'ದೀಪಾವಳಿ ಮನದೊಳಗಿನ ಕತ್ತಲೆ ಹೋಗಲಾಡಿಸುವ ಅರ್ಥಪೂರ್ಣ ಹಬ್ಬ'
ಉಡುಪಿ: ದೀಪಾವಳಿಯ ಬೆಳಕು ಮನೆಯೊಳಗಿನ ಕತ್ತಲನ್ನು ಮಾತ್ರವಲ್ಲ ಮನದೊಳಗಿನ ಕತ್ತಲೆಯನ್ನೂ ಹೋಗಲಾಡಿಸುವ ಅರ್ಥಪೂರ್ಣ ಹಬ್ಬವಾಗಿದೆ ಎಂದು ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ನುಡಿದರು.
ಅವರು ಇಲ್ಲಿನ ಶೋಕಮಾತಾ ಇಗರ್ಜಿಯ ಆವರಣದಲ್ಲಿ ಧರ್ಮಪ್ರಾಂತ್ಯದ ಸೌಹಾರ್ದ ಸಮಿತಿ ಆಶ್ರಯದಲ್ಲಿ ಬುಧವಾರ ಜರುಗಿದ ಸರ್ವಧರ್ಮ ದೀಪಾವಳಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಣಿಕ ಸುಖಕ್ಕಾಗಿ ಕೆಲವರು ಮೃಗಗಳಂತೆ ವರ್ತಿಸುತ್ತಾರೆ. ಅವರು ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿರಬಹುದು, ಆದರೆ ಅವರೂ ಮಾನವರು, ಮಾನವತೆಯನ್ನು ಮರೆತಿರುವ ಅವರಲ್ಲಿಯೂ ಸಾತ್ವಿಕ ಗುಣವನ್ನು ಮೂಡಿಸುವ ಕೆಲಸವಾಗಬೇಕು, ಅದಕ್ಕಾಗಿ ಸೌಹಾರ್ದಯುತ ಪರಿಸರದಲ್ಲಿ ಆಚರಣೆಗಳು ನಡೆಯಬೇಕು ಎಂದರು.
ಶುಭ ಸಂದೇಶ ನೀಡಿದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮಾತನಾಡಿ ಭಗವಂತ ಸರ್ವಧರ್ಮದವರಿಗೂ ಒಬ್ಬನೇ, ಆತನ ಮೇಲಿರುವ ಭಕ್ತಿಗೆ ಸರ್ವ ಧರ್ಮದವರನ್ನು ಒಗ್ಗೂಡಿಸುವ ಶಕ್ತಿ ಇದೆ. ದೇವ ಪ್ರೇಮದಿಂದಷ್ಟೇ ಮಾನವ ಸಮಾಜದ ಕಲ್ಯಾಣ ಸಾಧ್ಯ ಎಂದವರು ಹೇಳಿದರು.
ಉಡುಪಿಯ ಸಿ.ಎಸ್.ಬಿ. ಜ್ಯುಬಿಲಿ ಚರ್ಚಿನ ವಲಯ ಅಧ್ಯಕ್ಷ ಗೋಲ್ಡಿನ್ ಬಂಗೇರ, ಉದ್ಯಾವರ ಜಾಮೀಯ ಸಮೀದಿಯ ಮೌಲನಾ ಅಬ್ದುಲ್ ರಶೀದ್ ರೆಹಮಾನಿಯಾ, ಜಿಲ್ಲಾ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ರೆಸ್ಲಿ ಕರ್ನೇಲಿಯೋ, ಫಾ. ವಿಲಿಯಂ ಮಾರ್ಟೀಸ್, ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಮತ್ತಿತರರು ಇದ್ದರು.
ಶೋಕಮಾತಾ ಇರ್ಜಿಯ ಪ್ರಧಾನ ಧರ್ಮಗುರು ವಂ. ಫ್ರೆಡ್ ಮಸ್ಕರೇನಸ್ ಸ್ವಾಗತಿಸಿದರು, ಎನ್.ಎಂ. ಹೆಗಡೆ ನಿರೂಪಿಸಿ, ಸೌಹಾರ್ದ ಸಮಿತಿಯ ಸಂಚಾಲಕ ಆಲ್ಫೋನ್ಸ್ ಡಿಕೋಸ್ಟಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

