ಉಡುಪಿ

ಸಾವಿರಾರು ರು. ನಗದು ಇದ್ದ ಪರ್ಸ್ ಮರಳಿಸಿದ ಪಿಗ್ಮಿಕಲೆಕ್ಟರ್

Published On :

ಉಡುಪಿ: ರಸ್ತೆಯಲ್ಲಿ ಸಿಕ್ಕಿದ ಸಾವಿರಾರು ರು. ನಗದು ಇದ್ದ ಪರ್ಸನ್ನು ಪಿಗ್ಮಿ ಕಲೆಕ್ಟರ್‌ವೊಬ್ಬರು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮಲ್ಪೆಯ ಮೀನುಗಾರಿಕಾ ಸೊಸೈಟಿಯ ಪಿಗ್ಮಿ ಕಲೆಕ್ಟರ್ ದಯಾನಂದ ಮೈಂದನ್ ಅವರಿಗೆ ಇತ್ತೀಚೆಗೆ ಪರ್ಸ್‌ವೊಂದು ಸಿಕ್ಕಿತ್ತು, ಅದರಲ್ಲಿ ರು. 21,000 ನಗದು ಮತ್ತು ದಾಖಲೆಗಳಿದ್ದವು. ಅದನ್ನು ಅವರು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರಿಗೆ ಹಸ್ತಾಂತರಿಸಿದ್ದರು. ಪೊಲೀಸರು ವಾರಸುದಾರರನ್ನು ಹುಡುಕಿದಾಗ, ಮುಂಬೈ ಉದ್ಯಮಿ ಹರೀಶ್ ವಿ. ಕಾಂಚನ್ ಎಂಬವರ ಪರ್ಸ್ ಅದಾಗಿತ್ತು. ಅವರು ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ತನ್ನ ಪರ್ಸನ್ನು ಕಳೆದುಕೊಂಡಿದ್ದರು. ಪೊಲೀಸರು ಪರ್ಸನ್ನು ಕಾಂಚನ್ ಅವರಿಗೆ ದಯಾನಂದ ಅವರ ಮೂಲಕವೇ ಹಸ್ತಾಂತರಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಬೋರಲಿಂಗಯ್ಯ ಎಂ.ಬಿ. ಅವರು ದಯಾನಂದ ಅವರ ಪ್ರಾಮಾಣಿಕತೆಯನ್ನು ಪ್ರಶಂಶಿಸಿ ಅಭಿನಂದಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸಾವಿಗೆ ಕಾರಣವಾದ ಲಾರಿ ಚಿತ್ರದುರ್ಗದಲ್ಲಿ ಪತ್ತೆ, ಆರೋಪಿ ಸೆರೆ
ಮೂಲ್ಕಿ: ಬಪ್ಪನಾಡು ದೇವಳದ ಬಳಿ ಏ.5ರಂದು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಸಾವಿಗೆ ಕಾರಣವಾದ ಲಾರಿಯನ್ನು ಮೂಲ್ಕಿ ಪೊಲೀಸರು ಚಿತ್ರದುರ್ಗದಲ್ಲಿ ಪತ್ತೆಹಚ್ಚಿದ್ದು, ಆರೋಪಿ ಚಾಲಕನನ್ನು ಬಂಧಿಸಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆ ಸಿಬ್ಬಂದಿ ಶಿವರಾಜಪ್ಪ ಅವರು ಏ.5ರಂದು ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಡೆಯಲು ಯತ್ನಿಸಿದಾಗ ಲಾರಿಯು ನಿಲ್ಲದೆ ಶಿವರಾಜಪ್ಪ ಅವರ ಮೇಲೆ ಚಲಿಸಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಲಾರಿ ಪರಾರಿಯಾಗಿತ್ತು. ಘಟನೆ ನಡೆದ ಬಳಿಕ ಉಡುಪಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿರುವ ವಾಹನಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಚಿತ್ರದುರ್ಗದಲ್ಲಿ ಲಾರಿಯನ್ನು ಪತ್ತೆ ಹಚ್ಚಲಾಯಿತು. ಲಾರಿ ಚಾಲಕ ಲೋಹಿತ್‌ನನ್ನು ಬಂಧಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ, ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.