ಪಂಚವರ್ಣದಿಂದ ಸದ್ಭಾವನಾ ಸಮಾರಂಭ
ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲದ ವತಿಯಿಂದ ರಾಜ್ಯೋತ್ಸವ ಅಂಗವಾಗಿ ಸದ್ಭಾವನ ಎಂಬ ಕಾರ್ಯಕ್ರಮವನ್ನು ಕೋಟ ವರುಣ ತೀರ್ಥ ಕೆರೆಯ ಪರಿಸರದಲ್ಲಿ ನಡೆಸಲಾಯಿತು. ಉದ್ಯಮಿ ವಿಜಯ ಶ್ರೀಯಾನ್ ಕೋಟ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲದ ಅಧ್ಯಕ್ಷ ರಾಘವೇಂದ್ರ ಗಾಣಿಗ ಕೋಟ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಪ್ರ.ದ. ಕಾಲೇಜಿನ ಕನ್ನಡ ಪ್ರಾಧ್ಯಪಕ ಅನಿಲ್ ಕುಮಾರ್ ಆಶಯ ಭಾಷಣ ಮಾಡುತ್ತಾ, ಕನ್ನಡ ಭಾಷೆ, ಸಾಹಿತ್ಯಗಳ ಉಳಿವಿಗೆ ಕುಂದಗನ್ನಡದ ಕೊಡುಗೆ ಅನನ್ಯವಾಗಿದ್ದು, ಕುಂದಗನ್ನಡವನ್ನು ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಒಂದು ಅಧ್ಯಯವನ್ನಾಗಿ ಸೇರಿಸಬೇಕಾದ ಅಗತ್ಯತೆ ಇದೆ ಎಂದರು.
ಯಕ್ಷಗಾನ ಕಲಾವಿದ ಕೋಟ ಸುರೇಶ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಇಲ್ಲಿನ ಕೋಣಿಯ ಮಾನಸ ಜ್ಯೋತಿ ಸಂಸ್ಥೆಯ ಮುಖ್ಯಸ್ಥೆ ಸಮಾಜ ಸೇವಕಿ ನೆದರ್ಲ್ಯಾಂಡ್ ಮೂಲದ ಮಾರ್ಟಿಜ್ಜ್ವಾನ್ ಡೆನ್ಬ್ಯಾಂಡ್ ಮತ್ತು ಶೆಕ್ಷಣಿಕ ಪ್ರತಿಭೆ ಅರ್ಚನಾ ಅವರನ್ನು ಗೌರವಿಸಲಾಯಿತು.
ಉದ್ಯಮಿ ಆನಂದ್ ಸಿ. ಕುಂದರ್ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಮುನಿಯಾಲು ಉದಯ ಶೆಟ್ಟಿ, ಜಯರಾಜ ವಿ. ಶೆಟ್ಟಿ, ತಾಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಮಂಡಲದ ಗೌರವಾಧ್ಯಕ್ಷ ವೆಂಕಟೇಶ್ ಪ್ರಭು, ನಿಕಟಪೂರ್ವಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ ಉಪಸ್ಥಿತರಿದ್ದರು.
ಚಂದ್ರ ಆಚಾರ್ ಕೋಟ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಕೋಟ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಕಾರ್ಕಡ ನಿರೂಪಿಸಿ, ಅಜಿತ್ ಆಚಾರ್ ವಂದಿಸಿದರು.
ಉಡುಪಿ: ರಕ್ತದಾನ ಶಿಬಿರ
ಉಡುಪಿ: ರಕ್ತದಾನ ಮಾಡುವ ಅಭ್ಯಾಸ ಉಳ್ಳವರು ಉತ್ತಮ ಆರೋಗ್ಯವನ್ನು ಗಳಿಸುವುದಲ್ಲದೆ, ಬೇರೆಯವರ ಜೀವವನ್ನು ಉಳಿಸುವ ಪುಣ್ಯಕ್ಕೂ ಭಾಜನರಾಗುತ್ತಾರೆ. ಸರ್ವ ವಿಧದ ದಾನಗಳಲ್ಲೂ ರಕ್ತದಾನ ಶ್ರೇಷ್ಠ ದಾನವೆಂದು ಶಾಸಕ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ವೈಕುಂಠ ಬಾಳಿಗ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಆನಂದ ನಾಯಕ್, ಉಡುಪಿ ನಗರಸಭೆ ಸದಸ್ಯ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಾಂತರಾಂ ಸಾಲ್ವಂಕರ್, ಎನ್ಎಸ್ಎಸ್ ಯೋಜನಾಧಿಕಾರಿ ಸಿಸಿಲಿಯಾ ಡಿಸೋಜ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

