಶಂಸನೆಗೈದರು. ಗ್ರಾಮಾಭಿವೃದ್ಧಿ ಯೋಜನೆ ಶಿರ್ವ ವಲಯ ಮೇಲ್ವಿಚಾರಕ ಮೋಹನ್, ಸೇವಾ ಪ್ರತಿನಿಧಿ ಗಣಪತಿ ಪ್ರಭು ಪಾಲಮೆ ವೇದಿಕೆಯಲ್ಲಿದ್ದರು.
ಒಕ್ಕೂಟದ ಮೂಲಕ ಬಂದ ಲಾಭಾಂಶ ಹಣವನ್ನು ಸದಸ್ಯರಿಗೆ ವಿತರಿಸಲಾಯಿತು. ವಸಂತಿ ಗೋಪಾಲ್, ತಂಡದ ಮಾಜಿ ಅಧ್ಯಕ್ಷೆ ಶಕುಂತಳಾ ಪ್ರಭು ಇದ್ದರು. ಸ್ವಸಹಾಯ ತಂಡದ ಅಧ್ಯಕ್ಷೆ ಗೀತಾ ವಾಗ್ಲೆ ಸ್ವಾಗತಿಸಿದರು. ರೋಹಿಣಿ ನಾಯಕ್ ವರದಿ ವಾಚಿಸಿದರು. ಶೋಭಾ ಆರ್. ಪಾಟ್ಕರ್ ಪ್ರಾರ್ಥಿಸಿದರು. ಭವಾನಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

