ಉಡುಪಿ

ಯಡಿಯೂರಪ್ಪ 'ಮರಳಿ ಬಿಜೆಪಿಗೆ' ವಿಚಾರ, ವರಿಷ್ಠರಿಂದ ಸೂಕ್ತ ನಿರ್ಧಾರ: ಡೀವಿ

Published On :

ಉಡುಪಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮರಳಿ ಬಿಜೆಪಿಗೆ ಬರುವ ಮಾತು ಚಲಾವಣೆಯಲ್ಲಿದೆ. ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2- 3 ತಿಂಗಳಲ್ಲಿ ಯಡಿಯೂರಪ್ಪ ಬಿಜೆಪಿ ಬಗ್ಗೆ ಆಡಿರುವ ಮಾತುಗಳನು ಗಮನಿಸಿದರೆ ಅವರು ಅಷ್ಟು ಸಲುಭವಾಗಿ ಬಿಜೆಪಿಗೆ ಮರಳುತ್ತಾರೆ ಎಂದು ತಾವು ಭಾವಿಸುವುದಿಲ್ಲ. ಆದರೆ, ಇಂದಿನ ರಾಜಕೀಯದಲ್ಲಿ ಏನು ಬೇಕಾದರೂ ಸಂಭವಿಸಬಹುದು, ಇದಕ್ಕೆ ಬಿಜೆಪಿ ಕೂಡ ಅತೀತವಲ್ಲ ಎಂದು ತಿಳಿಸಿದರು.
ಹಿರಿಯರು ಒಪ್ಪಿದರೆ ಅಡ್ಡಿಯಿಲ್ಲ: ಯಡಿಯೂರಪ್ಪ ಮರಳಿ ಬರುವುದರಿಂದ ಬಿಜೆಪಿಗೆ ಒಳ್ಳೆಯದಾಗುತ್ತದೆ ಎಂದಾದರೆ, ಹಿಂದೆ ಮಾಡಿರುವ ತಪ್ಪುಗಳನು ಮತ್ತೊಮ್ಮೆ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರೆ, ಪಕ್ಷದ ಹಿರಿಯರು ಒಪ್ಪಿ ಅವರನು ಪಕ್ಷಕ್ಕೆ ಸೇರಿಸಿಕೊಂಡರೆ, ತನದೇನೂ ವಿರೋಧ ಇಲ್ಲ. ಪಕ್ಷದ ಕಾರ್ಯಕರ್ತನಾಗಿ ಪಕ್ಷದ ನಿರ್ಧಾರ ಒಪ್ಪಿಕೊಳ್ಳುತ್ತೇನೆ ಎಂದು ಡೀವಿ ಹೇಳಿದರು. ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ ಎನುವ ಹಿನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರನು ನೇಮಿಸದೆ ಯಡಿಯೂರಪ್ಪಗಾಗಿ ಈ ಸ್ಥಾನ ಕಾದಿರಿಸಲಾಗಿದೆ ಎನುವ ಬಗ್ಗೆ ತನಗೇನೂ ಮಾಹಿತಿ ಇಲ್ಲ. ಏನಿದ್ದರೂ ಒಂದೆರಡು ದಿನಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಆಗಲಿದೆ ಎಂದು ತಿಳಿಸಿದರು.
ವಿಶ್ವಾಸ ಅತಿಯಾಯಿತು: ನಗರಾಡಳಿತ ಚುನಾವಣೆಗಳಲ್ಲಿ ಬಿಜೆಪಿ ಸೋಲುವುದಕ್ಕೆ ನಮ್ಮ ಅತಿ ವಿಶ್ವಾಸವೇ ಕಾರಣ. ಆದರೆ, ನಮ್ಮ ಜಗಳ ಕೂಡ ಜಾಸ್ತಿ ಆಯ್ತು, ಅದನು ಕೂಡ ಜನರು ಗಮನಿಸುತ್ತಾರೆ ಎನುವುದನು ಮರೆತಿದ್ದೇವು ಎಂದ ಡೀವಿ, ನಮ್ಮ ಅತಿ  ವಿಶ್ವಾಸಕ್ಕೆ ಮತದಾರರು ಚುಚ್ಚುಮದ್ದು ನೀಡಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.