ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
ಉಡುಪಿ: ಉಡುಪಿ ಶಾಸಕ ರಘುಪತಿ ಭಟ್ ಸೆಕ್ಸ್ ಸಿ.ಡಿ. ಜಾಲದಲ್ಲಿ ಸಿಲುಕಿಕೊಂಡ ನಂತರ, ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಇನ್ನೂ ಜಟಿಲಗೊಂಡಿದೆ. ಶಾಸಕ ಭಟ್ಟರನ್ನೇ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಸುವ ಗಟ್ಟಿ ನಿರ,ಯ ಕೈಗೊಳ್ಳುವುದರಲ್ಲಿಯೂ ಜಿಲ್ಲಾ ಬಿಜೆಪಿಗೆ ವಿಫಲವಾಗಿದೆ.
ಈ ಸಿ.ಡಿ. ಪ್ರಕರಣದ ನಂತರ ಸ್ವತಃ ಶಾಸಕ ಭಟ್ ಅವರೇ ಬೆಂಗಳೂರಿನಲ್ಲಿ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರೂ, ಶನಿವಾರ ಅವರ ಮನೆಯಲ್ಲಿ ಅಭಿಮಾನಿಗಳ ಒತ್ತಡಕ್ಕೆ ಮಣಿದು, ಪಕ್ಷದ ವರಿಷ್ಠರು ಹೇಳಿದರೆ ಚುನಾವಣೆಗೆ ನಿಲ್ಲುವೆ ಎಂದು ಹೇಳಿದ್ದರು. ಭಾನುವಾರ ಮತ್ತೆ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಅವರ ಮನೆಯ ಮುಂದೆ ಜಮಾಯಿಸಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ವತಃ ಭಟ್ಟರೇ ಘೋಷಿಸುವಂತೆ ಒತ್ತಡ ಹೇರಿದರು.
ಕಾರ್ಯಕರ್ತರ ಒತ್ತಡ: ಆದರೆ ಭಟ್ ಈ ಅಭಿಮಾನಿಗಳನ್ನು ಜಿಲ್ಲಾ ಬಿಜೆಪಿ ಕಚೇರಿಗೆ ಕರೆತಂದು ಅಲ್ಲಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಕಾರ್ಯಕರ್ತರ ಮುಖಾಮುಖಿಯಾಗಿಸಿದರು. ಕಾರ್ಯಕರ್ತರು ರಘುಪತಿ ಭಟ್ಟರ ಹೆಸರನ್ನು ರಾಜ್ಯ ವರಿಷ್ಠರಿಗೆ ಶಿಫಾರಸು ಮಾಡುವಂತೆ ಜಿಲ್ಲಾ ವರಿಷ್ಠರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು. ಜಿಲ್ಲಾ ನಾಯಕರ ಮತ್ತು ಕಾರ್ಯಕರ್ತರ ನಡುವೆ ಸುದೀರ್ಘ ಮಾತುಕತೆ, ಆವೇಶದ ಮಾತುಗಳು, ಸಮಜಾಯಿಶಿ ಇತ್ಯಾದಿಗಳು ನಡೆದವು.
ಕೊನೆಗೆ ಬಿಜೆಪಿಯ ಜಿಲ್ಲಾ ವರಿಷ್ಠರಾದ ಸೋಮಶೇಖರ ಭಟ್ ಮಾತನಾಡಿ, ಕಾರ್ಯಕರ್ತರ ಭಾವನೆಗಳನ್ನು ಪಕ್ಷದ ರಾಜ್ಯ ವರಿಷ್ಠರಿಗೆ ತಲುಪಿಸುವುದಾಗಿ ಮತ್ತು ಶಾಸಕ ಭಟ್ಟರಿಗೆ ಟಿಕೆಟ್ ನೀಡುವ ಬಗ್ಗೆ ನಿರ,ಯ ಕೈಗೊಳ್ಳುವುದೇನಿದ್ದರೂ ಪಕ್ಷದ ವರಿಷ್ಠರಿಗೆ ಬಿಡುವುದಾಗಿ ಹೇಳಿದರು.
ಕಾರ್ಯಕರ್ತರಿಂದ ವಿಪಕ್ಷಕ್ಕೆ ಪಾಠ: ಆದರೆ ಕಾರ್ಯಕರ್ತರು ಕೇವಲ ಭಾವನಾತ್ಮಕವಾಗಿ ವರ್ತಿಸುವ ಸಮಯ ಇದಲ್ಲ. ಈ ಸಿ.ಡಿ.ಯ ಹಿಂದಿರುವ ವಿರೋಧ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸುವುದು ಮಾತ್ರವಲ್ಲ ಹುಟ್ಟಡಗಿಸುವ ಕೆಚ್ಚನ್ನು ಕಾರ್ಯಕರ್ತರು ತೋರಿಸಬೇಕು ಎಂದು ಅವರು ಹೇಳಿದರು.
ಸಭೆಯ ನಂತರ ಶಾಸಕ ಕೆ. ರಘುಪತಿ ಭಟ್, ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ಮುಂದೆ ಪಕ್ಷದ ವರಿಷ್ಠರು ಹೇಳಿದಂತೆ ಕೇಳುವೆ, ತನಗೆ ಟಿಕೆಟ್ ಸಿಗದಿದ್ದರೂ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿಯುವೆ ಎಂದರು. ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹರಿಮಕ್ಕಿ ರತ್ನಾಕರ ಶೆಟ್ಟಿ, ಜ್ಞಾನ ವಸಂತ ಶೆಟ್ಟಿ, ಧನಂಜಯ ಅಮೀನ್, ನಗರಸಭಾ ಸದಸ್ಯರು, ಪಕ್ಷದ ನಗರ, ಗ್ರಾಮಾಂತರ ಮೋರ್ಚಾದ ನಾಯಕರು, ಶಾಸಕರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

