ಉಡುಪಿ

ವೇದಾಧ್ಯಯನ ಬ್ರಾಹ್ಮಣರ ಕರ್ತವ್ಯ: ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ

Published On :

ಉಡುಪಿ: ವೇದಗಳ ಮೂಲಕ ಭಗವವಂತನ ಅರಿವು ಸಾಧ್ಯವಾಗಿದ್ದು, ವೇದಗಳನ್ನು ಅಧ್ಯಯನ ಮಾಡಿ ಸಮಾಜಕ್ಕೆ ದೇವರ ಬಗ್ಗೆ ತಿಳುವಳಿಕೆ ಮೂಡಿಸುವುದು ಬ್ರಾಹ್ಮಣರ ಕರ್ತವ್ಯ. ಆದ್ದರಿಂದ ವೇದಾಧ್ಯಯನ ಪ್ರತಿಯೊಬ್ಬ ಬ್ರಾಹ್ಮಣರಿಗೂ ಅಗತ್ಯ ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು ಹೇಳಿದದ್ದಾರೆ.
ವೇದಾಧ್ಯಯನದಿಂದ ಜನ್ಮ ಪರಿಪೂರ್ಣ: ಇಲ್ಲಿನ ಕಾಣಿಯೂರು ಮಠದಲ್ಲಿ ವಿಪ್ರರಿಗಾಗಿ ಏರ್ಪಡಿಸಿದ ವೇದಾಭ್ಯಾಸ ತರಗತಿ ಉದ್ಘಾಟಿಸಿ ಮಾತನಾಡಿದ ಅವರು, ವೇದಜ್ಞಾನವಿಲ್ಲದ ವಿಪ್ರರು ಗಾಳಿ ತೆಗೆದ ಬಲೂನಿನಂತೆ, ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರೆನಿಸುತ್ತಾರೆ. ಬ್ರಾಹ್ಮಣ ಜನ್ಮ ಪರಿಪೂರ್ಣವೆನಿಸುವುದು ವೇದಾದ್ಯಯನದಿಂದ ಎಂದರು.
ಮುಂದಿನ ಪರ್ಯಾಯಾವಧಿಯ 2 ವರ್ಷಗಳವರೆಗೂ ಮಠದಲ್ಲಿ ವೇದಾಧ್ಯಯನಕ್ಕೆ ವಿಪ್ರರಿಗೆ ಅವಕಾಶ ನೀಡಲಾಗಿದ್ದು, ವಾರಕ್ಕೆ 2 ದಿನ ಮಾತ್ರ ನಡೆಯುವ ತರಗತಿಯಲ್ಲಿ ಯಾವುದೇ ವಯೋವುತಿ ಇಲ್ಲದೇ ವಿಪ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕನಿಷ್ಠ ಪ್ರಮಾಣದಲ್ಲಾದರೂ ವೇದಜ್ಞಾನ ಪಡೆದು ವೈದಿಕ ಪರಂಪರೆ ಬೆಳೆಸಬೇಕು ಎಂದು ಶ್ರೀಗಳು ಕರೆ ನೀಡಿದರು.
ವೇದ ಶಿಕ್ಷಕ ಪ್ರಭಾಕರ ಅಡಿಗ, ಸಹಸಂಯೋಜಕ ಪ್ರಸಾದ ಉಪಾಧ್ಯಯ ಇದ್ದರು. ತರಗತಿಯ ಸಂಯೋಜಕ ವಾಸುದೇವ ಭಟ್ ಪೆರಂಪಳ್ಳಿ ಪ್ರಾಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.