ಉಡುಪಿ

ವಿಜ್ಞಾನ ಶಿಕ್ಷಕರಿಗೆ ಭಾಷಾ ಪ್ರಬುದ್ಧತೆ ಅಗತ್ಯ: ವಿಜಯ

Published On :

ಉಡುಪಿ: ವಿಜ್ಞಾನ ಶಿಕ್ಷಕರಿಗೆ ಭಾಷಾ ಪ್ರಬುದ್ಧತೆ ಇರಬೇಕಾಗಿಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ಇದೆ. ಆದರೆ ವಿಜ್ಞಾನ ಶಿಕ್ಷಕರಿಗೆ ಸಾಹಿತ್ಯಿಕ ಅಲಂಕಾರಿಕ ಭಾಷೆ ಬೇಡವಾದರೂ ಹೇಳಬೇಕಾದುದನ್ನು ಖಚಿತವಾಗಿ ನಿರೂಪಿಸಲು ಭಾಷೆಯ ಅಗತ್ಯ ಖಂಡಿತ ಇದೆ ಎಂದು ಎಂಜಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಎಂ.ಜಿ. ವಿಜಯ ಹೇಳಿದ್ದಾರೆ.
ಇಲ್ಲಿನ ಡಾ.ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೌತಶಾಸ್ತ್ರ ಬೋಧನಾ ವಿಧಾನ ವಿಭಾಗದ ವತಿಯಿಂದ ನಡೆದ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಅವರು 'ವಿಜ್ಞಾನ ಬೋಧನೆಯನ್ನು ಆಸಕ್ತಿದಾಯಕವಾಗಿಸುವುದು ಹೇಗೆ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿಜ್ಞಾನದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೊದಲು ಶಿಕ್ಷಕ ಅದನ್ನು ಚೆನ್ನಾಗಿ ಗ್ರಹಿಸಬೇಕು. ಆತ ಚೆನ್ನಾಗಿ ಗ್ರಹಿಸಿದಾಗ ಅದಕ್ಕೆ ಪೂರಕವಾದ ಉದಾಹರಣೆಗಳನ್ನು ನೀಡುವುದು ಆತನಿಗೆ ಕಷ್ಟವಾಗಲಾರದು ಎಂದು ಡಾ. ವಿಜಯ ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಹಾಬಲೇಶ್ವರ ರಾವ್ ವಹಿಸಿದ್ದರು. ವಿವಿಧ ವಿಜ್ಞಾನದ ಪರಿಕಲ್ಪನೆಗಳನ್ನು ಆಧರಿಸಿ ಭೌತ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶಿಕ್ಷಕರು ಸ್ವರಚಿತ ಕವನ ವಾಚನ, ಭಾಷಣ, ಕಿರುಪ್ರಹಸನ, ಸಮೂಹ ನೃತ್ಯ, ರೂಪಕ ಮೊದಲಾದ ವೈವಿಧ್ಯಮಯ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.
ವಿದ್ಯಾರ್ಥಿನಿ ಶ್ವೇತಾ ಸ್ವಾಗತಿಸಿದರು. ಸಪ್ನ ಅಮೀನ್ ನಿರ್ವಹಿಸಿದರು. ಭೌತವಿಜ್ಞಾನ ಬೋಧನಾ ವಿಧಾನದ ಉಪನ್ಯಾಸಕಿ ಕುಶಾಲಿನಿ ಸಿ.ಎನ್. ಮಾರ್ಗದರ್ಶಕರಾಗಿ ಸಹಕರಿಸಿದರು. ಸದ್ದಾಮ್ ಹುಸೇನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.