ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿ: ಶ್ರೀ ಕಷ್ಣ ಮಠದ ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಶ್ರೀ ಕನಕ ಜಯಂತಿ ಪ್ರಯುಕ್ತ ಬುಧವಾರ ಶ್ರೀಕಷ್ಣ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದ ಅಂಗವಾಗಿ ಕನಕದಾಸರು ರಚಿಸಿದ ಕೀರ್ತನೆಗಳ ಗಾಯನ ಸ್ಪರ್ಧೆ ಹಾಗೂ ಕನಕದಾಸರ ಜೀವನ ಚರಿತ್ರೆ ಮತ್ತು ಕೃತಿಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಾದವರಿಗೆ ಶ್ರೀಕನಕ ಮಂಟಪದಲ್ಲಿ ಪರ್ಯಾಯ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಬಹುಮಾನಗಳನ್ನು ವಿತರಿಸಿದರು.
ಬಳಿಕ ಅನುಗ್ರಹ ಸಂದೇಶ ನೀಡಿದ ಅವರು, ಕನಕದಾಸರ ಬಗ್ಗೆ ತಿಳಿಯಬೇಕಾದರೆ ಅವರ ಕೃತಿಗಳನ್ನು ಅಧ್ಯಯನ ಮಾಡಬೇಕು. ಶ್ರೀವಾದಿರಾಜರೊಂದಿಗೆ ಅನ್ಯೋನ್ಯವಾಗಿದ್ದ ಕನಕದಾಸರು, ವಾದಿರಾಜದ ಶ್ಲೋಕಗಳಿಗೆ ಸರಳವಾದ ಗ್ರಾಮ್ಯ ಭಾಷೆಯಲ್ಲಿ ಅರ್ಥವನ್ನು ಹೇಳುತ್ತಿದ್ದರು. ಕನಕರ ಕೃತಿಗಳನ್ನು ಗಮನಿಸಿದಾಗ ಅವರನ್ನು ವೈಷ್ಣವರು ಎಂದೇ ಹೇಳಬಹುದು. ಅವರ ಕೀರ್ತನೆ, ಕೃತಿಗಳ ಅಧ್ಯಯನ ಮಾಡುವ ಮೂಲಕ ಕನಕದಾಸರನ್ನು ಪೂಜಿಸೋಣ ಎಂದರು.
ವೇದಿಕೆಯಲ್ಲಿ ಜಿಲ್ಲಾ ಶ್ರೀಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಮೇಟಿ ಮುದಿಯಪ್ಪ, ಉಪಾಧ್ಯಕ್ಷ ಸದಾನಂದ ಕಾಪು, ಕುರುಬ ಸಮಾಜದ ಮುಖಂಡರಾದ ಜಗದೀಶ, ಪುಟ್ಟೆಗೌಡ ಇದ್ದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರನ್ನು ಮಠದ ವತಿಯಿಂದ ಗೌರವಿಸಲಾಯಿತು. ಬನ್ನಂಜೆ ಗೋಪಾಲಕಷ್ಣ ಉಪಾಧ್ಯಾಯ ಅವರು ಕನಕದಾಸ ಮಹಿಮೆಗಳನ್ನು ವಿವರಿಸಿದರು. ಬೆಳಗ್ಗೆ ಸ್ಪರ್ಧಾ ಕಾರ್ಯಕ್ರಮಗಳನ್ನು ಕನಕದಾಸರ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರ್ಯಾಯ ಶ್ರೀಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕನಕದಾಸರಿಗೆ ಸಂಬಂಧಪಟ್ಟು ವಿವಿಧ ಸ್ಪರ್ಧೆಗಳು ನಡೆದವು. ಸಂಜೆ ರಥಬೀದಿಯಲ್ಲಿ ಕನಕದಾಸರ ಭಾವಚಿತ್ರ ಹಾಗೂ ಕೃತಿಗಳ ಮೆರವಣಿಗೆ ನಡೆಯಿತು. ರಾತ್ರಿ ಭರತನಾಟ್ಯ ಕಾರ್ಯಕ್ರಮ ಜರಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

