ಉಡುಪಿ

ರೀಟೈಲ್ ಲೋನ್ ಕೇಂದ್ರ ಉದ್ಘಾಟನೆ

Published On :

ಉಡುಪಿ: ಕಾರ್ಪೋರೇಶನ್ ಬ್ಯಾಂಕಿನ ರೀಟೈಲ್ ಲೋನ್ ಕೇಂದ್ರದ ಉದ್ಘಾಟನೆಯನ್ನು ವಲಯ ಕಚೇರಿಯಲ್ಲಿ ಇತ್ತೀಚಿಗೆ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ಶ್ರೀವಾತ್ಸವ ಉದ್ಘಾಟಿಸಿದರು.  ಮಂಗಳೂರು ಪ್ರಧಾನ ಕಚೇರಿಯ ಮಹಾ ಪ್ರಬಂಧಕ ವಿ. ತಂಗರಾಜು ಇದ್ದರು. ಎನ್. ಮಂಜುನಾಥ ಶೆಣೈ ಸ್ವಾಗತಿಸಿದರು. ರೀಟೈಲ್ ಲೋನ್ ಕೇಂದ್ರದ ಮುಖ್ಯ ಪ್ರಬಂಧಕ ಎಂ. ಲಕ್ಷ್ಮಣ ಪ್ರಭು ವಂದಿಸಿದರು.
ಶಾಸಕ ಪ್ರಮೋದ್‌ಗೆ ಅಭಿನಂದನೆ
ಉಡುಪಿ: ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಪದಾಧಿಕಾರಿಗಳು ಉಡುಪಿ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಉಡುಪಿ ಕಚೇರಿಯಲ್ಲಿ ಇತ್ತೀಚಿಗೆ ಅಭಿನಂದಿಸಿದರು. ಸಂಘದ ಅಧ್ಯಕ್ಷೆ ಯಮುನಾ ಆರ್. ಕುಂದರ್, ಕಾರ್ಯದರ್ಶಿ ವೇದಾವತಿ, ಕೋಶಾಧಿಕಾರಿ ಬೇಬಿ ಶೆಟ್ಟಿ ಮತ್ತು ಗೌರವ ಸಲಹೆಗಾರ ಎಸ್.ಎಸ್. ತೋನ್ಸೆ ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸಹಕರಿಸುವಂತೆ ಮನವಿ ಮಾಡಿದರು.
ರಿಕ್ಷಾ ಚಾಲಕರಿಂದ
ಪುಸ್ತಕ ವಿತರಣೆ
ಮಣಿಪಾಲ: ಇಲ್ಲಿನ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ ವತಿಯಿಂದ ರಾಜೀವ ನಗರದ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ವಿಜಯ ಪುತ್ರನ್ ಹಿರೇಬೆಟ್ಟು ವಿತರಿಸಿದರು. ಸಂಘದ ಉಪಾಧ್ಯಕ್ಷ ಭರತ್ ತಿಂಗಳಾಯ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಭು, ಹರೀಶ್ ಪೂಜಾರಿ, ಐತಪ್ಪ ನಾಯಕ್, ಶ್ರೀಧರ ದೇವಾಡಿಗ, ರಿಕ್ಷಾ ಚಾಲಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ದಾಮೋದರ ನಾಯ್ಕ್, ಸುರೇಂದ್ರ ನಾಯ್ಕ ಇದ್ದರು.  ಶಾಲಾಭಿವೃದ್ಧಿ ಸಮಿತಿಯ ಉಮಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರಕಾಶ್ ಪ್ರಭು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್. ಪ್ರಸಾದ್ ವಂದಿಸಿದರು. ವಿನೋದ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.