ಉಡುಪಿ

ಅನುಕರಣೆ ಸಂಭ್ರಮದಲ್ಲಿ ಮೂಲ ಮರೆಯುತ್ತಿದ್ದೇವೆ: ಸುಧಾ ಬರಗೂರು

Published On :

ಬೆಳ್ತಂಗಡಿ: ಪಾಶ್ಚಾತ್ಯ ಜೀವನವನ್ನು ಅನುಕರಣೆ ಮಾಡುವ ಸಂಭ್ರಮದಲ್ಲಿ ನಾವು ಮೂಲವನ್ನೇ ಮರೆತು ಬಿಡುತ್ತಿದ್ದೇವೆ. ಮಾತೃಭಾಷೆಯನ್ನು ಮಾತನಾಡುವುದು ಅವಮಾನಕರ ಎಂಬ ಕೀಳರಿಮೆಯಿಂದ ಹೊರಬನ್ನಿ ಎಂದು ಕಿರುತೆರೆ ನಟಿ, ವಾಗ್ಮಿ ಸುಧಾ ಬರಗೂರು ಹೇಳಿದರು. ಅವರು ಉಜಿರೆ ಶ್ರೀ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜನ್ಮ ಶತಮಾನೋತ್ಸವ ಸಂದರ್ಭ ಕಾಲೇಜಿನ ಕನ್ನಡ ಸಂಘವು ಹಮ್ಮಿಕೊಂಡಿದ್ದ ಮುಸ್ಸಂಜೆ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ರಾಜ್ಕಿರಣ್ ಬಲ್ಲಾಳ್ ಇದ್ದರು. ಕನ್ನಡ ಸಂಘದ ಅಧ್ಯಕ್ಷ ಭರತ್ ಸ್ವಾಗತಿಸಿದರು. ಭಾರ್ಗವ್, ದೀಪಿಕಾ ವಿವೇಕ ನಮನ ಸಲ್ಲಿಸಿದರು. ಚಿನ್ಮಯಿ ವಂದಿಸಿದರು. ಅಶ್ವಿನಿ ಉಡುಪ ನಿರ್ವಹಿಸಿದರು.

ನೇರಳಕಟ್ಟೆಯಲ್ಲಿ ಶೀಘ್ರ ಪ್ಯಾಸೆಂಜರ್ ನಿಲುಗಡೆ
ಮಂಗಳೂರು: ಪುತ್ತೂರು- ಮಂಗಳೂರು ರೈಲು ಹಾದಿಯ ನೇರಳಕಟ್ಟೆಯಲ್ಲಿ ಗೇಜ್ ಪರಿವರ್ತನೆಯಲ್ಲಿ ಗೂಡ್ಸ್ ಗಾಡಿಗೆ ಮಾತ್ರವಲ್ಲದೆ ಪ್ಯಾಸೆಂಜರ್ ರೈಲು ನಿಲುಗಡೆ ಅವಕಾಶ ನೀಡಬೇಕೆಂಬ ನಾಗರಿಕರ ಕೋರಿಕೆಯನ್ವಯ ಪರಿಶೀಲಸುವುದಾಗಿ ಮೈಸೂರಿನಲ್ಲಿ ನಡೆದ ರೇಲ್ವೆ ಸಲಹಾ ಸಮಿತಿ ಸಭೆಯಲ್ಲಿ ಭರವಸೆ ನೀಡಿದೆ ಎಂದು ವಿಭಾಗೀಯ ಸಮಿತಿ ಸದಸ್ಯ ಸುದರ್ಶನ್ ಪುತ್ತೂರು ಹೇಳಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನಂತೆ ಕೆಲವೇ ಸಮಯದಲ್ಲಿ ಮಂಗಳೂರು -ಸುಬ್ರಹ್ಮಣ್ಯ ರಸ್ತೆ ಮಧ್ಯೆ ಓಡಾಡುವ ಪ್ಯಾಸೆಂಜರ್ ರೈಲು ನಿಡುಗಡೆಯಾಗಲಿದೆ. ನೇರಳಕಟ್ಟೆ ರೈಲು ನಿಲ್ದಾಣದಲ್ಲಿ ನಾಗರಿಕರಿಗೆ ಹಳಿದಾಟಲು ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.