ಯುಪಿಸಿಎಲ್ನಿಂದಾಗುತ್ತಿರುವ ತೊಂದರೆ ಪರಿಹರಿಸಿ: ಜಯಕೃಷ್ಣ ಶೆಟ್ಟಿ ಆಗ್ರಹ
ಉಡುಪಿ: ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ನಾಗಾರ್ಜುನ- ಲ್ಯಾಂಕೋ ಕಂಪನಿಗಳ ಪ್ರಾಯೋಜಿತ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಯುಪಿಸಿಎಲ್) ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದಿಂದ ಜಿಲ್ಲೆಯ ಜನತೆಗೆ, ಪರಿಸರಕ್ಕೆ ಆಗುತ್ತಿರುವ ತೊಂದರೆಯನ್ನು ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಪರಿಹರಿಸಬೇಕು ಎಂದು ಮುಂಬೈಯ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ಜಯಕೃಷ್ಣ ಶೆಟ್ಟಿ ಆಗ್ರಹಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಮಿತಿಯ ಮೂಲಕ ಹೋರಾಟ ನಡೆಸಿದ್ದರಿಂದ ಯುಪಿಸಿಎಲ್ ಸ್ಥಾಪನೆಯಾಗಿದೆ. ಆದರೆ, ಈಗ ಅದೇ ಯುಪಿಸಿಎಲ್ನಿಂದಾಗಿ ಉಡುಪಿ ಜಿಲ್ಲೆಯ ಜನತೆ ಮತ್ತು ಪರಸರಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಅವಿಭಜಿತ ದ.ಕ. ಜಿಲ್ಲೆಯಿಂದ 4 ಮಂದಿ ಶಾಸಕರು ಮಂತ್ರಿಗಳಾಗಿದ್ದಾರೆ. ಅದರಲ್ಲಿಯೂ ರಮಾನಾಥ ರೈ ಅವರು ಅರಣ್ಯ - ಪರಿಸರ ಸಚಿವರಾಗಿದ್ದಾರೆ. ಹಿಂದೆ ಸಂಸದರಾಗಿದ್ದಾಗ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸಿದ ವಿನಯಕುಮಾರ್ ಸೊರಕೆ ಅವರು ಕೂಡ ಉಡುಪಿಯಿಂದ ಸಚಿವರಾಗಿದ್ದಾರೆ. ಆದ್ದರಿಂದ ಇನ್ನಾದರೂ ಯುಪಿಸಿಎಲ್ ಸ್ಥಾವರದಿಂದ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಕನ್ನ ಜಿಲ್ಲೆಯ ನಿಡ್ಡೋಡಿ ಎಂಬಲ್ಲಿ ಇನ್ನೊಂದು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ದೇವರಾಣೆಗೂ ಸ್ಥಾಪನೆಯಾಗಬಾರದು ಎಂದು ಉಡುಪಿ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರ (ಯುಪಿಸಿಎಲ್) ಸ್ಥಾಪನೆ ಆಗಲೇಬೇಕು ಎಂದರು.
ನಿಡ್ಡೋಡಿಯಲ್ಲಿ ಸುಮಾರು 1000 ಎಕ್ರೆ ಕೃಷಿ - ಕುಮ್ಕಿ ಭೂಮಿ ಈಗಾಗಲೇ ಗುರುತಿಸಲಾಗಿದೆ. ತಾವು ಕೂಡ ಅಲ್ಲಿ 37 ಎಕ್ರೆ ಭೂಮಿ ಖರೀದಿಸಿದ್ದೇನೆ. ಆದರೆ, ಉಡುಪಿಯಲ್ಲಿ ತಮ್ಮ ಸಮಿತಿಯ ಹೋರಾಟದಿಂದ ಸ್ಥಾಪನೆಯಾಗಿರುವ ಸ್ಥಾವರದಿಂದ ತೊಂದರೆಯಾಗುತ್ತಿದೆ. ಮೊದಲು ಅದನ್ನು ಸರಿಪಡಿಸಬೇಕು. ಆದ್ದರಿಂದ ಇನ್ನೊಂದು ಸ್ಥಾವರ ಬೇಡ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಪ್ರೊ. ಶಂಕರ್, ಕೆ.ಪಿ. ಜಗದೀಶ ಅಧಿಕಾರಿ, ಶೇಖರ ಗುಜ್ಜರಬೆಟ್ಟು, ಜಯಶೇಖರ ಹೆಜಮಾಡಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

