'ಎಲ್ಲೂ ಪಾಲನೆಯಾಗದ ಸಾಮಾಜಿಕ ನ್ಯಾಯ ಕೃಷಿಕನಿಗೆ ಕುಮ್ಕಿ ಭೂಮಿ ನೀಡುವಾಗ ಯಾಕೆ?'
ಉಡುಪಿ: ಸರ್ಕಾರಿ ಕಚೇರಿಗಳಲ್ಲಿ ಮೇಲಧಿಕಾರಿಗಳು ಮತ್ತು ಕೆಳಗಿನ ಸಿಬ್ಬಂದಿ ನಡುವೆ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ, ರಾಷ್ಟ್ರ- ರಾಜ್ಯ ಮಟ್ಟದ ಜನಪ್ರತಿನಿಧಿಗಳು ಮತ್ತು ಪಂಚಾಯತ್ ಮಟ್ಟದ ಜನಪ್ರತಿನಿಧಿಗಳಿಗೆ ನೀಡಲಾಗುವ ಸವಲತ್ತುಗಳಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ. ಹಾಗಿರುವಾಗ ಈಗಾಗಲೇ ಭೂಮಿ ಇರುವ ಕೃಷಿಕನಿಗೆ ಕುಮ್ಕಿ ಭೂಮಿ ನೀಡುವ ವಿಷಯದಲ್ಲಿ ಸಾಮಾಜಿಕ ನ್ಯಾಯ ಯಾಕೆ ಪಾಲನೆಯಾಗಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಪ್ರಶ್ನಿಸಿದೆ.
ರಾಜ್ಯ ಸರ್ಕಾರ ಕೃಷಿಕರಿಗೆ ಕುಮ್ಕಿ (ಕೃಷಿಗೆ ಬಳಕೆಯಾಗುವ ಸೊಪ್ಪುಸದೆಗಳನ್ನು ಸಂಗ್ರಹಿಸುವುದಕ್ಕಾಗಿಯೇ ಮೀಸಲಾಗಿಟ್ಟಿರುವ) ಭೂಮಿ ಹಕ್ಕನ್ನು ನೀಡುವುದಕ್ಕೆ ನಿರ್ಧರಿಸಿದೆ. ಆದರೆ ಇದನ್ನು ಕೃಷಿಕರಲ್ಲದವರು, ಅಧಿಕಾರಿಗಳು ವಿರೋಧಿಸುತ್ತಿದ್ದಾರೆ. ಕುಮ್ಕಿ ಹಕ್ಕು ನೀಡುವ ಸರ್ಕಾರದ ನಿರ್ಧಾರದಿಂದ, ಭೂಮಿ ಇಲ್ಲದ ಬಡವರನ್ನು ಮರೆತು ಈಗಾಗಲೇ ಭೂಮಿ ಇರುವ ಕೃಷಿಕರಿಗೆ ಇನ್ನೂ ಭೂಮಿ ನೀಡಿದಂತಾಗುತ್ತದೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ಕಳಂಕ, ಕುಂದುಂಟಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ನಮ್ಮ ದೇಶದ ವ್ಯವಸ್ಥೆಯಲ್ಲಿಯೇ ಸಾಮಾಜಿಕ ನ್ಯಾಯ ಇಲ್ಲ, ಹಾಗಿರುವಾಗ ಕೃಷಿಕರಿಗೆ ಸವಲತ್ತು ನೀಡುವ ವಿಷಯ ಬಂದಾಗ ಮಾತ್ರ ಸಾಮಾಜಿಕ ನ್ಯಾಯದ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಕೃಷಿಕ ಸಮಾಜದ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಹೆಬ್ಬಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಕೃಷಿಕರಿಗೆ ಕುಮ್ಕಿ ಹಕ್ಕು ನೀಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಅವರು, ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಒಟ್ಟು 3,47,889 ಹೆಕ್ಟೇರ್ ಕೃಷಿ ಭೂಮಿ ಇದ್ದು, ಅದಕ್ಕೆ ಹೊಂದಿಕೊಂಡು 6,853 ಹೆಕ್ಟೇರ್ ಕುಮ್ಕಿ ಭೂಮಿ ಇದೆ. ಇದರಲ್ಲಿ ಶೇ.25 ಭೂಮಿಯನ್ನು ಪರಿಶಿಷ್ಟ ಜಾತಿ- ಪಂಗಡದವರಿಗೆ ಮೀಸಲಿಡಲಾಗಿದೆ. ಆದ್ದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.
ಕುಮ್ಕಿ ಭೂಮಿಯ ಹಕ್ಕು ನೀಡುವುದರಿಂದ ದೊಡ್ಡ ರೈತರಿಗೆ ಮಾತ್ರ ಲಾಭವಾಗುತ್ತದೆ ಎನ್ನುವುದು ಸರಿಯಲ್ಲ. ಭೂ ಮಸೂದೆ ಅನುಷ್ಠಾನಕ್ಕೆ ಬಂದ ನಂತರ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ 10 ಎಕರೆಗಿಂತ ಹೆಚ್ಚು ಭೂಮಿ ಇರುವ ಕೃಷಿಕರೇ ಇಲ್ಲ. 2005- 06ರ ಅಂಕಿ ಅಂಶಗಳ ಪ್ರಕಾರ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 4,10,705 ಕೃಷಿ ಹಿಡುವಳಿದಾರರಿದ್ದು, ಅವರಲ್ಲಿ 3,09,508 ಕೃಷಿ ಹಿಡುವಳಿದಾರರ 1 ಹೆಕ್ಟೇರ್ (2.47 ಎಕರೆ)ಗಿಂತ ಕಡಿಮೆ ಭೂಮಿ ಇರುವವರು, ಉಳಿದ 1,01,187 ಹಿಡುವಳಿದಾರರು ಮಾತ್ರ 1 ಹೆಕ್ಟೇರ್ಗಿಂತ ಹೆಚ್ಚು ಭೂಮಿಯನ್ನು ಹೊಂದಿವೆ. ಆದ್ದರಿಂದ ದೊಡ್ಡ ಹಿಡುವಳಿ ಕೃಷಿಕರಿಗಿಂತ ಚಿಕ್ಕ ಹಿಡುವಳಿ ಕೃಷಿಕರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಹೆಬ್ಬಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಸುಭಾಷಿತ್, ಕುಂದಾಪುರ ತಾಲೂಕು ಉಪಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

