ಬೆಳಿಯೂರು ಯಕ್ಷಗಾನ ಮಂಡಳಿಗೆ ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿ
ಉಡುಪಿ: ಈ ಬಾರಿಯ ಯಕ್ಷಗಾನ ಕಲಾರಂಗದ ಶ್ರೀವಿಶ್ವೇಶ ತೀರ್ಥ ಪ್ರಶಸ್ತಿ ಮತ್ತು ಇತರ 16 ಪ್ರಶಸ್ತಿಗಳ ಪ್ರದಾನ ಸಮಾರಂಭ ನ.10ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದೆ. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಬಾರಿ ಬೆಳಿಯೂರಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಶ್ರೀವಿಶ್ವೇಶ ತೀರ್ಥ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 25 ಸಾವಿರ, ಪುರಸ್ಕಾರವನ್ನು ಒಳಗೊಂಡಿದೆ.
ಈ ಬಾರಿ 2 ಹೊಸ ಪ್ರಶಸ್ತಿಗಳೊಂದಿಗೆ 16 ಸ್ಮಾರಕ ಪ್ರಶಸ್ತಿಗಳನ್ನು ಹಿರಿಯ ಕಲಾ ಸಾಧಕರಿಗೆ ತಲಾ 10 ಸಾವಿರ ನಗದಿನೊಂದಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳನ್ನು ನ.10ರಂದು ಸಂಜೆ 5 ಗಂಟೆಗೆ ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಪ್ರದಾನ ಮಾಡಲಿದ್ದಾರೆ. ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಅನುಗ್ರಹ ಸಂದೇಶ ನೀಡಲಿರುವರು. ಉದ್ಯಮಿ ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಎಸ್.ವಿ. ಭಟ್, ನಾರಾಯಣ ಎಂ. ಹೆಗಡೆ, ಗಂಗಾಧರ್ ರಾವ್ ಇದ್ದರು.
ಪ್ರಶಸ್ತಿ ಮತ್ತು ಪ್ರಶಸ್ತಿ ಪುರಸ್ಕೃತರು:
ಡಾ.ಬಿ.ಬಿ. ಶೆಟ್ಟಿ ಪ್ರಶಸ್ತಿ- ಕೆ.ಎಚ್. ದಾಸಪ್ಪ ರೈ ಪುತ್ತೂರು
ನಿಟ್ಟೂರು ಸುಂದರ ಶೆಟ್ಟಿ, ಮಹೇಶ್ ಡಿ. ಶೆಟ್ಟಿ ಪ್ರಶಸ್ತಿ- ಸುದರ್ಶನ ವಿ. ಶೆಟ್ಟಿ ಪೊಳಲಿ
ಪೊ.ಬಿ.ವಿ. ಆಚಾರ್ಯ ಪ್ರಶಸ್ತಿ- ನಾರಾಯಣ ಪೂಜಾರಿ ಬ್ರಹ್ಮಾವರ
ಭಾಗವತ ನಾರ್ಣಪ್ಪ ಉಪ್ಪೂರು ಪ್ರಶಸ್ತಿ- ಕೆ.ಜಿ. ರಾಮ ರಾವ್ ಪರಪ್ಪೆಮನೆ, ಸಾಗರ
ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್, ಭಾಗವತ ವಾದಿರಾಜ ಹೆಬ್ಬಾರ್ ಪ್ರಶಸ್ತಿ- ಪೆರುವೋಡಿ ನಾರಾಯಣ ಭಟ್ ಮಳಿಗದ್ದೆ ಕಾಸರಗೋಡು
ಶಿರಿಯಾರ ಮಂಜು ನಾಯ್ಕ್ ಪ್ರಶಸ್ತಿ- ಆರ್ಗೋಡು ಮೋಹನದಾಸ ಶೆಣೈ ಕುಂದಾಪುರ
ಕೋಟ ವೈಕುಂಠ ಪ್ರಶಸ್ತಿ- ರಂಜಾಳ ರಾಮಕೃಷ್ಣ ರಾವ್ ಬೆಳ್ಳಾರೆ ಸುಳ್ಯ
ಪೆರ್ಲ ಕೃಷ್ಣ ಭಟ್ ಪ್ರಶಸ್ತಿ- ಹಂದಲಸು ಲಕ್ಷ್ಮೀನಾರಾಯಣ ಶಿವಮೊಗ್ಗ
ಬಿ. ಜಗಜ್ಜೀವನ್ ದಾಸ್ ಶೆಟ್ಟಿ ಪ್ರಶಸ್ತಿ- ನಾಗೇಶ ಗಾಣಿಗ ಕೋಣ್ಕಿ ಕುಂದಾಪುರ
ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ- ಮಹಾದೇವ ಹೆಗಡೆ ಕಪ್ಪೆಕರೆ ಹೊನ್ನಾವರ
ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ- ವಾಸುದೇವ ವಿಷ್ಣು ಭಟ್ ಹೊನ್ನಾವರ
ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ- ಗೋಪಾಲಕೃಷ್ಣಯ್ಯ ಎಚ್.ಎಸ್. ಶೃಂಗೇರಿ
ಐರೋಡಿ ರಾಮ ಗಾಣಿಗ ಪ್ರಶಸ್ತಿ- ಕೊರಗಪ್ಪ ನಾಯ್ಕ ಕಾಸರಗೋಡು
ಪ್ರಭಾವತಿ ವಿ. ಶೆಣೈ, ಯು. ವಿಶ್ವನಾಥ ಶೆಣೈ ಪ್ರಶಸ್ತಿ- ಸದಾನಂದ ಮದ್ಲೆಗಾರ ಕೂಡ್ಲು ಕಾಸರಗೋಡು
ಯಕ್ಷಚೇತನ ಪ್ರಶಸ್ತಿ- ಬನ್ನಂಜೆ ನಾರಾಯಣ ಉಡುಪಿ.
ಕೆ. ವಿಶ್ವಜ್ಞ ಶೆಟ್ಟಿ ಪ್ರಶಸ್ತಿ- ಸುಕ್ರಪ್ಪ ನಾಯ್ಕ ಬಾಡ ಕುಮಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

