ಉಡುಪಿ

ಸಾವಿರಾರು ಮೌಲ್ಯದ ಸೊತ್ತು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರು

Published On :

ಉಡುಪಿ: ಮಣಿಪಾಲ ಠಾಣಾ ವ್ಯಾಪ್ತಿಯ ಮಣಿಪಾಲ ವಿವಿಯ ಎಂ.ಐ.ಟಿ ವಿದ್ಯಾರ್ಥಿಗಳು ಆಟೋದಲ್ಲಿ ಮರೆತು ಬಿಟ್ಟು ಹೋದ ಸಾವಿರಾರು ರುಪಾಯಿ ಮೌಲ್ಯದ ಸೊತ್ತುಗಳನ್ನು ಆಟೋ ಚಾಲಕರು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಎಂಐಟಿಯ ವಿದ್ಯಾರ್ಥಿಗಳಾದ ಗ್ರಹಾಂ ರೊಡ್ರಿಗಸ್ ಅವರ ರು. 40,000 ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್- 4 ಮೊಬೈಲ್, ಹಸಿಬ್ ಅಲೊಕ್ ಅವರು ರು. 35,000 ಮೌಲ್ಯದ ಲೆನೆವೊ ಲ್ಯಾಪ್‌ಟಾಪ್‌ಗಳನ್ನು ಮಣಿಪಾಲದಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ಮರೆತು ಬಿಟ್ಟು ಹೋಗಿದ್ದು, ಈ ಸೊತ್ತುಗಳನ್ನು ಆಯಾ ಆಟೋ ರಿಕ್ಷಾಗಳ ಚಾಲಕರಾದ ಹರೀಶ್ ಪೂಜಾರಿ ಮತ್ತು ಆನಂದ ಪೂಜಾರಿ ಅವರು ಮಣಿಪಾಲ ಪೊಲೀಸ್  ಠಾಣೆಗೆ ಒಪ್ಪಿಸಿದ್ದರು.
ಅದೇ ರೀತಿ ವ್ಯವಹಾರಸ್ಥರಾದ ಐಮೊರೆಶ್ ಕುಮಾರ್ ಪಾಂಡೆ  ಅವರ ರು. 21,000 ನಗದು ಹಾಗೂ ಬ್ಯಾಂಕ್ ದಾಖಲಾತಿಗಳಿದ್ದ ಪರ್ಸನ್ನು ಲಕ್ಷ್ಮಣ ಪೂಜಾರಿ ಎಂಬವರ ಆಟೋದಲ್ಲಿ ಬಿಟ್ಟು ಹೋಗಿದ್ದು ಅದನ್ನೂ ಠಾಣೆಗೆ ಒಪ್ಪಿಸಲಾಗಿತ್ತು.
ನಂತರ ಈ ಸೊತ್ತುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಅವರ ಮೂಲಕ ಸಂಬಂಧಿತ ಸೊತ್ತುಗಳ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಆಟೋ ಚಾಲಕರ ಈ ಪ್ರಾಮಾಣಿಕತೆಗೆ ಡಾ. ಬೋರಲಿಂಗಯ್ಯ ಅವರು ಮೆಚ್ಟುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಣಿಪಾಲ ಆಟೋ ಚಾಲಕ ಮತ್ತು ಮಾಲೀಕರ ಅಸೋಸಿಯೆಶನ್ ಯುನಿಯನ್‌ನ ಗೌರವ ಅಧ್ಯಕ್ಷ ರಮೇಶ್ ಕಾಂಚನ್, ಅಧ್ಯಕ್ಷ ವಿಜಯ ಪುತ್ರನ್, ಉಪಾಧ್ಯಕ್ಷ ಭರತ್ ತಿಂಗಳಾಯ, ಕಾರ್ಯದರ್ಶಿ ಗಣೇಶ ಪ್ರಭು, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.