ಉಡುಪಿ: ಲಕ್ಷ್ಮೀವೆಂಕಟೇಶ ದೇವಳದಲ್ಲಿ ದೀಪೋತ್ಸವ
ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವವು ನ.19 ಮತ್ತು 20ರಂದು ವೈಭವದಿಂದ ಜರುಗಿತು. ಈ ಸಂದರ್ಭದಲ್ಲಿ ಶ್ರೀಲಕ್ಷ್ಮೀವೆಂಕಟೇಶ ದೇವರಿಗೆ ವಿಶೇಷ ಅಲಂಕಾರ, ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗಿತ್ತು.
ಉಭಯ ದಿನಗಳಂದು ಪಲ್ಲಕ್ಕಿಯಲ್ಲಿ ಶ್ರೀದೇವರ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಶ್ರೀದೇವರಿಗೆ ಹಣ್ಣುಕಾಯಿ ಆರತಿಯನ್ನು ನೀಡಿ ಪ್ರಸಾದ ಸ್ವೀಕರಿಸಿದರು. ಪೇಟೆ ಉತ್ಸವದಲ್ಲಿ ಅಲ್ಲಲ್ಲಿ ಕಟ್ಟೆಪೂಜೆ ಮತ್ತು ಲಾಲಕಿ ಉತ್ಸವ ನಡೆಯಿತು. ಈ ಪ್ರಯುಕ್ತ ಊರಿನ ಪ್ರಮುಖ ಬೀದಿಗಳಲ್ಲಿ ಹಣತೆ ದೀಪಗಳಿಂದ ಮತ್ತು ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ದೇವಳದ ಪುಷ್ಕರಣಿಯಲ್ಲಿ ಕೆರೆ ದೀಪೋತ್ಸವ, ತೆಪ್ಪೋತ್ಸವ ಹಾಗೂ ಕಟ್ಟೆಪೂಜೆ ಜರುಗಿತು. ಬೀಡಿನಗುಡ್ಡೆಯಲ್ಲಿ ವಿಶೇಷ ಭಕ್ತಿರಸಮಂಜರಿ ಕಾರ್ಯಕ್ರಮವನ್ನು ರವೀಂದ್ರ ಪ್ರಭು ಮೂಲ್ಕಿ ತಂಡದವರು ನಡೆಸಿಕೊಟ್ಟರು. ದೇವಳದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈ, ದೇವದಾಸ್ ಶಾನುಭಾಗ್, ಪುಂಡಲೀಕ ಕಾಮತ್, ರೋಹಿತಾಕ್ಷ ಪಡಿಯಾರ್, ದಯಾಘನ್ ಭಟ್, ಭಾಸ್ಕರ ಶೆಣೈ, ಸತೀಶ್ ಕಿಣಿ, ಶ್ಯಾಂಪ್ರಸಾದ್ ಕುಡ್ವ, ಸುಬ್ಬಣ್ಣ ಪೈ ಮತ್ತು ವಿಶಾಲ್ ಶೆಣೈ ಈ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
--
ಕಲ್ಯಾಣಪುರ: ಲೋಕ ಕಲ್ಯಾಣಾರ್ಥ ಗಾಯತ್ರಿ ಹವನ
ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿರುವ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಗಾಯತ್ರಿ ಹವನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸ್ವಾಮೀಜಿ ಅವರು ಮಠದ ಶ್ರೀ ಭವಾನಿಶಂಕರ ದೇವರಿಗೆ ರುದ್ರಾಭಿಷೇಕ ಮಾಡಿದರು. ಗಾಯತ್ರಿ ಹವನದ ಪೂರ್ಣಾಹುತಿಯ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪಾಲ್ಗೊಂಡು ಮಹಾಮಂಗಳಾರತಿ ನೆರವೇರಿಸಿದರು. ಸಮಾರಂಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಕೆ. ಅನಂತಪದ್ಮನಾಭ ಕಿಣಿ, ಅರವಿಂದ ಬಾಳಿಗಾ, ಗಣಪತಿ ಭಟ್, ರಾಮಚಂದ್ರ ಭಟ್, ಜಯದೇವ ಭಟ್, ಸುಬ್ಬಣ್ಣ ಪೈ, ಕೆ. ತುಳಸೀದಾಸ್ ಕಿಣಿ, ಸೀತಾರಾಮ್ ಭಟ್, ಕಾಶೀನಾಥ್ ಭಟ್ ಹಾಗೂ ವಿಶ್ವನಾಥ ಶೆಣೈ ಮತ್ತು ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

