ಉಡುಪಿ

ಸೌಜನ್ಯಾ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠ ಬೆಂಬಲ: ಧರ್ಮಪಾಲನಾಥ ಸ್ವಾಮೀಜಿ

Published On :

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆದಿಲ್ಲ ಎಂಬುದು ಹೊರನೋಟಕ್ಕೆ ಸ್ಪಷ್ಟವಾಗಿದೆ. ಗೌಡ ಸಮುದಾಯ  ಅನ್ಯಾಯಕ್ಕೊಳಗಾದ ಕುಟುಂಬದ ಬೆಂಬಲಕ್ಕಿದೆ. ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸದಿದ್ದಲ್ಲಿ ಹೋರಾಟಕ್ಕಿಳಿಯಲು ಸಿದ್ಧರಿದೇವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಘೋಷಿಸಿದ್ದಾರೆ.
ಧರ್ಮಸ್ಥಳ ಪಾಂಗಾಳದ ಸೌಜನ್ಯಾಳ ಮನೆಗೆ ಶುಕ್ರವಾರ ಭೇಟಿ ನೀಡಿದ ಅವರು ಮನೆಯವರ ನೋವು ಆಲಿಸಿದರು.
ಕೊಲೆ ಪ್ರಕರಣ ನಡೆದ ಬಳಿಕ ತಾವು ಅನುಭವಿಸಿದ ನೋವನ್ನು ಬಿಡಿಸಿಟ್ಟ ಸೌಜನ್ಯಾಳ ಅಜ್ಜ ಬಾಬುಗೌಡ, ನಮ್ಮ ಬೆಂಬಲಕ್ಕೆ ನಿಲ್ಲಬಹುದೆಂದು ನಿರೀಕ್ಷಿಸಿದ್ದ ಗೌಡ ಸಮುದಾಯ ಯಾವುದೇ ಸ್ಪಂದನ ನೀಡಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ನೋವನ್ನನುಭವಿಸಿದ ನಮ್ಮನೇ ಸಮುದಾಯದಿಂದ ಹೊರಹಾಕುವ ಪ್ರಯತ್ನ ನಡೆಸಿದರು ಎಂದರು.
ಅಳಲು ಆಲಿಸಿದ ಬಳಿಕ ಮಾತನಾಡಿದ ಸ್ವಾಮೀಜಿ, ನಿಮ್ಮ ಮಗಳು ಸಮಾಜನ ಮಗಳಿದ್ದಂತೆ. ನಿಮಗಾಗಿರುವ ನೋವು ಸಂಪೂರ್ಣ ಸಮಾಜಕ್ಕೆ ಆಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಮುಖಂಡರ ಸಭೆ ಕರೆದಿದ್ದು ಈ ಬಗ್ಗೆ ಚರ್ಚಿಸಲಾಗಿದೆ. ನ್ಯಾಯಕ್ಕಾಗಿ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದರು.
ಸತ್ಯ ಮುಚ್ಚಿಡಲಾಗದು: ಸತ್ಯಾಸತ್ಯತೆ ಹೊರಬರುವುದು ನಿಧಾನ. ಆದರೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ತಾಲೂಕು ಸಂಘದವರು ಕೂಡಲೇ ಸಭೆ ನಡೆಸಿ ಸೌಜನ್ಯಾ ಕುಟುಂಬಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಸಮುದಾಯದ ಮುಖಂಡರಿಗೆ ಶ್ರೀಗಳು ಸೂಚಿಸಿದರು.
ಗೌಡರ ಯಾನೆ ಒಕ್ಕಲಿಗರ ಸಂಘದ ಮುಖಂಡರಾದ ನಿತ್ಯಾನಂದ ಮುಂಡೋಡಿ, ಸಂಜೀವ ಗೌಡ ಮಠಂದೂರು, ಧನಂಜಯ ಅಡ್ಪಂಗಾಯ, ಲೋಕಯ್ಯ ಗೌಡ, ಆಶಾ ತಿಮ್ಮಪ್ಪ ಗೌಡ, ಲಿಂಗಪ್ಪ ಗೌಡ, ದಿನೇಶ ಪಡಪ್ಪಾಡಿ, ಕುಶಲಪ್ಪ ಗೌಡ, ಪದ್ಮಗೌಡ, ರಾಮಚಂದ್ರ ಗೌಡ, ಲೋಕೇಶ್ವರಿ ವಿನಯಚಂದ್ರ ಹಾಗೂ ಜಿಲ್ಲೆಯ ಸಮುದಾಯದ ಇತರ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.