ಮಾನಸಿಕ ಅಸ್ವಸ್ಥರಿಬ್ಬರು ಮಂಗಳೂರಿನ ಸ್ನೇಹಾಲಯಕ್ಕೆ
ಕುಂದಾಪುರ: ಕಳೆದ ಹಲವಾರು ದಿನಗಳಿಂದ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಮಾನವ ಅಸಹಜ ರೀತಿಯಲ್ಲಿ ಬದುಕುತಿದ್ದ ಇಬ್ಬರು ಅನಾಥ ಮಾನಸಿಕ ಅಸ್ವಸ್ಥರನ್ನು ಮಂಗಳೂರಿನ ತಲಪಾಡಿಯ ಸ್ನೇಹಾಲಯ ಅನಾಥಾಶ್ರಮ ತನ್ನ ವಶಕ್ಕೆ ತೆಗೆದುಕೊಂಡಿದೆ.
ಈ ಮಾನಸಿಕ ಅಸ್ವಸ್ಥರಲ್ಲಿ ಒಬ್ಬಾತ ಗಂಡಸು, ಮುಖತುಂಬಾ ಗಡ್ಡ, ಕೊಳಕು ಬಟ್ಟೆ ಧರಿಸಿ ಗಬ್ಬು ನಾರುತ್ತಿದ್ದ ಈತನಿಗೆ ಮನೆ, ಆಶ್ರಯ ಎಲ್ಲವೂ ತೆರೆದ ಶಾಸ್ತ್ರೀ ವೃತ್ತವೇ ಆಗಿತ್ತು. ಅಲ್ಲಿಯೇ ಕಲ್ಲಿನ ಮೇಲೆ ಲೋಕದ ಪರಿವೆಯೇ ಇಲ್ಲದೇ ಕುಳಿತಿರುತ್ತಿದ್ದ, ಇಲ್ಲಾ ಮಲಗಿರುತ್ತಿದ್ದ. ಹಸಿವಾದರೇ ಅಕ್ಕಪಕ್ಕದ ಗೂಡಂಗಡಿ, ಕ್ಯಾಂಟೀನುಗಳ ಮುಂದೆ ನಿಂತುಕೊಳ್ಳುತ್ತಿದ್ದ, ಅವರು ಕೊಟ್ಟದ್ದನ್ನು ತಿಂದು ಮತ್ತೇ ಅದೇ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದ. ಮಳೆ ಬಂದಾಗಲೂ ಅಲ್ಲೇ ಇರುತ್ತಿದ್ದ. ಈತ ಯಾರು, ಎಲ್ಲಿಂದ ಯಾವಾಗ ಇಲ್ಲಿಗೆ ಬಂದ ಎನ್ನುವುದು ಯಾರಿಗೂ ಗೊತ್ತಿಲ್ಲ.
ಇನ್ನೊಬ್ಬಾಕೆ ಮಾನಸಿಕ ಅಸ್ವಸ್ಥೆಯಾದರೂ ಕೆಲವೊಮ್ಮೆ ಚಿಂದಿ ಆಯುತ್ತಿದ್ದಳು, ಇಲ್ಲದಿದ್ದರೇ ಭಿಕ್ಷೆ ಬೇಡುತ್ತಿದ್ದಳು. ಸುಸ್ತಾದರೇ ಬಸ್ಸು ನಿಲ್ದಾಣಗಳಲ್ಲಿ ಕುಳಿತುಕೊಳ್ಳುವುದು, ಮಲಗುವುದು ಮಾಡುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ಕುಂದಾಪುರ ಶಾಸ್ತ್ರೀ ವೃತ್ತಕ್ಕೆ ಬಂದು ಅಲ್ಲಿ ಕಲ್ಲು ಹಾಸಿನ ಮೇಲೆ ಕುಳಿತು ನಿದ್ದೆ ಹತ್ತುವವರೆಗೆ ಏನಾದರೂ ಬಡಬಡಿಸುತ್ತಾ ಕುಳಿತುಕೊಳ್ಳುತ್ತಿದ್ದಳು.
ಇವರ ಬಗ್ಗೆ ಸ್ಥಳೀಯರಿಗೆ ಕನಿಕರ ಇತ್ತಾದರೂ ಯಾರೂ ಏನೂ ಮಾಡುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾರೋ ಸ್ನೇಹಾಲಾಯಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಬಂದ ಸ್ನೇಹಾಲಯದವರು ಇಬ್ಬರನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಅವರಿಗೆ ಹೊಸ ಬದುಕು ನೀಡುವುದಕ್ಕೆ ಕರೆದುಕೊಂಡು ಹೋಗಿದ್ದಾರೆ.
ಮುಖ್ಯವಾಗಿ ರಾತ್ರಿ ಸಮಯದಲ್ಲಿ ಕುಡುಕರು ಹಾಗೂ ಕಾಮುಕರಿಂದ ಈ ಅನಾಥ ಮಹಿಳೆಗೆ ರಕ್ಷಣೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಾನು ಆದ್ಯತೆಯ ಮೇರೆಗೆ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಸ್ನೇಹಾಲಯದ ಪ್ರಮೀಳಾ ಡಿ' ಸೋಜಾ ಹೇಳಿದರು.
ಸ್ನೇಹಾಲಯದಲ್ಲಿ ಇವರಿಬ್ಬರಿಗೂ ಉತ್ತಮ ಚಿಕಿತ್ಸೆ ನೀಡುವುದರೊಂದಿಗೆ ಅವರ ಜೀವನದಲ್ಲಿ ಸ್ಫೂರ್ತಿ ತುಂಬಿ ಆಶಾವಾದ ಬೆಳೆಸಲಾಗುತ್ತದೆ. ಮಹಿಳೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದು, ಕೆಲವೇ ದಿನಗಳಲ್ಲಿ ಅವರನ್ನು ಗುಣಮುಖರನ್ನಾಗಿಸಬಹುದು ಎಂದು ಸ್ನೇಹಾಲಯದ ಮುಖ್ಯಸ್ಥ ಬ್ರದರ್ ಜೋಸೇಫ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

